ವಾಟೆತ್ತಿಲ ಜಾಲು ಸುಬ್ರಹ್ಮಣ್ಯ ಷಷ್ಠಿ 13 ರಂದು(ನಾಳೆ)
0
ಡಿಸೆಂಬರ್ 11, 2018
ಉಪ್ಪಳ: ಬಾಯಾರುಪದವು ಸಮೀಪದ ವಾಟೆತ್ತಿಲ ಜಾಲು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ಷಷ್ಠಿ ಮಹೋತ್ಸವವು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಾಳೆ ಜರುಗಲಿದೆ. ಬೆಳಿಗ್ಗೆ ಗಣಪತಿ ಹವನ, ಪ್ರಾತಃಕಾಲ ಪೂಜೆ, ನವಕಾಭಿಷೇಕ, ಮಧ್ಯಾಹ್ನ ಪೂಜೆ, ದೀಪಾರಾಧನೆ, ಪ್ರಸಾದ ವಿತರಣೆ ನಂತರ ಅನ್ನ ಸಂತರ್ಪಣೆ ಕಾರ್ಯಕ್ರಮ ಜರುಗಲಿದೆ. ಸಾಯಂಕಾಲ ಸ್ಥಳೀಯ ಭಜನಾ ಸಂಘದ ವತಿಯಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ಷಷ್ಠಿ ಮಹೋತ್ಸವ ಸಂದರ್ಭ ಎರ್ನಾಕುಳಂ-ಕೊಚ್ಚಿ ಶ್ರೀ ದುರ್ಗಾದೇವಿ ಭಜನಾ ಮಂಡಳಿ ವತಿಯಿಂದ ಬೆಳಗ್ಗೆ 10 ರಿಂದ 12.30 ತನಕ ಭಜನಾ ಕಾರ್ಯಕ್ರಮ ಏರ್ಪಡಲಿದೆ. ಸನ್ನಿಧಿಯಲ್ಲಿ ನಡೆಯುವ ಪುಣ್ಯಕಾರ್ಯದಲ್ಲಿ ಎಲ್ಲ ಭಕ್ತಾಭಿಮಾನಿಗಳು ಭಾಗವಹಿಸಿ, ಸುಬ್ರಹ್ಮಣ್ಯ ಸ್ವಾಮಿ ಕೃಪೆಗೆ ಪಾತ್ರರಾಗಬೇಕೆಂದು ದೇವಸ್ಥಾನದ ಆಡಳಿತ ಮೊಕ್ತೇಸರರು ತಿಳಿಸಿದ್ದಾರೆ.




