ನಾರಂಪಾಡಿಯಲ್ಲಿ ರಕ್ತದಾನ ಶಿಬಿರ
0
ಡಿಸೆಂಬರ್ 11, 2018
ಬದಿಯಡ್ಕ: ಭಾರತೀಯ ಕಥೋಲಿಕ ಯುವಸಂಚಲನ(ಐಸಿವೈಎಂ) ಕಾಸರಗೋಡು ಧರ್ಮವಲಯ ಸಮಿತಿ ಹಾಗೂ ನಾರಂಪಾಡಿ ಐಸಿವೈಎಂ ಘಟಕದ ಸಂಯುಕ್ತಾಶ್ರಯದಲ್ಲಿ ಲಿಸ್ಬನ್ ಆಟ್ರ್ಸ್ ಮತ್ತು ಸ್ಪೋಟ್ರ್ಸ್ ಕ್ಲಬ್ ನಾರಂಪಾಡಿ, ಫ್ರೆಂಡ್ಸ್ ಸರ್ಕಲ್ ಆಟ್ರ್ಸ್ ಆ್ಯಂಡ್ ಸ್ಪೋಟ್ರ್ಸ್ ಕ್ಲಬ್ ನಾರಂಪಾಡಿ, ಎ.ಜೆ.ಆಸ್ಪತ್ರೆ ಮತ್ತು ರಿಸರ್ಚ್ ಸೆಂಟರ್ ಮಂಗಳೂರು ಇವರ ಸಹಕಾರದೊಂದಿಗೆ ನಾರಂಪಾಡಿ ಫಾತಿಮ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ರಕ್ತದಾನ ಶಿಬಿರ ನಡೆಯಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಚೆಂಗಳ ಗ್ರಾಮ ಪಂಚಾಯತಿ ಅಧ್ಯಕ್ಷೆ ಶಾಹಿನ ಸಲೀಂ ಶಿಬಿರವನ್ನು ಉದ್ಘಾಟಿಸಿದರು. ಎಜೆ ಬ್ಲಡ್ ಬ್ಯಾಂಕ್ ಪ್ರಬಂಧಕ ಗೋಪಾಲಕೃಷ್ಣ, ಅವಿಲ ಕಾನ್ವೆಂಟ್ ಸುಪೀರಿಯರ್ ಸಿಸ್ಟರ್ ಹೆಲೆನ್, ನಾರಂಪಾಡಿ ಜೋನ್ ದಿ ಬ್ರಿಟ್ಟೊ ಇಗರ್ಜಿಯ ಕಾರ್ಯದರ್ಶಿ ಮೆಟಿಲ್ಡಾ ಡಿ.ಅಲ್ಮೇಡಾ, ಐಸಿವೈಎಂ ಕಾಸರಗೋಡು ಧರ್ಮವಲಯ ಸಮಿತಿ ಅಧ್ಯಕ್ಷ ಜೋಯೆಲ್, ಲಿಸ್ಬನ್ ಕ್ಲಬ್ ಅಧ್ಯಕ್ಷ ಸಾದಿಖ್, ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಅವಿನಾಶ್, ಐಸಿವೈಎಂ ನಾರಂಪಾಡಿ ಘಟಕ ಅಧ್ಯಕ್ಷ ಐವನ್ ಉಪಸ್ಥಿತರಿದ್ದರು.
ಅತಿಥಿಗಳಿಗೆ ಸ್ಮರಣಿಕೆ ನೀಡಲಾಯಿತು. ಐಸಿವೈಎಂ ನಾರಂಪಾಡಿ ಘಟಕ ಅಧ್ಯಕ್ಷ ಐವನ್ ಕಿಶೋರ್ ಸ್ವಾಗತಿಸಿ, ಕಾರ್ಯದರ್ಶಿ ರೇಶ್ಮಾ ಮೊಂತೆರೋ ವಂದಿಸಿದರು. ಜೇಶ್ಮಾ ಮೊಂತೆರೊ ನಾರಂಪಾಡಿ ಕಾರ್ಯಕ್ರಮ ನಿರೂಪಿಸಿದರು. ಕಾಸರಗೋಡು ಧರ್ಮವಲಯದ ಹಾಗೂ ನಾರಂಪಾಡಿಯ ನಾಗರಿಕರು ಸಹಿತ ಒಟ್ಟು 76 ಮಂದಿ ಶಿಬಿರದಲ್ಲಿ ರಕ್ತದಾನ ನಡೆಸಿದರು.





