HEALTH TIPS

ಬೆಳವಣಿಯೊಂದಿಗೆ ಕಾಲದ ಹೆಜ್ಜೆಗಾರಿಕೆಯನ್ನೂ ದಾಖಲಿಸುವ ಮ್ಯಾಗಸಿನ್

ಕಾಸರಗೋಡು: ಹೆಸರಿನಲ್ಲೇ ಕುತೂಹಲ ಉಳಿಸಿಕೊಂಡು ಬಂದಿರುವ ಕುಂಞÂ ಮಾಯಿಂಡಡಿಯ ಬೆಳಕಿನ ಕಥೆ ಹೇಳುವ `ಕೈಯೊಪ್ಪ್' (ಹೆಬ್ಬೆರೆಳಚ್ಚು) ಮ್ಯಾಗಸಿನ್ ವಾಚಕರ ಕುತೂಹಲ ಕೆರಳಿಸುತ್ತಿದೆ. ಕುಂಞÂ ಮಾಯಿಂಡಡಿ ಎಂಬುದು ಗಡಿನಾಡು ಕಾಸರಗೋಡಿನ ವಿದ್ಯಾನಗರ ಎಂಬ ಪ್ರದೇಶದ ಮೂಲನಾಮ. ಇಲ್ಲಿ ಸರಕಾರಿ ಕಾಲೇಜು ಎಂಬ ಮಹತ್ವದ ವಿದ್ಯಾಸಂಸ್ಥೆ ಸ್ಥಾಪನೆಗೊಳ್ಳುವ ಮುನ್ನ ಮಾವಿನಮರಗಳೇ ಅಧಿಕವಾಗಿದ್ದ ಪ್ರದೇಶಕ್ಕೆ ಈ ಹೆಸರಿತ್ತು. ಇಂದಿಗೂ ಇಲ್ಲಿ ಅಧಿಕವಾಗಿ ಕಂಡುಬರುವ ಫಲಭರಿತ ಮಾವಿನ ಮರಗಳು ಇದಕ್ಕೆ ಸಾಕ್ಷಿನುಡಿಯುತ್ತವೆ. ವಿದ್ಯಾನಗರದ ಸರಕಾರಿ ಅಂಧರ ವಿದ್ಯಾಲಯ 69 ವರ್ಷ ದಾಟುತ್ತಿರುವ ಸಂದರ್ಭದಲ್ಲಿ ಶಾಲೆಯ ಇತಿಹಾಸವನ್ನು ತಿಳಿಸುವ ಸಂದರ್ಭದಲ್ಲಿ ಸಾಗಿ ಬಂದಿರುವ ಕಾಲದ ಹೆಜ್ಜೆ ಗುರುತುಗಳನ್ನೂ ದಾಖಲಿಸುವ ಪ್ರಯತ್ನವನ್ನು `ಅಂತರ್ ದೃಷ್ಟಿ' ಯೊಂದಿಗೆ ಕಾಲದ ಗತಿಯನ್ನು ಗಮನಿಸುವವರ ಶಾಲೆಯ ಶಿಕ್ಷಕರೊಬ್ಬರು (ಇವರಿಗೆ ದೃಷ್ಟಿ ಬಲವಿದೆ(ಇವರು ಅಂಧರಲ್ಲ) ನಡೆಸಿರುವುದು ಸ್ತುತ್ಯರ್ಹವಾಗಿದೆ. ಪಾಲ್ಘಾಟ್‍ನ ಮೂಲ ನಿವಾಸಿ, ಈ ಶಾಲೆಯ ಶಿಕ್ಷಕ ಎಂ.ರಾಜೇಶ್ ಈ ಮ್ಯಾಗಸಿನ್ ಪ್ರಕಟಿಸಿದ್ದಾರೆ. ಈ ವರೆಗೆ ಈ ಶಿಕ್ಷಣಾಲಯದಲ್ಲಿ ಈ ರೀತಿಯ ಯಾವ ಮುದ್ರಣಗಳೂ ಇರಲಿಲ್ಲ ಎಂಬುದೂ ಗಮನಾರ್ಹ ವಿಚಾರ. ಈ ಕೃತಿ ಪ್ರಕಟಿಸುವ ಮುನ್ನವೇ ವಿಭಿನ್ನವಾದ ಹೆಸರು ಇರಿಸಬೇಕು ಎಂಬ ಉತ್ಕಟ ಆಕಾಂಕ್ಷೆ ತಿಂಗಳುಗಟ್ಟಲೆ ತಲೆಕೆಡಿಸುವಂತೆ ಮಾಡಿತ್ತು ಎಂದು ರಾಜೇಶ್ ಮಾಸ್ಟರ್ ತಿಳಿಸುತ್ತಾರೆ. ಈ ಮಂಥನದಲ್ಲಿ ಉದಿಸಿ ಬಂದ ಹೆಸರೇ `ಚುಂಡಪ್ಪ್'. ಮಾ.29ರಂದು ಈ ಮ್ಯಾಗಸಿನ್ ಬಿಡುಗಡೆಯಾಗಲಿದೆ. ಶಾಲೆಯ ಆರಂಭ ಹಂತದ ಚಟುವಟಿಕೆಗಳು, ಹಿರಿಯ ಶಿಕ್ಷಕರೊಂದಿಗೆ ನಡೆಸಲಾದ ಸಂವಾದಗಳು, ಅಂಗವಿಕಲರಿಗಿರುವ ಕಾನೂನು ರೀತ್ಯಾ ಸಂರಕ್ಷಣೆಗಳು, ಶಿಕ್ಷಣ ವಲಯದಲ್ಲಿ ಇವರು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಪರಿಹಾರಗಳು, ವಿದ್ಯಾರ್ಥಿಗಳ ಸಾಹಿತ್ಯ ರಚನೆಗಳು ಇತ್ಯಾದಿಗಳು ಈ ಮ್ಯಾಗಸಿನ್‍ನ ಪ್ರಧಾನ ಭೂಮಿಕೆಗಳಾಗಿವೆ. ವಿದ್ಯಾರ್ಥಿಗಳೂ, ಶಿಕ್ಷಕರೂ ಸೇರಿ 7 ಮಂದಿಯ ಸಂಪಾದಕೀಯ ಮಂಡಳಿ ಈ ಮ್ಯಾಗಸಿನ್‍ಗಾಗಿ ದುಡಿಮೆ ನಡೆಸಿದೆ. 1950ರಲ್ಲಿ ಕಾಸರಗೋಡು ರೈಲು ನಿಲ್ದಾಣ ಬಳಿಯ ಬಾಡಿಗೆ ಕಟ್ಟಡದಲ್ಲಿ ಸರಕಾರಿ ಅಂಧರ ಶಾಲೆ ಚಟುವಟಿಕೆ ಆರಂಭಿಸಿತ್ತು. 1964ರಲ್ಲಿ ವಿದ್ಯಾನಗರದಲ್ಲಿ ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊಂಡಿತ್ತು. ರಾಜ್ಯದಲ್ಲೇ ಎರಡನೇ ಅಂಧರ ಶಿಕ್ಷಣಾಲಯ ಎಂಬ ವಿಶೇಷತೆಗೂ ಈ ಸಂಸ್ಥೆ ಪಾತ್ರವಾಗಿದೆ. ಏಕಾಧ್ಯಾಪಕ ಶಾಲೆಯಾಗಿ ಆರಂಭಗೊಂಡಿದ್ದರೂ, ಈಗ 12 ಮಂದಿ ಶಿಕ್ಷಕರು ಇಲ್ಲಿ ಅಧ್ಯಾಪನ ನಡೆಸುತ್ತಾರೆ. ಒಂದರಿಂದ 7 ನೇ ತರಗತಿ ವರೆಗೆ 14 ಮಂದಿ ಮಕ್ಕಳು ಇಲ್ಲಿ ಕಲಿಕೆಯಲ್ಲಿದ್ದಾರೆ. ಜೊತೆಗೆ ಶಿಕ್ಷಕರಾದ ಎಂ.ಪಿ.ಅಬೂಬಕ್ಕರ್, ನಾರಾಯಣನ್, ಉಮೇಶನ್ ಈ ಶಾಲೆಯ ವಿದ್ಯಾರ್ಥಿಗಳಾಗಿದ್ದವರೇ. ಈ ವರೆಗೆ 40 ಮಂದಿ ಇಲ್ಲಿ ಶಿಕ್ಷಣ ಪೂರೈಸಿ ತೆರಳಿದ್ದಾರೆ. ಇವರಲ್ಲಿ ಬಹುತೇಕ ಮಂದಿ ಸರಕಾರಿ ನೌಕರಿಯಲ್ಲಿದ್ದಾರೆ. ಎಂಡೋಸಲಾನ್ ಸಂತ್ರಸ್ತರ ಜನಪರ ಒಕ್ಕೂಟ ಎಂಬ ಸಕ್ರಿಯ ಸಂಘಟನೆಯ ಖ್ಯಾತ ಹೋರಾಟಗಾರರಾದ ಮೂನೀಸಾ, ಕಲೋತ್ಸವಗಳಲ್ಲಿ ಮಿಂಚುತ್ತಿರುವ ಪ್ರತಿಭೆಗಳಾದ ಜೀವನ್ ರಾಜ್, ಕೃಷ್ಣ ಪ್ರಿಯ ಇವರು ಕೂಡ ಈ ಶಾಲೆಯ ವಿದ್ಯಾರ್ಥಿಗಳಾಗಿದ್ದವರೇ. ರಾಜ್ಯ ಮಟ್ಟದ ಅಂಗವಿಕಲರ ಕಲೋತ್ಸವಗಳಲ್ಲಿ ಸತತ 4 ಬಾರಿ ಸವಾರ್ಂಗೀಣ ಪ್ರಶಸ್ತಿ ಪಡೆದಿರುವ ಹೆಗ್ಗಳಿಕೆ ಈ ವಿದ್ಯಾಲಯದ್ದು. ಶಿಕ್ಷಣಾಲಯಗಳಲ್ಲಿ ಸಂಗೀತ, ಕ್ರಾಫ್ಟ್, ವಾದನ ಉಪಕರಣ ಇತ್ಯಾದಿ ತರಬೇತಿಯೂ ಇದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries