ಟೂರಿಸಂ ಬೋಟ್ ಟರ್ಮಿನಲ್ ಶೀಘ್ರ ಸಾಕಾರ
0
ಡಿಸೆಂಬರ್ 11, 2018
ಕಾಸರಗೋಡು: ಹಿನ್ನೀರ ಪ್ರವಾಸೋದ್ಯಮ ಅಭಿವೃದ್ಧಿಗೆ ಜಿಲ್ಲೆಯಲ್ಲಿ ವಿಪುಲ ಅವಕಾಶಗಳಿವೆ. ಜಿಲ್ಲೆಯ ಪ್ರಧಾನ ಹಿನ್ನೀರ ತಾಣವಾದ ತ್ರಿಕರಿಪುರ ಸಮೀಪದ ಕೋಟ್ಟಪ್ಪುರ ಮತ್ತು ಮಾವಿನಕಡಪ್ಪುರದಲ್ಲಿ ಟೂರಿಸಂ ಬೋಟ್ ಟರ್ಮಿನಲ್‍ಗಳು ನಿರ್ಮಾಣಗೊಳ್ಳಲಿವೆ.
ಎರಡೂ ಕಡೆಗಳಲ್ಲಿ ನಿರ್ಮಾಣ ಹೊಂದಲಿರುವ ಬೋಟ್ ಟರ್ಮಿನಲ್ ಯೋಜನೆಗೆ ಅನುಮತಿ ಅಭ್ಯವಾಗಿದೆ. ಕೋಟ್ಟಪ್ಪುರಲ್ಲಿ 8 ಕೋಟಿ ರೂ. ಖರ್ಚಿನಲ್ಲಿ ಟರ್ಮಿನಲ್ ನಿರ್ಮಾಣ ಹಾಗೂ ಮಾವಿನಕಡಪ್ಪುರದಲ್ಲಿ 3.26 ಕೋಟಿ ರೂ. ವೆಚ್ಚದಲ್ಲಿ ಬೋಟ್ ಹೌಸ್ ಟರ್ಮಿನಲ್ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ. ಎರಡೂ ಯೋಜನೆಗಳಿಗೆ ಗುತ್ತಿಗೆ ನೀಡಲಾಗಿದ್ದು, ಹೌಸ್ ಬೋಟ್ ಜೆಟ್ಟಿ ನಿರ್ಮಾಣಕ್ಕೆ 1 ಕೋಟಿ ರೂ. ವೆಚ್ಚ ಅಂದಾಜಿಸಲಾಗಿದೆ. ವರ್ಷದ ಹಿಂದೆ ಎರಡು ಯೋಜನೆಗಳಿಗೂ ರೂಪುರೇಶೆ ಸಿದ್ಧವಾಗಿತ್ತು.
ವಲಿಯಾಪರಂಬ ದ್ವೀಪದ ಸಮೀಪವಿರುವ ಮಾವಿಲಕಡಪ್ಪುರವು ಪ್ರವಾಸಿ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ಸಮೀಪವೆ ಹುರಿ ಹಗ್ಗ ನಿರ್ಮಾಣ ಕಾರ್ಖಾನೆ ಕಾರ್ಯಚರಿಸುತ್ತಿದೆ. ಪ್ರಥಮ ಹಂತದಲ್ಲಿ ಬೋಟ್ ಟರ್ಮಿನಲ್ ಹಾಗೂ ಪ್ರವಾಸಿಗರ ವಿಶ್ರಮ ಕೇಂದ್ರದ ನಿರ್ಮಾಣವಾಗಲಿದೆ ಎಂದು ಪ್ರವಾಸೋದ್ಯಮ ಇಲಾಖೆ ಅಧಿಕೃತರು ತಿಳಿಸಿದ್ದಾರೆ.





