HEALTH TIPS

ತಂತ್ರವಿದ್ಯಾ ತಿಲಕ ದಿ.ಅನಂತಪದ್ಮನಾಭ ಉಪಾಧ್ಯಾಯ ಸಂಸ್ಮರಣೆ ಪರಂಪರೆ ಸಾಗಿಬಂದ ನೆನಪುಗಳು ಪರಂಪರೆಯ ಬೋಧ ನೀಡುತ್ತದೆ-ವಾಸುದೇವ ತಂತ್ರಿ ಕುಂಟಾರು


          ಬದಿಯಡ್ಕ: ಜಗತ್ತಿನ ಬೆಳಕನ್ನು ಕಾಣಲು ಕಾರಣರಾಗಿ, ಸತ್ಪಥದ ಜೀವನದ ಮಾರ್ಗದರ್ಶಿತ್ವ ನೀಡಿ ಎತ್ತರಕ್ಕೇರಿಸಿದ ಪಿತೃಗಳನ್ನು ಗೌರವಿಸುವುದು ಭಾರತೀಯ ಪರಂಪರೆಯ ಮೇರು ದ್ಯೋತಕವಾಗಿದೆ ಎಂದು ಬ್ರಹ್ಮಶ್ರೀ ವಾಸುದೇವ ತಂತ್ರಿ ಕುಂಟಾರು ತಿಳಿಸಿದರು.
      ನೀರ್ಚಾಲು ಸಮೀಪದ ಕೊಲ್ಲಂಗಾನದ ಶ್ರೀನಿಲಯ ಶ್ರೀಕ್ಷೇತ್ರದಲ್ಲಿ ಮಂಗಳವಾರ ರಾತ್ರಿ ನಡೆದ ಬ್ರಹ್ಮಶ್ರೀ ತಂತ್ರವಿದ್ಯಾತಿಲಕ ತಂತ್ರಿ ದಿ.ಅನಂತಪದ್ಮನಾಭ ಉಪಾಧ್ಯಾಯರ 15ನೇ ಸಂಸ್ಮರಣಾ ಸಮಾರಂಭ ಮತ್ತು ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
       ಹಿರಿಯರ ಸ್ಮರಣೆಯು ಪರಂಪರೆ ಸಾಗಿಬಂದ ಏಳು-ಬೀಳುಗಳ ನೆನಸುವಿಕೆಯ ಮೂಲಕ ನಮ್ಮ ಬದುಕಿಗೆ ಬೋಧೆಯನ್ನು ನೀಡುತ್ತದೆ. ಕರ್ಮ ಕ್ಷೇತ್ರದಲ್ಲಿ ತೊಡಗಿಸಿಕೊಂಡವರನ್ನು ಗೌರವಿಸುವ ಮೂಲಕ ಆದರ್ಶಪ್ರಾಯವಾಗಿರುವ ಶ್ರೀನಿಲಯ ಸಮಾಜಕ್ಕೆ ಸತ್ ಚಿಂತನೆಯ ಮಾರ್ಗದರ್ಶಿತ್ವವನ್ನು ನೀಡಿದೆ ಎಂದು ಅವರು ತಿಳಿಸಿದರು.
           ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದ ಧಾರ್ಮಿಕ-ಸಾಮಾಜಿಕ ಮುಂದಾಳು ವೇಣುಗೋಪಾಲ ತತ್ವಮಸಿ ಅವರು, ಧಾರ್ಮಿಕ ಹಾಗೂ ಸಾಂಸ್ಕøತಿಕ ಕೊಡುಗೆಗಳಿಂದ ಮಾತ್ರ ಸಮಾಜವನ್ನು ಸದಾಶಯದೆಡೆಗೆ ಮುನ್ನಡೆಸಲು ಸಾಧ್ಯವಿದೆ. ಹಿರಿಯರ ಸ್ಮರಣೆ ಬದುಕಿಗೆ ಹೊಸತನವನ್ನು ನೀಡುವ ಜೊತೆಗೆ ಪುನಶ್ಚೇತನಕ್ಕೆ ಕಾರಣವಾಗುತ್ತದೆ ಎಂದು ತಿಳಿಸಿದರು.
        ಸಮಾರಂಭದಲ್ಲಿ ಬ್ರಹ್ಮಶ್ರೀ ಗೋವಿಂದ ಭಟ್ ಪೊಳ್ಳಕಜೆ, ವೇದಮೂರ್ತಿ ರಾಮ ಭಟ್ ಬೋಳಂತಕೋಡಿ, ಜ್ಯೋತಿಷಿಗಳಾದ ಕಲ್ಯೋಟ್ ಕುಂಞÂಂಬು ನಾಯರ್ ಹಾಗೂ ಕೋಡೋತ್ ಸದಾನಂದ ನಾಯರ್ ಅವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭ ಸನ್ಮಾನ ಸ್ವೀಕರಿಸಿ ಮಾತನಾಡಿದ ವೈದಿಕ ವಿದ್ವಾಂಸ ಬೋಳಂತಕೋಡಿ ರಾಮ ಭಟ್ ಅವರು, ನಶ್ವರವಾದ ಬದುಕಿನಲ್ಲಿ ಶರೀರ ಅಸ್ಥಿರ ಎಂಬುದು ಸನಾತನ ನಂಬಿಕೆಯಾಗಿದೆ. ಆದರೂ ಕಷ್ಟಗಳನ್ನು ಅನುಭವಿಸಿ ಕೂಡಿಡುವ ಸಂಪತ್ತು ಮರಣಿಸಿದ ಬಳಿಕ ನಮ್ಮೊಡನಿರಲಾರದು ಎಂಬುದನ್ನು ನಾವು ಮರೆಯುತ್ತೇವೆ. ಆದ್ದರಿಂದ ಧರ್ಮ ಸಂಗ್ರಹವೇ ಮಾನವ ಬದುಕಿನ ಮೂಲ ಲಕ್ಷ್ಯವೆಂಬುದನ್ನು ಗ್ರಹಿಸುವ ಅಗತ್ಯ ಇದೆ ಎಂದು ತಿಳಿಸಿದರು. ಈ ನಿಟ್ಟಿನಲ್ಲಿ ಗಳಿಕೆಯಲ್ಲಿ ಗಣನೀಯ ದಾನಗಳಿಂದ, ಮಾನವ ಸ್ನೇಹದಿಂದ ಬದುಕನ್ನು ಪಾವನಗೊಳಿಸಬೇಕು ಎಂದು ಅವರು ತಿಳಿಸಿದರು.
       ಶ್ರೀನಿಲಯದ ಶ್ರೀಚಕ್ರ ಆರಾಧಕ, ಕಾರ್ಯಕ್ರಮ ಸಂಯೋಜಕರಾದ ಬ್ರಹ್ಮಶ್ರೀ ತಂತ್ರಿ ಗಣಾಧಿರಾಜ ಉಪಾಧ್ಯಾಯ ಅವರು ಉಪಸ್ಥಿತರಿದ್ದು, ಪ್ರಾಸ್ತಾವಿಕವಾಗಿ ಮಾತನಾಡಿ, ತಾಂತ್ರಿಕ ವಿದ್ಯೆ-ಉಪಾಸನೆ ಮತ್ತು ಯಕ್ಷಗಾನ ಕ್ಷೇತ್ರದ ತನ್ನ ಮುನ್ನಡೆಯಲ್ಲಿ ದಿ.ಅನಂತಪದ್ಮನಾಭ ಉಪಾಧ್ಯಾಯರ ನಿರ್ದೇಶನ ಬದುಕಲ್ಲಿ ನೆಲೆ ಕಂಡೊಕೊಳ್ಳುವಲ್ಲಿ ಸಹಕಾರಿಯಾಗಿದೆ. ಹಿರಿಯರ ಋಣವನ್ನು ಸ್ಮರಣೆಯ-ಅನುಸರಣೆಯ ಮೂಲಕ ಸಾರ್ಥಕಗೊಳಿಸಲು ಪ್ರಯತ್ನಶೀಲನಾಗುವಲ್ಲಿ ಸಮಾಜ ಸಹಕಾರ ನೀಡುತ್ತಿದೆ ಎಂದು ತಿಳಿಸಿದರು.
       ಶಶಿಪ್ರಭಾ ಉದಯಶಂಕರ್, ಶರಣ್ಯಾ ಶ್ರೀನಿವಾಸ ಭಟ್ ಪುತ್ತೂರು, ರವಿಶಂಕರ ಶೆಟ್ಟಿ ಕೊಲ್ಲಂಗಾನ ಹಾಗೂ ಪುರುಷೋತ್ತಮ ಭಟ್ ಕೆ ಸನ್ಮಾನ ಪತ್ರ ವಾಚಿಸಿದರು. ಪ್ರೊ.ಎ.ಶ್ರೀನಾಥ್, ಉದಯಶಂಕರ ಭಟ್, ಮೊದಲಾದವರು ಉಪಸ್ಥಿತರಿದ್ದರು. ರವಿಶಂಕರ ಶೆಟ್ಟಿ ಕೊಲ್ಲಂಗಾನ ಸ್ವಾಗತಿಸಿ, ಶರಣ್ಯ ವಂದಿಸಿದರು. ಸುಂದರ ಶೆಟ್ಟಿ ಕೊಲ್ಲಂಗಾನ ಕಾರ್ಯಕ್ರಮ ನಿರೂಪಿಸಿದರು. 
     ಬಳಿಕ ಬ್ರಹ್ಮಶ್ರೀ ವಾಸುದೇವ ತಂತ್ರಿ ಕುಂಟಾರು ಅವರಿಂದ ಶಾಸ್ತ್ರೀಯ ಭಕ್ತಿ ಸಂಗೀತ ಕಾರ್ಯಕ್ರಮ ಜರಗಿತು. ಪಕ್ಕವಾದ್ಯದಲ್ಲಿ ಪ್ರಭಾಕರ ಕುಂಜಾರು(ವಯಲಿನ್), ಶ್ರೀಧರ ಭಟ್ ಮುಳ್ಳೇರಿಯ(ಮೃದಂಗ)ದಲ್ಲಿ ಸಹಕರಿಸಿದರು. ಆ ಬಳಿಕ ಕೊಲ್ಲಂಗಾನದ ಶ್ರೀದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿಯವರಿಂದ ಬಲಿಪ ನಾರಾಯಣ ಭಾಗವತರು ವಿರಚಿತ ಮಯೂರೇಖ ವಿಜಯ ಪ್ರಸಂಗದ ಯಕ್ಷಗಾನ ಪ್ರದರ್ಶನ ನಡೆಯಿತು. 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries