ಕನಕದಾಸರ, ಪುರಂದರ ದಾಸರ ಆರಾಧನೋತ್ಸವ ಸಮಿತಿ ರಚನೆ
0
ಡಿಸೆಂಬರ್ 11, 2018
ಕುಂಬಳೆ: ಗುರು ಸಾರ್ವಭೌಮ ದಾಸ ಸಾಹಿತ್ಯ ಪೆÇ್ರಜೆಕ್ಟ್ ಮಂತ್ರಾಲಯದ ಕಾಸರಗೋಡು ಜಿಲ್ಲೆಯ ಸಂಚಾಲಕಿ ಹಾಗೂ ಕೀರ್ತನಾ ಗುರುಗಳಾದ ಪ್ರೇಮಲತ ಗೋಕುಲ್ ದಾಸ್ ಕುಂಬಳೆ ಇವರ ನೇತೃತ್ವದಲ್ಲಿ ನಡೆಯಲಿರುವ ಕನಕದಾಸರ ಹಾಗೂ ಪುರಂದರದಾಸರ ಆರಾಧನೋತ್ಸವ ಆಚರಣೆಯ ಯಶಸ್ವಿಗೆ ನೂತನ ಸಮಿತಿಯನ್ನು ನಾಯ್ಕಾಪು ಗಣೇಶ ಮಂದಿರದಲ್ಲಿ ಇತ್ತೀಚೆಗೆ ರಚಿಸಲಾಯಿತು.
ಸಮಿತಿಗೆ ಗೌರವಾಧ್ಯಕ್ಷರಾಗಿ ಪ್ರೇಮಲತಾ ಗೋಕುಲ್ ದಾಸ್, ಅಧ್ಯಕ್ಷರಾಗಿ ಹೇಮಲತಾ, ಉಪಾಧ್ಯಕ್ಷರಾಗಿ ರೇವತಿ, ವಿಶಾಲಾಕ್ಷಿ ಹೆಗಡೆ, ಪ್ರಧಾನ ಕಾರ್ಯದರ್ಶಿಯಾಗಿ ಹರಿಣಾಕ್ಷಿ ಪ್ರತಾಪನಗರ, ಜೊತೆಕಾರ್ಯದರ್ಶಿಗಳಾಗಿ ವಿನಯ, ಶೈಲಜ, ಕೋಶಾಧಿಕಾರಿಯಾಗಿ ಲಲಿತ ಕಾಸರಗೋಡು, ಲೆಕ್ಕ ಪರಿಶೋಧಕರಾಗಿ ವಿಜಯ ಬದಿಯಡ್ಕ, ಸವಿತಾ ಕಾಸರಗೋಡು, ಸಲಹೆಗಾರರಾಗಿ ಸತೀಶ ನಾಯ್ಕಾಪು ಅವರನ್ನು ಆರಿಸಲಾಯಿತು.




