ಉಚಿತ ತರಬೇತಿಗೆ ಅರ್ಜಿ
0
ಮಾರ್ಚ್ 10, 2019
ಕಾಸರಗೋಡು: ಜಿಲ್ಲಾ ಸೈನಿಕ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಮುಂದಿನ ಆರ್ಥಿಕ ವರ್ಷದಲ್ಲಿ ಕೆಲ್ಟ್ರಾನ್ ಮುಖಾಂತರ ಕಾಸರಗೋಡಿನಲ್ಲಿ ನಡೆಸುವ 3 ತಿಂಗಳಿಂದ 6 ತಿಂಗಳ ವರೆಗಿನ ಡಿ.ಸಿ.ಎ, ಡಿ.ಟಿ.ಪಿ., ವರ್ಡ್ ಪೆÇ್ರಸೆಸಿಂಗ್ ಆ್ಯಂಡ್ ಡಾಟಾ ಎಂಟ್ರಿ, ಹಾರ್ಡ್ ವೇರ್ ಆ್ಯಂಡ್ ನೆಟ್ ವಕಿರ್ಂಗ್, ಮೆಂಟೆನೆನ್ಸ್, ಟಾಲಿ ಆ್ಯಂಡ್ ಎಂ.ಎಸ್.ಆಫೀಸ್, ಫೈಲ್ ಸೇಫ್ಟಿ, ಹೆಲ್ತ್ ಕೇರ್ ಆ್ಯಂಡ್ ಡಾಟಾ ಮೆನೇಜ್‍ಮೆಂಟ್ ಎಂಬ ಉಚಿತ ತರಬೇತಿಗಳಿಗೆ ನಿವೃತ್ತ ಸೈನಿಕರು, ಸೈನಿಕರ ವಿಧವೆಯರು, ಅವರ ಆಶ್ರಿತರು ಮೊದಲಾದವರಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಮಾ.15ರ ಮುಂಚಿತವಾಗಿ ದಾಖಲೆಗಳ ಸಹಿತ ಜಿಲ್ಲಾ ಸೈನಿಕ ಕಲ್ಯಾಣ ಕಚೇರಿಗೆ ಅರ್ಜಿ ಸಲ್ಲಿಸಬೇಕು. ಮಾಹಿತಿಗೆ ದೂರವಾಣಿ ಸಂಖ್ಯೆ: 04994-256860 ಸಂಪರ್ಕಿಸಬಹುದು.




