ಕುಮಾರಮಂಗಲದಲ್ಲಿ ಷಷ್ಠಿ ಮಹೋತ್ಸವ ನಾಳೆ
0
ಡಿಸೆಂಬರ್ 11, 2018
ಬದಿಯಡ್ಕ: ಬೇಳ ಕುಮಾರಮಂಗಲ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ವಾರ್ಷಿಕ ಷಷ್ಠಿ ಮಹೋತ್ಸವವು ಡಿಸೆಂಬರ್ 13ರಂದು ವಿವಿಧ ಧಾರ್ಮಿಕ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿರುವುದು. ಕಾರ್ಯಕ್ರಮದ ಅಂಗವಾಗಿ ಇಂದು(ಡಿ.12ರಂದು) ಸಂಜೆ 4 ಕ್ಕೆ ನೀರ್ಚಾಲ್ ಅಶ್ವತ್ಥಕಟ್ಟೆ ಪರಿಸರದಿಂದ ಮತ್ತು ಸೀತಾಂಗೊಳಿ ಶ್ರೀದೇವಿ ಭಜನ ಮಂದಿರದಿಂದ ಹೊರೆಕಾಣಿಕೆ ಮೆರವಣಿಗೆ ನಡೆಯಲಿರುವುದು. ಡಿ.13ರಂದು ಬೆಳಿಗ್ಗೆ ಗಣಪತಿ ಹೋಮ, ವೇದ ಪಾರಾಯಣ, ನವಕಾಭಿಷೇಕ, ತುಲಾಭಾರ ಸೇವೆ, ಮಹಾಪೂಜೆ ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಲಿದೆ.
ಸಂಜೆ 6 ಕ್ಕೆ ದೀಪಾರಾಧನೆ ತಾಯಂಬಕ, 7 ಗಂಟೆಗೆ ಏಣಿಯರ್ಪು ತರವಾಡು ಮನೆಯಿಂದ ಶ್ರೀ ವಿಷ್ಣುಮೂರ್ತಿ ದೈವದ ಭಂಡಾರದ ಆಗಮನ, 7.30ಕ್ಕೆ ನೀರ್ಚಾಲು ಶ್ರೀ ಕುಮಾರಸ್ವಾಮಿ ಭಜನ ಸಂಘದವರಿಂದ ಹುಲ್ಪೆ ಮೆರವಣಿಗೆ, ರಾತ್ರಿ 7 ಗಂಟೆಗೆ ರಂಗಪೂಜೆ, ಉತ್ಸವ ಬಲಿ, ರಾತ್ರಿ 10 ಗಂಟೆಗೆ ಬೇಳದ ಅಶ್ವತ್ಥಕಟ್ಟೆಗೆ ಶ್ರೀದೇವರ ಘೋಷಯಾತ್ರೆ, ಪೂಜೆ, ಬೆಡಿಕಟ್ಟೆಯಲ್ಲಿ ಬೆಡಿಸೇವೆ, ಮಧ್ಯರಾತ್ರಿ 12 ಗಂಟೆಗೆ ರಾಜಾಂಗಣ ಪ್ರಸಾದ ಮತ್ತು ಮಂತ್ರಾಕ್ಷತೆ, ಮಂಗಳಶಯನ ನಡೆಯಲಿದೆ.
ಸಾಂಸ್ಕøತಿಕ ಕಾರ್ಯಕ್ರಮಗಳ ಆಂಗವಾಗಿ ಡಿ.13ರಂದು ಬೆಳಿಗ್ಗೆ 8ರಿಂದ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಭಜನ ಸಂಘ ಕುಮಾರಮಂಗಲ ಮತ್ತು ಶ್ರೀ ವೀರಾಂಜನೇಯ ಕಳರಿ ವ್ಯಾಯಾಮ ಶಾಲೆ ಹನುಮಾನ್ ನಗರ ಏಣಿಯರ್ಪು ಇವರಿಂದ ಭಜನೆ, 9.30ರಿಂದ ಡಾ. ಶಶಿರಾಜ ನೀಲಂಗಳ ಮತ್ತು ಬಾಲಕೃಷ್ಣ ಆಚಾರ್ಯ ನೀರ್ಚಾಲು ಇವರಿಂದ ಗಮಕ ವ್ಯಾಖ್ಯಾನ, 10.30ರಿಂದ ಆಕಾಶವಾಣಿ ಕಲಾವಿದರಾದ ವಿದ್ವಾನ್ ಶಿಬು ಕರುಣಾಕರನ್ ಕಣ್ಣೂರು ಮತ್ತು ವಿದ್ವಾನ್ ಸುರೇಶ್ ಬಾಬು ಕಣ್ಣೂರು ಮತ್ತು ಬಳಗದವರಿಂದ ಸಂಗೀತಾರ್ಚನೆ, ಮಧ್ಯಾಹ್ನ ಯಕ್ಷಗಾನ ವೈಭವ, ಅಪರಾಹ್ನ 2.30ರಿಂದ ಯಕ್ಷಭಾರತಿ ಕಲಾಸಂಘ ನೀರ್ಚಾಲು ಇವರಿಂದ ಯಕ್ಷಗಾನ ತಾಳಮದ್ದಳೆ, ಸಂಜೆ 6 ರಿಂದ 9ರ ವರೆಗೆ ನಾಟ್ಯ ವಿದ್ಯಾಲಯ ಕುಂಬಳೆ ಇದರ ನೃತ್ಯ ನಿರ್ದೇಶಕಿ ವಿದುಷಿ ವಿದ್ಯಾಲಕ್ಷ್ಮೀ ಬೇಳ ಇವರ ಶಿಷ್ಯೆಯರಿಂದ `ನೃತ್ಯ ಸಂಭ್ರಮ', 9.30ರಿಂದ 12.30ರ ತನಕ ಯಸ್.ವಿ.ಟಿ.ನಾಟ್ಯಾಲಯ ಕಾಸಗೋಡು ಇವರಿಂದ `ಮಹಿಷವಧೆ' ಯಕ್ಷಗಾನ ಪ್ರದರ್ಶನ ನಡೆಯಲಿದೆ.
ಡಿ.14ರಂದು ಬೆಳಿಗ್ಗೆ 8.30ಕ್ಕೆ ಶ್ರೀ ವಿಷ್ಣುಮೂರ್ತಿ ದೈವದ ಕೋಲ, ಪ್ರಸಾದ ವಿತರಣೆ, ಏಣಿಯರ್ಪು ತರವಾಡು ಮನೆಗೆ ಶ್ರೀ ವಿಷ್ಣುಮೂರ್ತಿ ದೈವದ ಭಂಡಾರ ಹಿಂತಿರುಗುವುದರೊಂದಿಗೆ ಕಾರ್ಯಕ್ರಮ ಸಂಪನ್ನವಾಗಲಿದೆ.





