ಕುರುಡಪದವಿನಲ್ಲಿ ಚಿತ್ರ ರಚನಾ ಸ್ಪರ್ಧೆ
0
ಡಿಸೆಂಬರ್ 11, 2018
ಉಪ್ಪಳ: ಪೈವಳಿಕೆ ಸಮೀಪದ ಕುರುಡಪದವಿನ ಗೆಳೆಯರ ಬಳಗ ಗ್ರಂಥಾಲಯದಲ್ಲಿ ಇತ್ತೀಚೆಗೆ ಚಿತ್ರ ರಚನಾ ಸ್ಪರ್ಧೆ ನಡೆಯಿತು. ಕಾರ್ಯಕ್ರಮವನ್ನು ಮಂಜೇಶ್ವರ ತಾಲೂಕು ಲೈಬ್ರರಿ ಕೌನ್ಸಿಲ್ ಸದಸ್ಯೆ ಶ್ರೀಕುಮಾರಿ ಟೀಚರ್ ಉದ್ಘಾಟಿಸಿ ಶುಭಹಾರೈಸಿದರು.
ತಾಲೂಕು ವ್ಯಾಪ್ತಿಯ ವಿವಿಧ ಬಾಲವೇದಿಯ ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಿದರು.





