ಸುದ್ದಿಯಾಗದ ಚಿತ್ರಗಳು
0
ಡಿಸೆಂಬರ್ 12, 2018
ಸಮರಸದ ಸಹನಾಶೀಲ ಓದುಗರೇ,
ಮೇಲಿನ ಶಿರೋನಾಮೆಯ ಬಗ್ಗೆ ನಾವೆಲ್ಲ ಆಗಾಗ ಸಹಜವಾಗಿ ಚಿಂತಿಸಿಯೇ ಇರುತ್ತೇವೆ. ಹೌದು...ಇಂದಿನ ಜಂಜಡದ ಬದುಕಿನಲ್ಲಿ ದಿನನಿತ್ಯ ಅದೆಷ್ಟೋ ವಿಚಾರವನ್ನು ಹಾಗೆ ನೋಡಿ...ಹೀಗೆ ಮರೆತುಬಿಡುತ್ತೇವೆ. ಆದರೆ ಅವಲ್ಲಿ ಕೆಲವೊಂದು ಒಂದಷ್ಟು ದಿನ ಮನಸ್ಸಿನಾಳದಲ್ಲಿ ಅಚ್ಚೊತ್ತಿ ನೆನಪು ತೂರಿ ಬರುತ್ತವೆ.
ನಿತ್ಯ ನೋಡುವ ವಿಚಾರಗಳಲ್ಲಿ ಹಲವು ದಾಖಲಾಗದೆ ತೆರೆಮರೆಗೆ ಸಂದುವುದು ಸಹಜ.ಈ ನಿಟ್ಟಿನಲ್ಲಿ ಆಶ್ಚರ್ಯಕರವಾದ, ಸದಾ ನೆನಪಾಗುವ-ನೆನಪಾಗಬೇಕಾದ, ಮುಗ್ದತೆಯ, ಕುತೂಹಲ ಭರಿತ ಚಿತ್ರಗಳನ್ನು ಅನಿಯಮಿತವಾಗಿ ಸಮರಸ ಸುದ್ದಿ ಪ್ರಕಟಿಸಲಿದೆ.
ಓದುಗರೂ ಕೈಜೋಡಿಸಬಹುದು...ಹಂಚಬಹುದು. ನೀವು ನೋಡಿ ಸೆರೆಹಿಡಿದ ಚಿತ್ರಗಳನ್ನು,ಎಲ್ಲೂ ಸುದ್ದಿಯಾಗದ ಚಿತ್ರಗಳಾಗಿದ್ದರೆ,ಅದು ಕುತೂಹಲ, ಅಥವಾ ಇನ್ನೇನನ್ನೋ ಹೇಳುವುದಾಗಿದ್ದರೆ ನೀವೂ ಕಳಿಸಬಹುದು. ಆದರೆ ಅದು ಇತರರನ್ನು ನೋಯಿಸುವಂತೆ, ಹೀಗೆಳೆಯುವ ಅವಕಾಶ ಮಾತ್ರ ಇರಬಾರದೆಂಬ ಪ್ರಜ್ಞೆ ಇದೆಯೆಂಬುದೂ ಮರೆಯುವಂತಿಲ್ಲ.
ನೀವು ಅಂತಹ ಚಿತ್ರಗಳನ್ನು ಮೊ.ಸಂಖ್ಯೆ 7907952070 ವಾಟ್ಸ್‍ಫ್‍ಗೆ ಅಥವಾ samarasasudhiksd@gmail.com ಗೆ ಕಳಿಸಬಹುದು. ಜೊತೆಗೆ ನಿಮ್ಮ ಹೆಸರು, ಪೋಟೋ ತೆಗೆದ ಸನ್ನಿವೇಶದ ಪುಟ್ಟ ವಿವರವೂ ಅಗತ್ಯ....ತಡ ಮಾಡಬೇಡಿ...ತಡಕಾಡುವ ಕಾಣದ ಚಿತ್ರಗಳನ್ನು!
ಇಲ್ಲಿರುವ ಚಿತ್ರ ಮೊನ್ನೆಯಷ್ಟೇ ಲೋಕಾರ್ಪಣೆಗೊಂಡ ಕಣ್ಣೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ಥಾಪಿಸಲಾಗಿರುವ ತೆಂಕುತಿಟ್ಟು ಯಕ್ಷಗಾನದ ವೇಶವೊಂದರ ಚಿತ್ರ. ಗಡಿನಾಡು ಕಾಸರಗೋಡಿಗೆ ಸಂಬಂಧಿಸಿ ಇಂತಹದೊಂದು ಚಿತ್ರವನ್ನು ಅಂ.ರಾ.ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಸೆಳೆಯುವ ಉದ್ದೇಶದಿಂದ ಹಾಕಲಾಗಿದ್ದರೂ ಈ ಮಣ್ಣಿನ ಧೀಮಂತಿಕೆಯ ಕಲೆಯೊಂದಕ್ಕೆ ನೀಡಿದ ಮಹತ್ವದ ಮನ್ನಣೆಯಾಗಿಯೂ ಭಾವಿಸುವುದರಲ್ಲಿ ತಪ್ಪಿಲ್ಲ. ಇದು ಒಂದಷ್ಟು ಪ್ರೇರಣೆ ನೀಡುವುದರಲ್ಲಿ ಸಂಶಯವೂ ಇಲ್ಲ.!ಏನಂತೀರಿ...ಪ್ರತಿಕ್ರೀಯಿಸಿ...




