ತಲೆಹೊರೆ ಕಾರ್ಮಿಕನಿಗೆ ಸೇವಾ ನಿವೃತ್ತಿ-ಬೀಳ್ಕೊಡುಗೆ
0
ಡಿಸೆಂಬರ್ 11, 2018
ಬದಿಯಡ್ಕ: ಕಳೆದ 15 ವರ್ಷಗಳಿಂದ ಬದಿಯಡ್ಕದಲ್ಲಿ ತಲೆಹೊರೆ ಕಾರ್ಮಿಕರಾಗಿ ದುಡಿದು ಇದೀಗ ಸೇವೆಯಿಂದ ನಿವೃತ್ತಿಯನ್ನು ಪಡೆಯುತ್ತಿರುವ ಸಿಐಟಿಯು ಸಂಘಟನೆಯ ಕಾಡಮನೆ ನಿವಾಸಿ ನಾರಾಯಣರಿಗೆ ಬೀಳ್ಕೊಡುಗೆ ಸಮಾರಂಭವು ನಡೆಯಿತು.
ಬದಿಯಡ್ಕ ವ್ಯಾಪಾರ ಭವನದಲ್ಲಿ ಸೋಮವಾರ ನಡೆದ ಸಮಾರಂಭದಲ್ಲಿ ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಕೆ.ವಿ. ಕುಂಞÂಕೃಷ್ಣನ್ ಸಮಾರಂಭವನ್ನು ಉದ್ಘಾಟಿಸಿದರು. ಅವರು ಮಾತನಾಡಿ ಮ್ಹಾಲಕರು ಹಾಗೂ ಕಾರ್ಮಿಕರು ಸಹಜೀವಿಗಳಾಗಿ ಕೇರಳ ರಾಜ್ಯದಲ್ಲಿ ದುಡಿಯುತ್ತಿದ್ದಾರೆ. ಉತ್ಪಾದನಾ ಕೇಂದ್ರದಿಂದ ಸಾಮಾಗ್ರಿಗಳನ್ನು ಗ್ರಾಹಕರಿಗೆ ತಲುಪಿಸುವಲ್ಲಿ ಕೊಂಡಿಯಾಗಿ ದುಡಿಯುವ ಕಾರ್ಮಿಕರು ದೇಶದ ಸಂಪತ್ತು ಎಂದರು.
ಸಿಐಟಿಯು ಬದಿಯಡ್ಕ ಘಟಕದ ಅಧ್ಯಕ್ಷ ಕೃಷ್ಣ ಬದಿಯಡ್ಕ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಕೇರಳ ಹೆಡ್ ಲೋಡ್ ವರ್ಕರ್ಸ್ ವೆಲ್ಫೇರ್ ಬೋರ್ಡ್‍ನ ಫಿಲೋಮಿನಾ ಮ್ಯಾಥ್ಯು, ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿಯ ನೇತಾರರಾದ ಎಸ್.ಎನ್. ಮಯ್ಯ ಬದಿಯಡ್ಕ, ಜ್ಞಾನದೇವ ಶೆಣೈ ಬದಿಯಡ್ಕ, ಬಿಎಂಎಸ್ ಜಿಲ್ಲಾ ಜೊತೆಕಾರ್ಯದರ್ಶಿ ರವಿ ಬದಿಯಡ್ಕ, ಸಿಪಿಎಂ ಲೋಕಲ್ ಕಾರ್ಯದರ್ಶಿ ಜಗನ್ನಾಥ ಶೆಟ್ಟಿ, ಸಿಐಟಿಯು ಕುಂಬಳೆ ಏರಿಯಾ ಕಾರ್ಯದರ್ಶಿ ಸುಬ್ಬಣ್ಣ ಆಳ್ವ, ಜಿಲ್ಲಾ ಸಮಿತಿ ಸದಸ್ಯ ಕೇಶವ ಕುಂಬಳೆ ಮಾತನಾಡಿದರು. ವ್ಯಾಪಾರಿಗಳಾದ ಪಿ.ಕೆ. ಅಬ್ದುಲ್ಲ, ಬದ್ರಿಯಾ ಮುಹಮ್ಮದ್, ಸಿದ್ದಿವಿನಾಯಕ ಟ್ರೇಡರ್ಸ್‍ನ ನೌಕರವೃಂದ, ಸಿಐಟಿಯು ಹಾಗೂ ಬಿಎಂಎಸ್ ತಲೆಹೊರೆ ಕಾರ್ಮಿಕರು ಉಪಸ್ಥಿತರಿದ್ದು ನಿವೃತ್ತರಾಗುತ್ತಿರುವ ನಾರಾಯಣರನ್ನು ಸನ್ಮಾನಿಸಿ ಬೀಳ್ಕೊಟ್ಟರು. ನಾರಾಯಣರ ಕುಟುಂಬಸ್ಥರು ಉಪಸ್ಥಿತರಿದ್ದರು. ಜಯಪ್ರಕಾಶ್ ಸ್ವಾಗತಿಸಿ, ಅನಿಲ್ ಕುಮಾರ್ ವಂದಿಸಿದರು.




