ಎಳವೆಯಲ್ಲೇ ಮಕ್ಕಳಲ್ಲಿ ಆದರ್ಶ ಮಹಾಪುರುಷರ ಚಿಂತನೆಯನ್ನು ಬೆಳೆಸಿ
0
ಡಿಸೆಂಬರ್ 11, 2018
ಉಪ್ಪಳ: ಎಳವೆಯಲ್ಲೇ ಮಕ್ಕಳಿಗೆ ದೇಶ ಧರ್ಮಕ್ಕಾಗಿ ದುಡಿದ ಮಹಾಪುರುಷರ ಆದರ್ಶ ಚಿಂತನೆಯ ಶಿಕ್ಷಣವನ್ನು ನೀಡ ಬೇಕಾದುದು ತಾಯಂದಿರ ಕರ್ತವ್ಯ ಎಂದು ವಿಶ್ವಹಿಂದೂ ಪರಿಷತ್ ದುರ್ಗಾವಾಹಿನಿ ಮಂಗಳೂರು ವಿಭಾಗ ಸಂಯೋಜಕಿ ನ್ಯಾಯವಾದಿ ವಿದ್ಯಾ ಮಲ್ಯ ಹೇಳಿದರು.
ಉಪ್ಪಳ ಅಯ್ಯಪ್ಪ ಮಂದಿರದಲ್ಲಿ ನಿರಂತರ 52 ದಿನಗಳ ಕಾಲ ನಡೆಯುತ್ತಿರುವ ಅನ್ನದಾನದ ಸಂರ್ದದಲ್ಲಿ ಯುವ ಭಾರತಿ ಉಪ್ಪಳ ಮತ್ತು ನಿವೇದಿತಾ ಬಳಗ ಉಪ್ಪಳ ಇದರ ವತಿಯಿಂದ ನಡೆದ ಮಾತೃ ಸಂಗಮ, ಧಾರ್ಮಿಕ ಸತ್ಸಂಗ ಕಾರ್ಯಕ್ರಮದಲ್ಲಿ ಸುಸಂಸ್ಕøತ ಸಮಾಜ ನಿರ್ಮಾಣದಲ್ಲಿ ತಾಯಂದಿರ ಪಾತ್ರ ಎಂಬ ವಿಷಯದ ಬಗ್ಗೆ ಉಪನ್ಯಾಸವನ್ನು ನೀಡಿ ಮಾತನಾಡಿದರು.
ಕೇರಳ ದೇವರನಾಡು ಎಂಬ ಖ್ಯಾತಿವೆತ್ತ ನಾಡು. ದೇವರ ನಾಡಿನ ತಾಯಂದಿರು ದೇವತಾ ಸದೃಶರು.ಇಂತಹ ನಾಡಿನಲ್ಲಿ ಜನ್ಮತಾಳಬೇಕಾದರೆ ಪುಣ್ಯ ಸಂಪಾದಿಸಿರಬೇಕು ಎಂದರು. ಆಧುನಿಕ ಯುಗದಲ್ಲಿ ಧರ್ಮ, ಸಂಸ್ಕøತಿಗಳು ಅದ:ಪತನಕ್ಕೆ ಸಾಗುತ್ತಿರುವ ಸಂದರ್ಭದಲ್ಲಿ ಪ್ರತಿಯೊಬ್ಬ ತಾಯಿಯೂ ಧರ್ಮ ರಕ್ಷಣೆಯಲ್ಲಿ, ಸುಸಂಸ್ಕøತ ಸಮಾಜ ನಿರ್ಮಾಣಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡಬೇಕಾದುದು ಅತೀ ಅಗತ್ಯ ಎಂದರು. ಎಳೆಯ ಹರೆಯದಲ್ಲೇ ಮಕ್ಕಳಲ್ಲಿ ಶಿವಾಜಿ, ಸಾವರ್ಕರ್‍ರವರ ಚಿಂತನೆಗಳನ್ನು ಬೆಳೆಸಬೇಕು. ಮಕ್ಕಳಿಗೆ ತಾಯಂದಿರು ಉತ್ತಮ ಸಂಸ್ಕಾರವನ್ನು ನೀಡಿದರೆ ಮಾತ್ರ ತಾಯಿ ಭಾರತಿ ಜಗಜ್ಜನನಿಯಾಗುತ್ತಾಳೆ. ಪ್ರತಿಯೊಬ್ಬ ತಾಯಂದಿರು ಉಸಿರು ಅಳಿದ ನಂತರ ಹೆಸರು ಉಳಿಸಬಲ್ಲ ಪುತ್ರ ರತ್ನಗಳನ್ನು ಪಡೆಯಬೇಕು. ಅವರಿಗೆ ಉತ್ತಮ ಸಂಸ್ಕಾರದ ಶಿಕ್ಷಣವನ್ನು ನೀಡಬೇಕು ಎಂದರು.
ಕಾರ್ಯಕ್ರಮದಲ್ಲಿ ವಿಶ್ವಹಿಂದೂ ಪರಿಷತ್ ಮಾತೃ ಮಂಡಳಿ ಮಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷೆ ಮೀರಾ ಆಳ್ವ, ಶಬರಿ ಮಾತೃ ಮಂಡಳಿ ಉಪ್ಪಳ ಇದರ ಪ್ರಧಾನ ಕಾರ್ಯದರ್ಶಿ ಯೋಗಿನಿ ಶಶಿಕಾಂತ್, ಶಬರಿ ಮಾತೃ ಮಂಡಳಿ ಕೋಶಾಧಿಕಾರಿ ಗುಣವತಿ ಭಾಸ್ಕರ ಉಪ್ಪಳ, ನಿವೇದಿತಾ ಬಳಗ ಉಪ್ಪಳ ಇದರ ಅಧ್ಯಕ್ಷೆ ಭಾಗ್ಯಲಕ್ಷ್ಮೀ ರೈ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ನಿವೇದಿತಾ ಬಳಗದ ಸದಸ್ಯೆಯರಾದ ದೀಕ್ಷಾ ಪ್ರಾರ್ಥನೆ ಹಾಡಿದರು. ಕುಸುಮ ಕೋಡಿಬೈಲು ಸ್ವಾಗತಿಸಿ, ವಿಜಯಲಕ್ಷ್ಮಿ ರೈ ವಂದಿಸಿದರು. ಅನ್ನಪೂರ್ಣ ತೋಟ ಚೆರುಗೋಳಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಯುವಭಾರತಿ ಮತ್ತು ನಿವೇದಿತಾ ಬಳಗದ ಸದಸ್ಯರು ಮತ್ತು ಮಾತೆಯರು, ಮಕ್ಕಳು, ಅಯ್ಯಪ್ಪ ವ್ರತಾಧಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.





