HEALTH TIPS

ಮಾ.12-13 : ಕಾರ್ಯಾಗಾರ

ಕಾಸರಗೋಡು: ಭೂಗರ್ಭ ಜಲ ಇಲಾಖೆ ಜಿಲ್ಲಾ ಕಚೇರಿ ವತಿಯಿಂದ ಜನಪ್ರತಿನಿಧಿಗಳು, ಕೃಷಿಕರು, ಉದ್ಯೋಗ ಖಾತರಿ ಯೋಜನೆ ಫಲಾನುಭವಿಗಳು, ವಿದ್ಯಾರ್ಥಿಗಳು ಮೊದಲಾದವರಿಗಾಗಿ `ಭೂಗರ್ಭ ಜಲ ಸಂರಕ್ಷಣೆ ಮತ್ತು ಪೆÇೀಷಣೆ' ಎಂಬ ವಿಷಯದಲ್ಲಿ ಜಾಗೃತಿ ಕಾರ್ಯಾಗಾರ ನಡೆಯಲಿದೆ. ಮಾ.12ರಂದು ಉಪ್ಪಳ ಶ್ರೀ ಸತ್ಯನಾರಾಯಣ ಹೊಟೇಲ್ ಸಭಾಂಗಣದಲ್ಲಿ, ಮಾ.13ರಂದು ಕಾಸರಗೋಡು ಸಿಟಿ ಟವರ್ ಸಭಾಂಗಣದಲ್ಲಿ ಬೆಳಿಗ್ಗೆ 9 ರಿಂದ ಮಧ್ಯಾಹ್ನ 2 ಗಂಟೆ ವರೆಗೆ ಕಾರ್ಯಾಗಾರ ನಡೆಯಲಿದೆ. ಇಲಾಖೆಯ ಸೂಪರಿಂಡೆಂಡಿಂಗ್ ಹೈಡ್ರೋಜಿಯೋಲಜಿಸ್ಟ್ ಕೆ.ಎ.ಮಹಮೂದ್ ಉಪನ್ಯಾಸ ನೀಡುವರು. ಕೇಂದ್ರ ಭೂಗರ್ಭ ಜಲ ಮಂಡಳಿ ತಿರುವನಂತಪುರ ವಲಯ ನಿರ್ದೇಶಕ ವಿ.ಕುಂಞಂಬು ಪ್ರಧಾನ ಭಾಷಣ ಮಾಡುವರು. ಇಲಾಖೆಯ ಹೈಡ್ರೋಜಿಯಾಲಜಿಸ್ಟ್ ಬಿ.ಷಾಬಿ ತರಗತಿ ನಡೆಸುವರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries