ಡಿ.15 ರಂದು ಪೆರ್ಲ ಕೃಷ್ಣ ಭಟ್ ಸಂಸ್ಮರಣೆ
0
ಡಿಸೆಂಬರ್ 11, 2018
ಪೆರ್ಲ: ಪೆರ್ಲ ಕೃಷ್ಣ ಭಟ್ ಸಾಂಸ್ಕøತಿಕ ಪ್ರತಿಷ್ಠಾನದ ಆಶ್ರಯದಲ್ಲಿ ಡಿ.15 ರಂದು ಮಧ್ಯಾಹ್ನ 2 ರಿಂದ ಪೆರ್ಲ ಶ್ರೀ ಭಾರತೀ ಸದನದಲ್ಲಿ ಪೆರ್ಲ ಕೃಷ್ಣ ಭಟ್ ಸಂಸ್ಮರಣೆ ಸಮಾರಂಭ ನಡೆಯಲಿದೆ.
ಸಭಾ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸುವರು. ಮಧುರೈ ಕಾಮರಾಜ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ವಿಶ್ರಾಂತ ಮುಖ್ಯಸ್ಥ ಡಾ.ಹರಿಕೃಷ್ಣ ಭರಣ್ಯ ಸಂಸ್ಮರಣೆ ಭಾಷಣ ಮಾಡುವರು. ಇದೇ ಸಂದರ್ಭದಲ್ಲಿ ಖ್ಯಾತ ಯಕ್ಷಗಾನ ಅರ್ಥಧಾರಿ ಕುಂಬಳೆ ಸುಂದರ ರಾವ್ ಅವರಿಗೆ ಪೆರ್ಲ ಪ್ರಶಸ್ತಿ ಪ್ರದಾನ ನಡೆಯಲಿದೆ.
ಸಭಾ ಕಾರ್ಯಕ್ರಮದ ಬಳಿಕ ನಡೆಯುವ `ಉತ್ತರ ಗೋಗ್ರಹಣ' ಯಕ್ಷಗಾನ ತಾಳಮದ್ದಳೆಯ ಹಿಮ್ಮೇಳದಲ್ಲಿ ಸತ್ಯನಾರಾಯಣ ಪುಣಿಂಚಿತ್ತಾಯ ಪೆರ್ಲ, ದೇಲಂತಮಜಲು ಸುಬ್ರಹ್ಮಣ್ಯ ಭಟ್, ಶ್ರೀಧರ ಪಡ್ರೆ, ಮುಮ್ಮೇಳದಲ್ಲಿ ಕುಂಬಳೆ ಸುಂದರ ರಾವ್, ರಾಧಾಕೃಷ್ಣ ಕಲ್ಚಾರ್, ರಾಮ ಜೋಯಿಸ ಬೆಳ್ಳಾರೆ, ಕೋಟೆ ರಾಮ ಭಟ್ ಸಹಕರಿಸುವರು.





