HEALTH TIPS

ಸಮಗ್ರ ಹಿತದ ಸಮರ್ಪಣಾ ಭಾವದಿಂದ ಸತ್ಕಾರ್ಯಗಳಿಗೆ ಕೈಜೋಡಿಸಬೇಕು-ಎಡನೀರು ಶ್ರೀ

        ಬದಿಯಡ್ಕ: ತಮ್ಮ ದುಡಿಮೆಯ ಒಂದಂಶವನ್ನು ದೇವತಾಕಾರ್ಯಗಳಿಗೆ ವಿನಿಯೋಗಿಸುವುದರಿಂದ ಮನುಷ್ಯನ ಜೀವನ ಸಾರ್ಥಕ್ಯವನ್ನು ಪಡೆಯುತ್ತದೆ. ಇಂತಹ ಧಾರ್ಮಿಕ ಶ್ರದ್ಧಾಕೇಂದ್ರಗಳಿಂದ ಊರಿನಲ್ಲಿ ಶಾಂತಿ ನೆಮ್ಮದಿ ಲಭಿಸಲು ಸಾಧ್ಯ ಎಂದು ಶ್ರೀಮದ್ ಎಡನೀರು ಮಠಾಧೀಶ  ಶ್ರೀ ಕೇಶವಾನಂದ ಭಾರತೀ ಶ್ರೀಗಳು ತಮ್ಮ ಆಶೀರ್ವಚನದ ನುಡಿಗಳಲ್ಲಿ ತಿಳಿಸಿದರು.
ಶುಕ್ರವಾರ ನೀರ್ಚಾಲು ಶ್ರೀ ಧರ್ಮಶಾಸ್ತಾ ನೂತನ ಭಜನಾ ಮಂದಿರದಲ್ಲಿ ಶ್ರೀಧರ್ಮಶಾಸ್ತಾನ ಬಿಂಬ ಪ್ರತಿಷ್ಠೆಗೆ ದೀಪಪ್ರಜ್ವಲನೆಗೈದು, ಬಳಿಕ ವಿಶೇಷ ಆಶೀರ್ವಚನಗೈದು  ಲೋಕಾರ್ಪಣೆಗೊಳಿಸಿ ಅವರು ಭಕ್ತರನ್ನುದ್ದೇಶಿಸಿ ಆಶೀರ್ವಚನವನ್ನು ನೀಡಿದರು.
     ಸಕಲರವ ಒಳಿತಿಗೆ ಸಮರ್ಪಣಾ  ಭಾವದಿಂದ ಸತ್ಕಾರ್ಯಗಳಿಗೆ ಕೈಜೋಡಿಸುವುದು ಬದುಕಿನ ಸಾಕಾರತನದ ಅತ್ಯುತ್ತಮ ಕೊಡುಗೆಯಾಗಿದೆ. ಧಾರ್ಮಿಕ ಶ್ರದ್ದೆ ಬಲಗೊಂಡಷ್ಟು ಅಂತಃಸತ್ವ ಬಲಗೊಂಡು ಜಂಜಡಗಳಿಂದ ಪಾರಾಗಲು ಸಾಧ್ಯ ಎಂದು ಶ್ರೀಗಳು ತಿಳಿಸಿದರು. ಕಾರ್ಯಕ್ರಮಕ್ಕೂ ಮೊದಲು ಶ್ರೀಗಳವರನ್ನು ಪೂರ್ಣಕುಂಭ ಹಾಗೂ ಚೆಂಡೆಮೇಳ, ಮುತ್ತುಕೊಡೆಗಳ ಗೌರವಾದಾರಗಳೊಂದಿಗೆ ಸ್ವಾಗತವನ್ನು ನೀಡಲಾಗಿತ್ತು.
  10.12ರಿಂದ 11.05ರ ಕುಂಭಲಗ್ನ ಸುಮುಹೂರ್ತದಲ್ಲಿ ಮಂದಿರದ ರಮೇಶ ಗುರುಸ್ವಾಮಿ ಇವರಿಂದ ಶ್ರೀ ಅಯ್ಯಪ್ಪ ಸ್ವಾಮಿಯ ಛಾಯಾಚಿತ್ರ ಪುನಃಪ್ರತಿಷ್ಠೆ ನಡೆಯಿತು. ಅನೇಕ ಭಕ್ತಾದಿಗಳು ಈ ಸಂದರ್ಭದಲ್ಲಿ ಪಾಲ್ಗೊಂಡು ಕೃತಾರ್ಥರಾದರು. ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನದಾನ ನಡೆಯಿತು. ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಮಧ್ಯಾಹ್ನ ನಡೆದ ಯಕ್ಷಗಾನ `ಗಾನವೈಭವ' ಪ್ರೇಕ್ಷಕರನ್ನು ಸೆಳೆಯಿತು.
ಶನಿವಾರ ಬೆಳಿಗ್ಗೆ 5ಕ್ಕೆ ಶರಣಂ ವಿಳಿ, ಗೋಪಾಲಕೃಷ್ಣ ಪೈ ಬದಿಯಡ್ಕ ಇವರಿಂದ ದೀಪಪ್ರತಿಷ್ಠೆ, ವಿವಿಧ ಭಜನಾ ಸಂಘಗಳಿಂದ ಭಜನೆ, ಮಧ್ಯಾಹ್ನ ಮಹಾಪೂಜೆ, ಅನ್ನದಾನ. ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಅಪರಾಹ್ನ 2ರಿಂದ ಮಹಿಳಾ ಯಕ್ಷಗಾನ ಪ್ರದರ್ಶನ `ಶಿವಭಕ್ತ ವೀರಮಣಿ'. ರಾತ್ರಿ 7 ಗಂಟೆಗೆ ಕುಂಬಳೆಯ ನಾಟ್ಯನಿಲಯದ ನಿರ್ದೇಶಕಿ ವಿದುಷಿ ವಿದ್ಯಾಲಕ್ಷ್ಮಿ ಬೇಳ ಅವರ  ಶಿಷ್ಯವೃಂದದವರಿಂದ ನೃತ್ಯಸಂಭ್ರಮ ನಡೆಯಿತು. ಸಂಜೆ 6ರಿಂದ ಕುಮಾರಮಂಗಲ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಿಂದ ಹೊರಟು ಉತ್ಸವಾಂಗಣಕ್ಕೆ ಪಾಲೆಕೊಂಬು ಮೆರವಣಿಗೆ, ರಾತ್ರಿ 12ಕ್ಕೆ ಮಹಾಪೂಜೆ, ಮಂಗಳಾರತಿ. 12.30ಕ್ಕೆ ಅಯ್ಯಪ್ಪನ್ ಪಾಟು, ಪೊಲಿಪಾಟು, ರಾತ್ರೆ 3.30ರಿಂದ ತಾಲಿಪ್ಪೊಲಿ, ಅಗ್ನಿಪೂಜೆ, ತಿರಿ ಉಯಿಚ್ಚಿಲ್, ಅಯ್ಯಪ್ಪ - ವಾವರ ಯುದ್ಧ, ತಿರುವಿಳಕ್ಕ್ ಉತ್ಸವದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.
   ಒಡಿಯೂರು ಶ್ರೀಗಳ ಭೇಟಿ:
    ಭಕ್ತಾದಿಗಳು ಗುಂಪುಗೂಡಿ ಒಂದೇ ಕಡೆ ದೇವರನ್ನು ಪ್ರಾರ್ಥಿಸಿ, ಭಜನೆಯನ್ನು ನಡೆಸಿದರೆ ವಾತಾವರಣವು ಪರಿಶುದ್ಧವಾಗುವುದಲ್ಲದೆ ಸದ್ಭಾವನೆಗಳು ಮೂಡಿಬರುತ್ತವೆ. ಕಲಿಕಾಲದಲ್ಲಿ ನಾಮಸಂಕೀರ್ತನೆಯನ್ನು ಮಾಡುವುದರಿಂದ ಹೆಚ್ಚಿನ ಫಲ ಲಭಿಸುತ್ತದೆ. ಸಮಾಜಕ್ಕಾಗಿ ಬದುಕುವವನೇ ನಿಜಜೀವನದಲ್ಲಿ ಸುಖಿಯಾಗಿರುತ್ತಾನೆ ಎಂದು ಒಡಿಯೂರು ಶ್ರೀಕ್ಷೇತ್ರದ ಶ್ರೀ ಗುರುದೇವಾನಂದ ಸ್ವಾಮೀಜಿ ತಮ್ಮ ಆಶೀರ್ವಚನದಲ್ಲಿ ನುಡಿದರು.
ಶುಕ್ರವಾರ ನೀರ್ಚಾಲು ಶ್ರೀ ಧರ್ಮಶಾಸ್ತಾ ನೂತನ ಭಜನ ಮಂದಿರದ ಲೋಕಾರ್ಪಣೆ ಸಮಾರಂಭ ಸಭಾಕಾರ್ಯಕ್ರಮದಲ್ಲಿ ಅವರು ಆಶೀರ್ವಚನವನ್ನು ನೀಡಿ ಮಾತನಾಡಿದರು. ಸನಾತನ ಸಂಸ್ಕøತಿಯ ಒಳಿತಿಗಾಗಿ ನಮ್ಮ ಜೀವನವನ್ನು ಸಾಗಿಸಬೇಕು. ನೀರ್ಚಾಲಿನಲ್ಲಿ  ಭಕ್ತ ಜನರ ಕನಸಿನ ಮಂದಿರವು ಬೆಳಕಾಗಿದೆ ಎಂದರು.
ಅನಿರೀಕ್ಷಿತವಾಗಿ ಆಗಮಿಸಿದ ಶಬರಿಮಲೆ ಅಯ್ಯಪ್ಪಸೇವಾಸಮಾಜಂನ ಕೇರಳ ರಾಜ್ಯ ಅಧ್ಯಕ್ಷ ಸ್ವಾಮಿ ಅಯ್ಯಪ್ಪದಾಸ್ ಅವರು ಮಾತನಾಡಿ ಅದೆಷ್ಟೋ ಸುಪ್ರೀಂಕೋರ್ಟ್ ತೀರ್ಪುಗಳು ಪೂರ್ತಿಗೊಳ್ಳಲು ಬಾಕಿಯಿದ್ದರೂ ಕೇರಳ ರಾಜ್ಯ ಸರಕಾರವು ಶಬರಿಮಲೆ ವಿಚಾರದಲ್ಲಿ ಯುವತಿಯರನ್ನು ಬಲವಂತವಾಗಿ ಪ್ರವೇಶಿಸಲು ಯತ್ನಿಸುವ ಮೂಲಕ ಕ್ಷೇತ್ರ ಆಚಾರ ಅನುಷ್ಠಾನಗಳಿಗೆ ಧಕ್ಕೆ ತರಲು ಪ್ರಯತ್ನಿಸುತ್ತಿದೆ. ತನ್ಮೂಲಕ ಹಿಂದುಗಳ ಶ್ರದ್ಧಾ ಕೇಂದ್ರಗಳನ್ನು ಹಾಳುಗೆಡವುದರ ಮೂಲಕ ಹಿಂದೂ ಧರ್ಮಕ್ಕೆ ಬಲವಾದ ಏಟನ್ನು ನೀಡುವ ಉದ್ದೇಶವಾಗಿದೆ. ಅಯ್ಯಪ್ಪ ಜ್ಯೋತಿಯ ಮೂಲಕ 23 ಲಕ್ಷ ಜನರು ಶಬರಿಮಲೆಯ ರಕ್ಷಣೆಗಾಗಿ ಕಟಿಬದ್ಧರಾಗಿದ್ದಾರೆ ಎಂಬುದು ಕಳೆದ ಕೆಲವು ದಿನಗಳಲ್ಲಿ ವ್ಯಕ್ತವಾಗಿದೆ ಎಂದು ಅವರು ತಿಳಿಸಿದರು.
ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಬಿ. ವಸಂತ ಪೈ ಬದಿಯಡ್ಕ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಶ್ರೀ ಧರ್ಮಶಾಸ್ತಾ ಸೇವಾ ಸಮಿತಿಯ ಗೌರವಾಧ್ಯಕ್ಷ ಜಯದೇವ ಖಂಡಿಗೆ, ಬದಿಯಡ್ಕ ಗ್ರಾ.ಪಂ.ಸದಸ್ಯರುಗಳಾದ ಶಂಕರ ಡಿ., ಪ್ರೇಮ ಕುಮಾರಿ ಶುಭಾಶಂಸನೆಗೈರು. ಶ್ರೀ ಧರ್ಮಶಾಸ್ತ ಸೇವಾ ಸಮಿತಿಯ ಪ್ರಧಾನ ಕಾರ್ಯದರ್ಶಿ ನಾರಾಯಣ ಗುರುಸ್ವಾಮಿ ಮೊಳೆಯಾರು,  ಮಂದಿರದ ರಮೇಶ ಗುರುಸ್ವಾಮಿ, ತಿಮ್ಮಪ್ಪ ಗುರುಸ್ವಾಮಿ ನೀರ್ಚಾಲು, ಸ್ಥಳದಾನಿ ಸಂಜೀವ ರೈಗಳ ಮೊಮ್ಮಗ ಪಂದಳರಾಜ ಕುಮಾರ ರೈ, ನಿವೃತ್ತ ಡಿ.ವೈ.ಎಸ್.ಪಿ. ಪ್ರಕಾಶ್ ನೀರ್ಚಾಲು, ಶ್ರೀ ಧರ್ಮಶಾಸ್ತಾ ಮಿತ್ರಮಂಡಳಿಯ ರವಿಚಂದ್ರ ಮೈಕುರಿ, ಮಾತೃಮಂಡಳಿಯ ಜಯಶ್ರೀ ಉಪಸ್ಥಿತರಿದ್ದರು.
ಶ್ರೀ ಧರ್ಮಶಾಸ್ತಾ ಸೇವಾಸಮಿತಿಯ ಅಧ್ಯಕ್ಷ ಗಂಗಾಧರ ನಾಯ್ಕ ಓಣಿಯಡ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಉತ್ಸವ ಸಮಿತಿಯ ಕಾರ್ಯದರ್ಶಿ ಮಂಜುನಾಥ ಮಾನ್ಯ ಸ್ವಾಗತಿಸಿ, ಸಾಂಸ್ಕøತಿಕ ಸಮಿತಿಯ ಅಧ್ಯಕ್ಷ ಸುಧಾಮ ಮಾಸ್ತರ್ ಮಲ್ಲಡ್ಕ ವಂದಿಸಿದರು. ಉತ್ಸವ ಸಮಿತಿಯ ಕಾರ್ಯದರ್ಶಿ ರವೀಂದ್ರ ಕೆ. ನಿರೂಪಿಸಿದರು.





Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries