HEALTH TIPS

ಸೃಜನಶೀಲ ಸೃಷ್ಟಿ ಸಾಧ್ಯವಾದರೆ ಕವಿತ್ವ ಸಿದ್ದಿಸುತ್ತದೆ-ಶ್ರೀಕೃಷ್ಣಯ್ಯ ಅನಂತಪುರ ಸರಸ ಬಿ.ಕೃಷ್ಣ ಕಮ್ಮರಡಿ ಅವರ ಕಥಾ ಸಂಕಲನ ಬಿಡುಗಡೆಗೊಳಿಸಿ ಅಭಿಮತ

ಕುಂಬಳೆ: ಸಾಹಿತ್ಯ ಬರಹಗಳ ಪರಿಣಾಮವಾಗಿ ಉಂಟಾಗುವ ರಸಸೃಷ್ಟಿಯು ಕೃತಾರ್ಥತೆಯನ್ನು ಮೂಡಿಸುತ್ತದೆ. ಕಲೆ, ಸಾಹಿತ್ಯಗಳ ರಚಿ ಇಲ್ಲದ ಬದುಕು ಮರಭೂಮಿಯಂತೆ ಕಾದು ಹಬೆಯಾಡುತ್ತದೆ. ಸೃಜನಶೀಲ ಸೃಷ್ಟಿಗೆ ಸಾಧ್ಯವಾದಾಗ ಕವಿತ್ವ ಸಿದ್ದಿಸುತ್ತದೆ ಎಂದು ಹಿರಿಯ ಕವಿ, ವಿಮರ್ಶಕ ಶ್ರೀಕೃಷ್ಣಯ್ಯ ಅನಂತಪುರ ಅಭಿಪ್ರಾಯ ವ್ಯಕ್ತಪಡಿಸಿದರು. ಖ್ಯಾತ ಕಥೆಗಾರ್ತಿ ಸರಸ ಬಿ.ಕೃಷ್ಣ ಕಮ್ಮರಡಿ ಅವರ ಆಯ್ದ ಸಣ್ಣ ಕಥೆಗಳ ಚೊಚ್ಚಲ ಸಂಕಲನ "ನಮ್ಮ ನಿಮ್ಮೊಳಗೆ ಹೀಗೊಬ್ಬಳು" ಕೃತಿಯನ್ನು ಭಾನುವಾರ ಸಂಜೆ ಕುಂಬಳೆ ಸಮೀಪದ ಶೆಟ್ಟಿಗದ್ದೆ ವೈಷ್ಣವಿ ನಿವಾಸದಲ್ಲಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಪ್ರತಿಯೊಬ್ಬರಿಗೂ ಆಂತರಂಗಿಕ ಭಾವಗಳಿದ್ದು, ಆದರೆ ಎಲ್ಲರಿಗೂ ಬರಹ ಸಿದ್ದಿಸುವುದಿಲ್ಲ. ಕವಿ, ಸಾಹಿತಿ,ಕಲಾವಿದನಾಗುವುದು ತಪಸ್ಸಿನ ಫಲವಾಗಿದ್ದು, ಕಲಾತ್ಮಕತೆ ಸಿದ್ದಿಸಿದರೆ ಮಾತ್ರ ಯಶಸ್ವಿಯಾಗಲು ಸಾಧ್ಯ ಎಂದು ಅವರು ತಿಳಿಸಿದರು. ಬರಹಗಾರನಿಗಿಂತ ಅವರು ಆಯ್ದು ಪ್ರಕಟಿಸುವ ಕೃತಿಗಳು ಹೆಚ್ಚು ಪ್ರಾಮುಖ್ಯತೆಗೊಳಗಾದಾಗ ಪರಿಣಾಮಕಾರಿಯಾಗಿ ಓದುಗನಿಗೆ ಮುದ ನೀಡುತ್ತದೆ.ಪ್ರಗತಿಶೀಲ ಸಣ್ಣ ಕಥೆಗಳು ಇಂದು ಅಗತ್ಯವಿದ್ದು, ಈ ನಿಟ್ಟಿನ ಸಮಗ್ರ ಚಿಂತನೆ ಆಗಬೇಕು ಎಂದು ಅವರು ಕರೆನೀಡಿದರು. ಕಲೆ, ಸಾಹಿತ್ಯಗಳಿಂದ ಪರಿಪುಷ್ಟಗೊಂಡ ಸಮಾಜ ಅತ್ಯಪೂರ್ವ ಸತ್ಯ-ತತ್ವನಿಷ್ಠೆಯ,ಸಮತೋಲನದ ಸಮಷ್ಠಿಯ ವರ್ತಮಾನವಾಗಿ ಬೆಳೆಯಬಲ್ಲದು ಎಂದು ತಿಳಿಸಿದರು. ಹೊಸ ತಲೆಮಾರು ಕ್ರಿಯಾತ್ಮ ಸಂಕಲ್ಪ ಶಕ್ತಿಯೊಂದಿಗೆ ನವ ಸಮಾಜ ನಿರ್ಮಾಣದಲ್ಲಿ ಸಾಹಿತ್ಯ-ಬರಗಳ ಪ್ರೇರಣೆಗೊಳಗಾಗಿ ಬಲವಾದ ನೆಲೆಗಟ್ಟಿನ ವ್ಯವಸ್ಥೆಗಳು ಸೃಷ್ಟಿಯಾಗಬೇಕು. ಸರಸ ಅವರ ಅಂತರ್ಮುಖಿ ಚಿಂತನೆಯ ಭೀಮಕಾಯದ ಕಿರು ಬರಹಗಳು ಸೃಜನಾತ್ಮಕವಾಗಿ ಸಾಹಿತ್ಯ ಪ್ರಪಂಚದ ಬೆರಗು ಎಂದು ತಿಳಿಸಿದರು. ಮಧುರೈ ಕಾಮರಾಜ ವಿವಿಯ ಕನ್ನಡ ವಿಭಾಗ ನಿವೃತ್ತ ಮುಖ್ಯಸ್ಥ ಡಾ.ಹರಿಕೃಷ್ಣ ಭರಣ್ಯ ಅವರು ಮುಖ್ಯ ಅತಿಥಿಗಳಾಗಿ ಉಪಸ್ಥಿರಿದ್ದು, ಕೃತಿಯ ಬಗ್ಗೆ ಮಾತನಾಡಿ, ಮಾನವೀಯ ಮೌಲ್ಯ, ಹೆನ್ಮಕ್ಕಳ ಮೊನೋಸ್ಥಿತಿ ಸಾರುವ ಪ್ರಯತ್ನಗಳಿಗೆ ಇನ್ನಷ್ಟು ಬಲನಿಡುವ ಬರಹಗಳು ಮೂಡಿಬರಲಿ. ಸಹನಾ ಸ್ವರೂಪರಾದ ಬರಹಗಾರರು ಸಾರ್ವಕಾಲಿಕ ಮೌಲ್ಯಗಳ ವೈಚಾರಿಕ ಬರಹಗಳ ಮೂಲಕ ತಮ್ಮದೇ ಕೊಡುಗೆ ನೀಡಿದ್ದಾರೆ ಎಂದು ತಿಳಿಸಿದರು. ಸರಸ ಅವರ ಸಣ್ಣಕತೆಗಳು ಬದುಕು-ಬವಣೆ, ನೋವು-ನಲಿವುಗಳ ಜೀವನಾನುಭವಗಳಿಂದ ಪರಿಪಕ್ವಗೊಂಡು ಗಮನ ಸೆಳೆಯುತ್ತದೆ ಎಂದು ತಿಳಿಸಿದರು. ನಿವೃತ್ತ ಪ್ರಾಧ್ಯಾಪಕ ಡಾ.ಎಸ್.ಬಿ.ಸುಳ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಹೃದಯ ಮನೋಸ್ಥಿತಿಯ ಕೌಶಲ್ಯಯುತ ಅಭಿವ್ಯಕ್ತಿತ್ವ ಸಾಹಿತ್ಯದ ಗುಣಮಟ್ಟವನ್ನು ಎತ್ತರಕ್ಕೇರಿಸುತ್ತದೆ ಎಂದು ತಿಳಿಸಿದರು. ಹಿರಿಯ ಲೇಖಕಿ,ಕಥೆಗಾರ್ತಿ ಸರಸ್ವತೀ ಶಂಕರ್ ಬೆಂಗಳೂರು, ವಿಜಯಾ ಸುಬ್ರಹ್ಮಣ್ಯ ನಾರಾಯಣಮಂಗಲ, ಡಾ.ಕೃಷ್ಣ ಭಟ್ ಕಮ್ಮರಡಿ ಉಪಸ್ಥಿತರಿದ್ದು ಶುಭಹಾರೈಸಿದರು. ಲೇಖಕಿ ಸರಸ ಡಿ.ಕೃಷ್ಣ ಕಮ್ಮರಡಿ ಸಂಕಲನದ ಬಗ್ಗೆ ಮಾತನಾಡಿ, ಈವರೆಗಿನ ಸಾಹಿತ್ಯ ಬರಹಗಳ ಬಗ್ಗೆ ಮಾಹಿತಿ ನೀಡಿದರು. ಸಮಾರಂಭವನ್ನು ಆಶಾ ಎಸ್.ಎನ್.ಭಟ್ ಹಾಗೂ ನಮ್ರತಾ ವಿಶ್ವಾಸ್ ಜಂಟಿಯಾಗಿ ದೀಪ ಬೆಳಗಿಸಿ ಉದ್ಘಾಟಿಸಿದರು. ಸುಧಾ ಭಟ್ ಪ್ರಾರ್ಥನಾಗೀತೆ ಹಾಡಿದರು. ವಿಜಯಲಕ್ಷ್ಮೀ ಸ್ವಾಗತಿಸಿ, ಗೀತಾ ವಂದಿಸಿದರು. ವಿದ್ಯಾರತ್ನ ಸುಬ್ರಹ್ಮಣ್ಯ ಕಾರ್ಯಕ್ರಮ ನಿರೂಪಿಸಿದರು. ಮೂರು ದಶಕಗಳಿಂದೀಚೆಗೆ ಕನ್ನಡ ಸಾಹಿತ್ಯ ಪ್ರಪಂಚದ ಸಣ್ಣಕಥೆಗಳು ಹಾಗೂ ನಗೆಬರಹಗಳಲ್ಲಿ ಗಮನಾರ್ಹವಾದ ಬರಹಗಳ ಮೂಲಕ ಗಮನ ಸೆಳೆದಿರುವ ಸರಸ ಬಿ.ಕಮ್ಮರಡಿ ಪ್ರಸ್ತುತ ಪತಿಯೊಂದಿಗೆ ಚಿಕ್ಕಮಗಳೂರಿನ ಕಮ್ಮರಡಿಯಲ್ಲಿ ವಾಸಿಸುತ್ತಿರುವ ಸದ್ಗøಹಿಣಿ. ಮೂಲತಃ ಕುಂಬಳೆ ಸಮೀಪದ ಎಡನಾಡು ದಿ.ಎಚ್.ವಿಷ್ಣು ಭಟ್-ದಿ. ಶಶಿಕಲಾದೇವಿ ದಂಪತಿಗಳ ಪುತ್ರಿಯಾದ ಇವರು ಭಾನುವಾರ ತನ್ನ ಮೊತ್ತಮೊದಲ 26 ಕಥೆಗಳ ಸಂಕಲನ ರೂಪದ ಪುಸ್ತಕವನ್ನು ಪಿತೃಶ್ರಾದ್ದದ ಸಂದರ್ಭ ಸಹೋದರ ಎಸ್,ಎನ್.ಭಟ್-ಆಶಾ ಎಸ್.ಎನ್.ಭಟ್ ಅವರ ಸ್ವಗೃಹದಲ್ಲಿ ಬಂಧು-ಮಿತ್ರ ಸಮಕ್ಷಮದಲ್ಲಿ ವಿಶಿಷ್ಟವಾಗಿ ಬಿಡುಗಡೆಗೊಳಿಸಲಾಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries