HEALTH TIPS

ಮಾನ್ಯ-ನೀರ್ಚಾಲು ರಸ್ತೆ-ತೇಪೆ ಕಾಮಗಾರಿಗೆ ಚಾಲನೆ

     
        ಬದಿಯಡ್ಕ: ಸ0ಚಾರಕ್ಕೆ ತೀವ್ರ ತೊ0ದರೆಯಾಗಿ ಜನಾಕ್ರೋಶಕ್ಕೆ ಒಳಗಾಗಿದ್ದ ವಿದ್ಯಾನಗರ ಮು0ಡಿತ್ತಡ್ಕ ರಸ್ತೆಯ ಮಾನ್ಯ ನೀ ಚಾ9ಲು ರಸ್ತೆಯ ತೇಪೆ ಕಾಮಗಾರಿಗೆ ಭಾನುವಾರದಿ0ದ ಚಾಲನೆ ನೀಡಲಾಗಿದೆ.
       30 ಲಕ್ಷ ರೂ.ವ್ಯಯಿಸಿ ತೇಪೆ ಕಾಮಗಾರಿ ಎತ್ತಿಕೊಳ್ಳಲಾಗಿದೆ. ಇದೇ ರಸ್ತೆಯ ವಿದ್ಯಾನಗರ-ಕಲ್ಲಕಟ್ಟದ ವರೆಗೆ ಸಂಪೂರ್ಣ ಡಾಮರೀಕರಣ ಈಗಾಗಲೇ ಪೂಣ9ವಾಗಿದೆ. ಬಳಿಕ ಕಲ್ಲಕಟ್ಟ- ದೇವರ ಕೆರೆ ಡಾಮರೀಕರಣಕ್ಕೆ ಈಗಾಗಲೇ ಚಾಲನೆ ನೀಡಲಾಗಿದೆ.
        ಜಿ.ಪಂ.ವ್ಯಾಪ್ತಿಯ ಈ ರಸ್ತೆ ಕಳೆದ ಮೂರು ವಷ9ಗಳಿ0ದ ಹಾನಿಗೊಳಗಾಗಿತ್ತು. ಮೂರು ಹಂತಗಳಲ್ಲಾಗಿ ವಿದ್ಯಾನಗರ-ಮುಂಡಿತ್ತಡ್ಕ 18.5 ಕಿಲೋಮೀಟರ್ ರಸ್ತೆಯ ಕಾಮಗಾರಿಗೆ ಕಳೆದ ಹಲವು ವರ್ಷಗಳಿಂದ ಬೇಡಿಕೆ ಇರಿಸಲಾಗುತ್ತಿತ್ತು. ಪ್ರಸ್ತುತ ಸಾಲಿನಲ್ಲಿ ವಿದ್ಯಾನಗರ ಕಲ್ಲಕಟ್ಟ ಹಾಗೂ ಕಲ್ಲಕಟ್ಟ ದೇವರಕೆರೆ ರಬ್ಬರೈಸ್ಟ್ ಡಾಮರೀಕರಣಕ್ಕೆ ಒಂದು ಕೋಟಿಗಿಂತ ಮಿಕ್ಕಿದ ನಿಧಿಯ ಮೂಲಕ ಕಾಮಗಾರಿ ನಡೆಸಲಾಗುತ್ತಿದೆ. ಆದರೆ ಮಾನ್ಯ ನೀರ್ಚಾಲು ರಸ್ತೆಗೆ ಪ್ರಸ್ತುತ ಸಾಲಿನಲ್ಲಿ ಯಾವುದೇ ನಿಧಿ ಮೀಸಲಿಡದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು. ಜನರ ಬೇಡಿಕೆಯಂತೆ ಬಳಿಕ ಜಿಲ್ಲಾ ಪಂಚಾಯತು ಸದಸ್ಯ ಕೆ.ಶ್ರೀಕಾಂತ್ ತಾತ್ಕಾಲಿಕ ತೇಪೆಗೆ 3ಲಕ್ಷ ರೂ.ಗಳ ಅನುದಾನ ಮಂಜೂರುಗೊಳಿಸಿರುವರು.
            ಕ್ರಿಯಾ ಸಮಿತಿಯ ಒತ್ತಾಯ ಹಿಂದಿದೆ:
   ಮಾನ್ಯ ನೀರ್ಚಾಲು ರಸ್ತೆಗೆ ಪ್ರಸ್ತುತ ವರ್ಷ ಡಾಮರೀಕರಣ ಇಲ್ಲವೆಂಬ ಹಿನ್ನೆಲೆಯಲ್ಲಿ ಮಾನ್ಯದಲ್ಲಿ ಸಾರ್ವಜನಿಕರು ಕ್ರಿಯಾ ಸಮಿತಿ ರೂಪೀಕರಿಸಿ ಜಿ.ಂ. ಅಧಿಕೃತರ ಮೇಲೆ ಒತ್ತಡವನ್ನೂ ತಂದಿದ್ದರು. ಜನರ ತೀವ್ರಗೊಂಡ ಬೇಡಿಕೆಯನುಸಾರ ಕೊನೆಗೂ ತೇಪೆ ನಡೆಸಲು ನಿಧಿ ಮೀಸಲಿರಿಸಿದ್ದು,ಕಾಮಗಾರಿಯ ಗುಣಮಟ್ಟದ ಬಗ್ಗೆ ಕಾದು ನೋಡಬೇಕಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries