ನೂತನ ಪಡಿತರ ಚೀಟಿ ವಿತರಣೆ
0
ಮಾರ್ಚ್ 10, 2019
ಕಾಸರಗೋಡು: ಕಾಸರಗೋಡು ತಾಲೂಕು ನಾಗರಿಕ ಪೂರೈಕೆ ಕಚೇರಿಯಲ್ಲಿ 2018 ಆಗಸ್ಟ್ ನಿಂದ 2018 ಡಿಸೆಂಬರ್ ವರೆಗೆ ಅಕ್ಷಯ/ಸಿಟಿಝನ್ ಲೋಗ್ ಮೂಲಕ ನೂತನ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿದವರಿಗೆ ನೂತನ ಪಡಿತರ ಚೀಟಿ ವಿತರಣೆ 2019 ಮಾ.11ರಿಂದ 15 ವರೆಗೆ ನಡೆಯಲಿದೆ. ಅರ್ಜಿಯ ಪ್ರಿಂಟ್ ಕಚೇರಿಗೆ ಸಲ್ಲಿಸಿದವರಿಗೆ ಈ ವಿತರಣೆ ನಡೆಯಲಿದೆ.
2018 ಆಗಸ್ಟ್ ತಿಂಗಳಲ್ಲಿ ಅರ್ಜಿ ಸಲ್ಲಿಸಿದವರಿಗೆ ಈ ವರ್ಷ ಮಾ.11ರಂದು, 2018 ಸೆಪ್ಟೆಂಬರ್ ತಿಂಗಳಲ್ಲಿ ಅರ್ಜಿ ಸಲ್ಲಿಸಿದವರಿಗೆ ಮಾ.12ರಂದು, 2018 ಅಕ್ಟೋಬರ್‍ನಲ್ಲಿ ಅರ್ಜಿ ಸಲ್ಲಿಸಿದವರಿಗೆ ಮಾ.13ರಂದು, 2018 ನವೆಂಬರ್ ತಿಂಗಳಲ್ಲಿ ಅರ್ಜಿ ಸಲ್ಲಿಸಿದವರಿಗೆ ಮಾ.14ರಂದು, 2018 ಡಿಸೆಂಬರ್ ತಿಂಗಳಲ್ಲಿ ಅರ್ಜಿ ಸಲ್ಲಿಸಿದವರಿಗೆ ಮಾ.15ರಂದು ವಿತರಣೆ ನಡೆಯಲಿದೆ.
ಬೆಳಗ್ಗೆ 10ರಿಂದ ಮಧ್ಯಾಹ್ನ 3 ಗಂಟೆ ವರೆಗೆ ವಿತರಣೆ ನಡೆಯಲಿದೆ. ಈ ದಿನಗಳಲ್ಲಿ ಇತರ ಅರ್ಜಿಗಳ ವಿತರಣೆ ಇರುವುದಿಲ್ಲ. ನಿಗದಿತ ದಿನಗಳಲ್ಲಿ ಸದಸ್ಯರ ಹೆಸರು ಇರುವ ಅಸಲಿ ಕಾರ್ಡಿನ ಬೆಲೆ ಮತ್ತು ಹಿಂದೆ ನೀಡಿದ ಟೋಕನ್ ಸಹಿತ ನೇರವಾಗಿ ಕಚೇರಿಗೆ ಹಾಜರಾಗಬೇಕು. ಜನವರಿ, ಫೆಬ್ರವರಿ ತಿಂಗಳಲ್ಲಿ ಅರ್ಜಿ ಸಲ್ಲಿಸಿದವರ ಪಡಿತರ ಚೀಟಿ ವಿತರಣೆ ದಿನಾಂಕ ನಂತರ ತಿಳಿಸಲಾಗುವುದು. ಇನ್ನೂ ಆನ್‍ಲೈನ್ ಮೂಲಕ ಸಲ್ಲಿಸಿದ ಅರ್ಜಿಯ ಪ್ರಿಂಟ್ ಔಟ್ ನೀಡದೇ ಇದ್ದವರು ತತ್‍ಕ್ಷಣ ಸಲ್ಲಿಸುವಂತೆ ಅಧಿಕಾರಿ ತಿಳಿಸಿದ್ದಾರೆ.




