ಕುಕ್ಕಂಗೋಡ್ಲಿನಲ್ಲಿ ಹಂಚು ಏರಿಸುವ ಮುಹೂರ್ತ
0
ಡಿಸೆಂಬರ್ 11, 2018
ಬದಿಯಡ್ಕ: ನೀರ್ಚಾಲು ಸಮೀಪದ ಕುಕ್ಕಂಗೋಡ್ಲು ಶ್ರೀಕಂಠ ಪಾಡಿ ಶ್ರೀ ಸುಬ್ರಹ್ಮಣ್ಯ ಸ್ವಾಮೀ ದೇವಸ್ಥಾನದಲ್ಲಿ ನೂತನವಾಗಿ ನಿರ್ಮಾಣಗೊಂಡ ಸುತ್ತು ಗೋಪುರದ ಮಾಡಿಗೆ ಹಂಚು ಏರಿಸಲು ಪ್ರಾರ್ಥನೆಯನ್ನು ಅರ್ಚಕ ಸುಬ್ರಹ್ಮಣ್ಯ ಮಯ್ಯ ಇತ್ತೀಚೆಗೆ ನೆರವೇರಿಸಿದರು. ಮೊಕ್ತೇಸರ ಕೊಡಿಂಗಾರು ಮನೆಯವರು, ಜೀರ್ಣೋದ್ಧಾರ ಸಮಿತಿಯ ಎಲ್ಲ ಪದಾಧಿಕಾರಿಗಳು ಮತ್ತು ನೂರಾರು ಭಕ್ತರು ಸೇರಿ ಶ್ರಮದಾನದ ಮೂಲಕ ಈ ಕಾರ್ಯದಲ್ಲಿ ಪಾಲ್ಗೊಂಡು ಕೃಥಾರ್ಥರಾದರು.
ಶ್ರೀಕ್ಷೇತ್ರದಲ್ಲಿ ಡಿ.13 ರಂದು ಷಷ್ಠೀ ಮಹೋತ್ಸವ ಬಲಿವಾಡು ಕೂಟದೊಂದಿಗೆ ನಡೆಯಲಿದೆ. ಮಧ್ಯಾಹ್ನ 12.30ಕ್ಕೆ ಮಹಾಪೂಜೆ,ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕ್ಷೇತ್ರ ಪ್ರಕಟಣೆಯಲ್ಲಿ ತಿಳಿಸಲಾಗಿದೆ.





