ಕುಂಟಾರು; ಎನ್‍ಎಸ್‍ಎಸ್ ಶಿಬಿರ ಇಂದು ಸಮಾರೋಪ
0
ಡಿಸೆಂಬರ್ 28, 2018
ಮುಳ್ಳೇರಿಯ: ಕುಂಟಾರು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯುತ್ತಿದ್ದ ಬೋವಿಕ್ಕಾನ ಬಿಎಆರ್‍ಎಚ್‍ಎಸ್ ಶಾಲೆಯ ಎನ್‍ಎಸ್‍ಎಸ್ ಸಪ್ತದಿನ ಶಿಬಿರ ಡಿ.28ರಂದು ಕೊನೆಗೊಳ್ಳಲಿದೆ.
ಶಿಬಿರದ ಅಂಗವಾಗಿ ಯೋಗ, ತರಗತಿಗಳು, ಯೋಜನೆಯ ಕೆಲಸ, ಕ್ರಿಸ್ಮಸ್ ಕಾರ್ಯಕ್ರಮ, ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು.
ಇಂದು(ಡಿ.28ರಂದು) ಮಧ್ಯಾಹ್ನ 2ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಕಾರಡ್ಕ ಗ್ರಾಮ ಪಂಚಾಯಿತಿ ಸದಸ್ಯೆ ಶ್ರೀವಿದ್ಯಾ ಅಧ್ಯಕ್ಷತೆ ವಹಿಸುವರು. ಬ್ಲಾಕ್ ಪಂಚಾಯಿತಿ ಸದಸ್ಯ ವಾರಿಜಾಕ್ಷನ್ ಉದ್ಘಾಟಿಸುವರು. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಬ್ದುಲ್ ಗಫೂರ್, ಪ್ರಾಂಶುಪಾಲ ಮೆಜೋ ಜೋಸೆಫ್, ಶಿಕ್ಷಕಿ ಲತಾಕುಟ್ಟಿ, ಕುಂಟಾರು ಶಾಲೆಯ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಶಶಿಧರನ್, ಯೋಜನಾ ಅಧಿಕಾರಿ ಪ್ರೀತಂ ಭಾಗವಹಿಸುವರು.
ಎನ್‍ಎಸ್‍ಎಸ್ ವಿದ್ಯಾರ್ಥಿಗಳ ಶಿಬಿರದ ಅಂಗವಾಗಿ ಪಡಿಯತ್ತಡ್ಕದಿಂದ ಕುಂಟಾರಿನ ತನಕ ಕಾಸರಗೋಡು-ಸುಳ್ಯ ರಸ್ತೆ ಬದಿಯನ್ನು ವಿದ್ಯಾರ್ಥಿಗಳು ಕಾಡುಕಡಿದು ಶುಚಿಗೊಳಿಸಿದರು.





