ಮುಳ್ಳೇರಿಯ: ನಾರಂಪಾಡಿ ಶ್ರೀಉಮಾಮಹೇಶ್ವರ ಕ್ಷೇತ್ರದಲ್ಲಿ ಇಂದಿನಿಂದ ವಾರ್ಷಿಕ ಜಾತ್ರೋತ್ಸವ ಆರಂಭಗೊಳ್ಳಲಿದೆ.
ಇಂದು ಬೆಳಿಗ್ಗೆ ಗಣಪತಿ ಹವನ, 10ಕ್ಕೆ ಧ್ವಜಾರೋಹಣ, ಶ್ರೀಬಲಿ, ನವಕಾಭಿಷೇಕ,11 ರಿಂದ ತುಲಾಭಾರ ಸೇವೆ ಹಾಗೂ ವಿದುಷಿಃ ಸಾವಿತ್ರೀ ಕೆ. ಭಟ್ ದೊಡ್ಡಮಾಣಿ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಚೇರಿ ನಡೆಯಲಿದೆ. ಮಧ್ಯಾಹ್ನ ಮಹಾಪೂಜೆ, ಅನ್ನದಾನಗಳು ನಡೆಯಲಿವೆ.
ಅಪರಾಹ್ನ 2.30 ರಿಂದ ಮಾಸ್ಟರ್ ವೆಂಕಟ ಯಶಸ್ವಿ ಕಬೆಕ್ಕೋಡು ಅವರಿಂದ ಶಾಸ್ತ್ರೀಯ ಸಂಗೀತ ಕಚೇರಿ ನಡೆಯಲಿದೆ. 3.30 ರಿಂದ ವಿಜೇತ ಸುಬ್ರಹ್ಮಣ್ಯ ಅವರಿಂದ ವಯಲಿನ್ ವಾದನ ನಡೆಯಲಿದೆ. ಸಂಜೆ 6.30 ರಿಂದ ಭಜನಾ ಸಂಕೀರ್ತನೆ, ರಾತ್ರಿ 8 ರಿಂದ ರಾತ್ರಿ ಪೂಜೆ, ಹವಿಸ್ಸು ಪೂಜೆ, ಶ್ರೀಭೂತಬಲಿ ನಡೆಯಲಿದೆ. ರಾತ್ರಿ 10 ರಿಂದ ನೃತ್ಯಗಾಥಾ ಏಕವ್ಯಕ್ತಿ ನಾಟಕ ಪ್ರದರ್ಶನ ನಡೆಯಲಿದೆ.
ಜ.30 ರಂದು ಬೆಳಿಗ್ಗೆ 7.30ಕ್ಕೆ ಶ್ರೀಬಲಿ, 8ರಿಂದ ಭಜನಾ ಸಂಕೀರ್ತನೆ, 9.30 ರಿಂದ ಕೋಳಿಕ್ಕಜೆ ಬಾಲಸುಬ್ರಹ್ಮಣ್ಯ ಭಟ್ ಹಾಗೂ ಶಿಷ್ಯವೃಂದದವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಚೇರಿ ನಡೆಯಲಿದೆ. 11 ರಿಂದ ತುಲಾಭಾರ ಸೇವೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನದಾನ ನಡೆಯಲಿದೆ. ಅಪರಾಹ್ನ 2.30 ರಿಂದ ಯಕ್ಷಗಾನ ತಾಳಮದ್ದಳೆ, ಸಂಜೆ 6.30 ರಿಂದ ಭಜನಾ ಸಂಕೀರ್ತನೆ, ರಾತ್ರಿ 8 ರಿಂದ ರಾತ್ರಿ ಪೂಜೆ, ಹವಿಸ್ಸು ಪೂಜೆ, ಶ್ರೀಭೂತಬಲಿ ನಡೆಯಲಿದೆ.


