ಪೈವಳಿಕೆ ಎಡರಂಗ, ಐಕ್ಯರಂಗ ಜಂಟಿ ಆಡಳಿತ- ವಿಶ್ವಾಸ ಮತ ಸಾಬಿತುಪಡಿಸಲು ಬಿಜೆಪಿ ಆಗ್ರಹ
0
ಮಾರ್ಚ್ 10, 2019
ಕುಂಬಳೆ: ರಾಜಕೀಯ ಲಜ್ಜೆಗೇಡಿತನವಿಲ್ಲದೆ, ಅಧಿಕಾರಕ್ಕಾಗಿ ಪೈವಳಿಕೆ ಗ್ರಾಮ ಪಂಚಾಯತಿಯಲ್ಲಿ ಅಡಳಿತ ನಡೆಸುತ್ತಿರುವ ಸಿಪಿಐಎಂ, ಸಿಪಿಐ, ಕಾಂಗ್ರೆಸ್, ಮುಸ್ಲಿಂಲೀಗ್ ಸಮ್ಮಿಶ್ರ ಆಡಳಿತದಲ್ಲಿ ಗ್ರಾಮ ಪಂಚಾಯತಿ ಆಡಳಿತ ಸಂಪೂರ್ಣ ನಿಷ್ಕ್ರೀಯಗೊಂಡಿದ್ದು ಕೇವಲ ಅವ್ಯವಹಾರ ಮಾತ್ರ ಎಡರಂಗ, ಐಕ್ಯರಂಗದ ಆಡಳಿತದ ಉದ್ದೇಶ ಎಂದು ಬಿಜೆಪಿ ಆರೋಪಿಸಿ ಎಡರಂಗ, ಐಕ್ಯರಂಗದ ಜಂಟಿ ಆಡಳಿತೆಯ ವಿರುದ್ಧ ವಿಶ್ವಾಸ ಮತ ಸಾಬೀತು ಪಡಿಸಲು ಬಿಜೆಪಿ ಅವಿಶ್ವಸ ಗೊತ್ತುವಳಿಗೆ ನಿರ್ಣಯಿಸಿದೆ.
ಇದರ ಭಾಗವಾಗಿ ಬಿಜೆಪಿ ಸದಸ್ಯರು ಈಗಾಗಲೇ ಅಧಿಕಾರಿಗಿಗೆ ಪತ್ರ ನೀಡಿ ಮುಂದಿನ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಗ್ರಾಮ ಪಂಚಾಯತಿಯಲ್ಲಿ ಬೀದಿದೀಪ ಅಳವಡಿಕೆಗೆಯಲ್ಲೂ ತಾರತಮ್ಯ ಹಾಗೂ ಸ್ವಜನ ಪಕ್ಷಪಾತ, ಉದ್ಯೋಗ ಖಾತರಿ ಯೋಜನೆಯನ್ನು ಬುಡಮೇಲುಗೊಳಿಸಲಾಗುತ್ತಿದೆ, ಸರಕಾರದ ಯಾವುದೇ ಜನಪರ ಯೋಜನೆಗಳು ಪೈವಳಿಕೆಯಲ್ಲಿ ಜಾರಿಯಗುತಿಲ್ಲ ಎಂದು ಬಿಜೆಪಿ ಆರೋಪಿಸಿದೆ.
ಸಿಪಿಐಎಂ ನ ಅಧ್ಯಕ್ಷೆ ಸಿಪಿಐ ಸದ್ಯಸ್ಯರ ಆಂತರಿಕ ಕಚ್ಚಾಟ, ಮುಸ್ಲಿಂಲೀಗ್ ಸದಸ್ಯರ ಅಧಿಕಾರ ದುರುಪಯೋಗ,ಸಿಪಿಎಂ ಹಾಗೂ ಐಕ್ಯರಂಗದ ಮಧ್ಯೆ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿದೆ. ಕಾರಸರಗೋಡು ಜಿಲ್ಲೆಯಲ್ಲಿ ಯೂತ್ ಕಾಂಗ್ರೆಸ್ ಕಾರ್ಯಕರ್ತರನ್ನು ಬರ್ಬರವಾಗಿ ಹತ್ಯೆ ಮಾಡಿದ ಕಮ್ಯುನಿಸ್ಟರು ಕೊಲೆ ರಾಜಕೀಯಕ್ಕೆ ಪೈವಳಿಕೆಯಲ್ಲಿ ಕ್ರೋಧವಿಲ್ಲದೆ ಇಲ್ಲಿ ಅಧಿಕಾರಕ್ಕಾಗಿ ಕಾಂಗ್ರೆಸ್ ಎಡರಂಗಕ್ಕೆ ಪೂರ್ಣ ಬೆಂಬಲ ಮುಂದುವರಿಸಿರುವುದು ಕಾಂಗ್ರೆಸ್‍ನ ನಿಷ್ಠಾವಂತ ಕಾರ್ಯಕರತರ ಮನಸ್ತಾಪಕ್ಕೆ ಕಾರಣ ವಾಗುತ್ತಿದೆ. ಕಾಂಗ್ರೆಸ್ ಪಕ್ಷದ ಅನೇಕ ಕಾರ್ಯಕರ್ತರು ಈಗಾಗಲೇ ಬಿಜೆಪಿಯ ನೇತಾರರ ಸಂಪರ್ಕದಲ್ಲಿದ್ದಾರೆ ಎಂದು ಬಿಜೆಪಿ ತಿಳಿಸಿದೆ.
ಕಾಂಗ್ರೆಸ್ ನೇತಾರರು ತಮ್ಮ ಕಾರ್ಯಕರ್ತರ ಬರ್ಬರ ಕೊಲೆಯ ಮಧ್ಯೆ ಪೈವಳಿಕೆ, ಎಣ್ಮಕಜೆ ಪಂಚಾಯತಿಗಳ ಆಡಳಿತ ನಷ್ಟವಾಗುವ ಭೀತಿಯಿಂದ ಎಡರಂಗದ ಕೊಲೆ ರಾಜಕೀಯವನ್ನು ವಿರೋಧಿಸದೆ ಕೊಲೆಯನ್ನೇ ಮುಚ್ಚಿ ಹಾಕುವ ಯತ್ನದಲ್ಲಿದೆ ಎಂದು ಬಿಜೆಪಿ ಆರೋಪಿಸಿದೆ.
ವಿಶ್ವಾಸ ಮತ ಯಾಚನೆಯಲ್ಲಿ ಕಾಂಗ್ರೆಸ್-ಮುಸ್ಲಿಂಲಿಗ್ ಪಕ್ಷಗಳು ಮತ್ತೆ ಎಡರಂಗವನ್ನು ಬೆಂಬಲಿಸಿದರೆ ಅದು ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ನಾಶಕ್ಕೆ ನಾಂದಿ ಆಗಲಿದೆ ಎಂದು ಬಿಜೆಪಿ ಮಂಡಲ ಸಮಿತಿ ಎಚ್ಚರಿಸಿದೆ.
ಎಡರಂಗ ಅಧಿಕಾರಕಾಗಿ ಐಕ್ಯರಂಗದೊಂದಿಗೆ ಹೊಂದಾಣಿಕೆ ಮಾಡಿಕೊಳಳ್ಳುವ ಬದಲು ಎಡರಂಗ ಐಕ್ಯರಂಗ ವಿಲೀನವಾಗಲಿ ಎಂದು ಬಿಜೆಪಿ ಲೇವಡಿ ಮಾಡಿದೆ.




