HEALTH TIPS

ಒಗ್ಗಟ್ಟಿನ ಬಾಳ್ವೆ ಭಾರತೀಯ ಪರಂಪರೆ-ಜಸ್ಟೀಸ್.ಕೆ.ಎಲ್.ಮಂಜುನಾಥ

ಕುಂಬಳೆ : ಗಡಿನಾಡು ಕಾಸರಗೋಡು ಬಹುಭಾಷೆ, ಸಂಸ್ಕøತಿಗಳಿಂದ ಪುಟ್ಟ ಭಾರತದಂತಿದೆ. ಇಲ್ಲಿನ ವೈವಿಧ್ಯಮಯ ಸಂಸ್ಕøತಿ, ಆಚಾರ ವಿಚಾರಗಳು, ನಾನಾ ಭಾಷಿ, ಆಚಾರ-ಅನುಷ್ಠಾನಗಳ ಮಧ್ಯೆ ಪರಸ್ಪರ ಸಾಮರಸ್ಯದಿಂದ ಬದುಕು ನಡೆಸುತ್ತಿರುವುದು ನಿಜಾರ್ಥದ ಮಾನವ ಬದುಕಿನ ಸಾರ್ಥಕತೆಯ ದ್ಯೋತಕವಾಗಿದೆ. ಎಲ್ಲರೂ ದೇವರ ಮಕ್ಕಳೆಂಬಂತೆ ಸಮಾಜದಲ್ಲಾಗುವ ಗೊಂದಲಗಳಿಗೆ ವಿಷಬೀಜವನ್ನು ಬಿತ್ತದೆ ಒಗ್ಗಟ್ಟಿನಿಂದ ಬಾಳುವುದೇ ಭಾರತೀಯ ಪರಂಪರೆ ಎಂದು ಕರ್ನಾಟಕ ರಾಜ್ಯ ಗಡಿ ಮತ್ತು ನದಿಗಳ ರಕ್ಷಣಾ ಆಯೋಗದ ಅಧ್ಯಕ್ಷ ಜಸ್ಟೀಸ್ ಕೆ.ಎಲ್.ಮಂಜುನಾಥ ಅವರು ಅಭಿಪ್ರಾಯಪಟ್ಟರು. ಮಂಜೇಶ್ವರ ಬ್ಲಾಕ್ ಪಂಚಾಯತಿ ನೇತೃತ್ವದಲ್ಲಿ ಸೆಕೆಂಡರಿ ಪಾಲೀಟಿವ್ ಕೇರ್ (ಉಪಶಾಮಕ ಆರೈಕೆ) ಹಾಗೂ ಮಂಗಲ್ಪಾಡಿ ತಾಲೂಕು ಆಸ್ಪತ್ರೆಯ ಜಂಟಿ ಆಶ್ರಯದಲ್ಲಿ ಶನಿವಾರ ಶಿರಿಯದ ವಳಯಂ ಡಿಎಂ ಕಬಾನಾ ರೆಸೋರ್ಟ್ ಪರಿಸರದಲ್ಲಿ ನಡೆದ ಸ್ನೇಹ ಸ್ಪರ್ಶ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಜಾಗತೀಕರಣದ ಪ್ರಭಾದಿಂದ ಭಾರತೀಯ ಜಾನಪದ ಸಂಸ್ಕøತಿಗಳು ನಾಶದ ಭೀತಿಯಲ್ಲಿವೆ. ಜಾನಪದ ಸೊಗಡಿನ ಮೂಲವನ್ನು ಉಳಿಸಿಕೊಳ್ಳಲು ಕಷ್ಟವಾಗುತ್ತಿದೆ. ಇತಿಹಾಸವನ್ನು ಅರಿಯದವ ಯಾವುದೇ ಕಾರಣಕ್ಕೂ ಇತಿಹಾಸವನ್ನು ನಿರ್ಮಿಸಲು ಸಾಧ್ಯವಿಲ್ಲ. ಆದ್ದರಿಂದ ನಮ್ಮ ಪೂರ್ವಜರು ಹಾಕಿಕೊಟ್ಟ ದಾರಿಯಲ್ಲಿ ಸಾಗುವ ಮೂಲಕ ಸಂಸ್ಕøತಿಯನ್ನು ಮುಂದಿನ ಪೀಳಿಗೆಗೂ ಕೊಂಡೊಯ್ಯುವ ಮಹತ್ತರ ಜವಾಬ್ದಾರಿಯೂ ಪ್ರಸ್ತುತ ಅಗತ್ಯ. ಮಕ್ಕಳನ್ನು ಸಮಾಜದ ಸೊತ್ತಾಗಿ ಪರಿವರ್ತಿಸುವಲ್ಲಿ ತಾಯಂದಿರ ಪ್ರಯತ್ನ ಹೆಚ್ಚಿದೆ ಎಂದು ಅವರು ತಿಳಿಸಿದರು. ಮಂಜೇಶ್ವರ ಬ್ಲಾಕ್ ಪಂಚಾಯತಿ ಅಧ್ಯಕ್ಷ ಎಕೆಎಂ ಅಶ್ರಫ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತಿ ಸದಸ್ಯೆ ಫರೀದಾ ಶಕೀರ್, ವರ್ಕಾಡಿ ಪಂಚಾಯತಿ ಅಧ್ಯಕ್ಷ ಅಬ್ದುಲ್ ಮಜೀದ್, ಡಿಎಂ ಕಬಾನಾ ರೆಸೋರ್ಟ್‍ನ ಮಾಲಕ ಡಿಎಂ ಬಶೀರ್, ಬ್ಲಾಕ್ ಪಂ. ಆರೋಗ್ಯ ಮತ್ತು ಶಿಕ್ಷಣ ಸಮಿತಿ ಅಧ್ಯಕ್ಷ ಮೊಹಮ್ಮದ್ ಮುಸ್ತಫಾ, ಸುಹಾರಾ, ಬ್ಲಾಕ್ ಪಂ.ಸದಸ್ಯರಾದ ಸಾಹಿರಾ ಬಾನು, ಮಿಸ್ಬಾನಾ, ಹಸೀನಾ, ಮಂಜೇಶ್ವರ ಪಂ.ಉಪಾಧ್ಯಕ್ಷೆ ಶಶಿಕಲಾ, ಮಂಗಲ್ಪಾಡಿ ಪಂ.ಉಪಾಧ್ಯಕ್ಷೆ ಜಮೀಲಾ ಸಿದ್ದೀಕ್, ಬೀಫಾತಿಮಾ, ಯಕ್ಷಧ್ರ್ರುವ ಪಟ್ಲ ಫೌಂಡೇಶನ್ ಕುಂಬಳೆ ಘಟಕಾಧ್ಯಕ್ಷ ಜಗನ್ನಾಥ ಶೆಟ್ಟಿ ಕುಂಬಳೆ, ಕಾಸರಗೋಡು ಸರಕಾರಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ, ಕರ್ನಾಟಕ ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕದ ಉಪಾಧ್ಯಕ್ಷ ಪೆÇ್ರ.ಎ.ಶ್ರೀನಾಥ್, ಕಾಸರಗೋಡು ಗಡಿನಾಡ ಸಾಹಿತ್ಯ ಸಾಂಸ್ಕøತಿಕ ಅಕಾಡೆಮಿ ಅಧ್ಯಕ್ಷ ಪ್ರಭಾಕರ ಕಲ್ಲೂರಾಯ ಬನದಗದ್ದೆಮೊದಲಾದವರು ಉಪಸ್ಥಿತರಿದ್ದರು. ಪಾಲೀಟಿವ್ ಕೇರ್ ಸದಸ್ಯ ಕರೀಂ ಪ್ರಾರ್ಥನೆ ಹಾಡಿದರು. ಆರೋಗ್ಯಾಧಿಕಾರಿ ಡಾ.ಶೈನಾ ಸ್ವಾಗತಿಸಿ, ಬ್ಲಾಕ್ ಪಂಚಾಯತಿ ಸದಸ್ಯೆ ಮಮತಾ ದಿವಾಕರ ವಂದಿಸಿದರು. ಇದೇ ವೇಳೆ ಶುಕ್ರವಾರ ಅಗಲಿದ ಕರ್ನಾಟಕ ಜಾನಪದ ಪರಿಷತ್ತು ಬೆಂಗಳೂರು ಕೇರಳ ಗಡಿನಾಡ ಘಟಕ ಕಾಸರಗೋಡು ಇದರ ಕಾರ್ಯದರ್ಶಿಯಾಗಿದ್ದ ಕೇಳು ಮಾಸ್ತರ್ ಅಗಲ್ಪಾಡಿ ಹಾಗೂ ಇತ್ತೀಚೆಗೆ ದೇಶಕ್ಕೋಸ್ಕರ ಪ್ರಾಣತ್ಯಾಗ ಗೈದ ಯೋಧರಿಗೆ ಶ್ರದ್ಧಾಂಜಲಿಯನ್ನು ಅರ್ಪಿಸಲಾಯಿತು. ಬಳಿಕ ಮಂಜೇಶ್ವರ ಗೋವಿಂದ ಪೈ ಕಾಲೇಜಿನ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮ, ಸಿನಿಮಾ ಕಲಾವಿದ ಸುಮಿತ್ ಅವರಿಂದ ಮಿಮಿಕ್ರಿ ಸಹಿತ ವಿವಿಧ ಮನೋರಂಜನಾ ಕಾರ್ಯಕ್ರಮ ಜರಗಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries