ಕಾಸರಗೋಡು: ರಾಜ್ಯ ಯುವಜನ ಕಲ್ಯಾಣ ಮಂಡಳಿ,ಕಾಸರಗೋಡು ಜಿಲ್ಲಾಯುವಜನಕೇಂದ್ರ ವತಿಯಿಂದ ಬೇಕಲ ಕಲ್ಚರಲ್ ಸೆಂಟರ್ ನಲ್ಲಿ ಮಾಧ್ಯಮ ವಿಚಾರಸಂಕಿರಣ ಭಾನುವಾರ ಜರುಗಿತು.
ಖ್ಯಾತ ಪತ್ರಕರ್ತ ಅಭಿಲಾಷ್ ಮೋಹನ್ ವಿಚಾರಸಂಕಿರಣವನ್ನು ಉದ್ಘಾಟಿಸಿದರು. ಜಿಲ್ಲಾ ಯುವ ಕಾರ್ಯಕ್ರಮಾಧಿಕಾರಿ ಕೆ.ಪ್ರಸೀದಾ ಅಧ್ಯಕ್ಷತೆ ವಹಿಸಿದ್ದರು. ಮಂಡಳಿ ಸದಸ್ಯ ಮಹೇಶ್ ಕಕ್ಕತ್, ಸಂತೋಷ್ಕಾಲ, ಯುವಜನ ಆಯೋಗ ಸದಸ್ಯ ಕೆ.ಮಣಿಕಂಠನ್, ಬಿ.ಆರ್.ಡಿ.ಸಿ. ಎಂ.ಡಿ.ಟಿ.ಕೆ.ಮನ್ಸೂರ್, ಪಂಚಾಯತ್ ಸದಸ್ಯೆ ಲಕ್ಷ್ಮಿ ಮೊದಲಾದವರು ಉಪಸ್ಥಿತರಿದ್ದರು.
ಪತ್ರಿಕೋದ್ಯಮ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ನಡೆಸುತ್ತಿರುವ ಎಂ.ಬಿ.ಶರತ್ ಚಂದ್ರನ್, ಸುರೇಂದ್ರನ್ ಮಡಿಕೈ, ಶ್ಯಾಂ ಬಾಬು ನೀಲೆಶ್ವರ, ಜಿ.ಶಿವದಾಸನ್, ಇ.ವಿಜಯಕೃಷ್ಣನ್, ಚಂದ್ರು ವೆಲ್ಳರಿಕುಂಡ್, ಟಿ.ಕೆ.ನಾರಾಯಣನ್, ಬಾಬು ಕೊಟ್ಟುಪಾರ, ವೇಣು ಕಳ್ಳಾರ್, ಲಿಬೀಷ್ ಕುಮಾರ್ ಮೊದಲಾದವರನ್ನು ಅಭಿನಂದಿಸಲಾಯಿತು.
ವಿವಿಧ ವಿಷಯಗಳಲ್ಲಿ ಅಭಿಜಿತ್ ಪಿ.ಜೆ., ಎಂ.ಬಿ.ಶರತ್ ಚಂದ್ರನ್, ಒ.ವಿ.ಸುರೇಶ್ ಕುಮಾರ್ ಉಪನ್ಯಾಸ ಮಾಡಿದರು. "ಕೋಮು ಧ್ರುವೀಕರಣ ಕಾಲಾವಧಿಯಲ್ಲಿ ಪತ್ರಿಕೋದ್ಯಮ" ಎಂಬ ವಿಷಯದಲ್ಲಿ ಪತ್ರಕರ್ತರಾದ ಮುಜೀಬ್ ರಹಮಾನ್, ಇ.ವಿ.ಜಯಕೃಷ್ಣನ್, ಶಫೀಕ್ ನಸ್ರುಲ್ಲ,ರಾಜೇಶ್ ನೋಯಲ್ ಮೊದಲಾದವರು ಸಂವಾದ ನಡೆಸಿದರು. ಜಿಲ್ಲೆಯ ಪತ್ರಿಕೋದ್ಯಮ ವಿದ್ಯಾರ್ಥಿಗಳು, ಪತ್ರಕರ್ತರು ಉಪಸ್ಥಿತರಿದ್ದರು.
ಜಿಲ್ಲಾ ಯುವಜನ ಸಂಯೋಜಕ ಎಂ.ವಿ.ಶಿವಕುಮಾರ್ ಸ್ವಾಗತಿಸಿ, ಪಂಚಾಯತಿ ಸಂಯೋಜಕ ಶಶಿಕುಮಾರ್ ವಂದಿಸಿದರು.


