ಕಾಸರಗೋಡು: ಹಸುರು ಕೇರಳ ಮಿಷನ್ ನ "ತ್ಯಾಜ್ಯದಿಂದ ಸ್ವಾತಂತ್ರ್ಯ" ಯೋಜನೆಯ ಎರಡನೇ ಹಂತದ ಹಸುರು ನಿಯಮಾವಳಿ ಜಿಲ್ಲಾ ಮಟ್ಟದ ಕ್ಯಾಂಪೇನ್ ಭಾನುವಾರ ಆರಂಭಗೊಂಡಿತು.
ಶಾಸಕ ಎನ್.ಎ.ನೆಲ್ಲಿಕುನ್ನು ಸಮಾರಂಭವನ್ನು ಉದ್ಘಾಟಿಸಿದರು. ತ್ಯಾಜ್ಯ ತಂದು ಬಿಸುಟುವವರ ವಿರುದ್ಧ , ಜಲಾಶಯಗಳನ್ನು ಮಲಿನಗೊಳಿಸುವವರ ವಿರುದ್ಧ ಕೈಗೊಳ್ಳಬೇಕಾದ ಕ್ರಮಗಳ ಬಗೆಗಿನ ಹೊತ್ತಗೆಯನ್ನು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರಿಗೆ ಶಾಸಕ ಹಸ್ತಾಂತರಿಸಿದರು.
ಕಾಸರಗೋಡು ನಗರಸಭೆಯ ಉಪಾಧ್ಯಕ್ಷ ಎನ್.ಎ.ಮಹೂದ್ ಅಧ್ಯಕ್ಷತೆ ವಹಿಸಿದ್ದರು. ಹಸುರು ಕೇರಳಂ ಜಿಲ್ಲಾ ಸಂಚಾಲಕ ಎಂ.ಪಿ.ಸುಬ್ರಹ್ಮಣ್ಯನ್ ಪುಸ್ತಕದ ಪರಿಚಯ ನೀಡಿದರು. ಪಂಚಾಯತ್ ಸಹಾಯಕನಿರ್ದೆಶಕ ಅರುಣ್ ಟಿ.ಜೆ., ತ್ಯಾಜ್ಯ ನಿಯಂತ್ರಣ ಮಂಡಳಿ ಸಹಾಯಕ ಇಂಜಿನಿಯರ್ ಸನಿಲ್ ಕಾರಾಟ್ ಉಪಸ್ಥಿತರಿದ್ದರು.
ಶುಚಿತ್ವ ಮಿಷನ್ ಜಿಲ್ಲಾ ಸಂಚಾಲಕ ಸಿ.ರಾಧಾಕೃಷ್ಣನ್ ಸ್ವಾಗತಿಸಿದರು. ಶಿಬಿರದ ಅಂಗವಾಗಿ ವಿವಿಧೆಡೆ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಕಾನೂನು ಜಾಗೃತಿ ಶಿಬಿರ ಮುಂದಿನ ದಿನಗಳಲ್ಲಿ ನಡೆಸಲಾಗುವುದು.


