ಎಣ್ಮಕಜೆ ಗ್ರಾಮ ಪಂಚಾಯತಿ ಕುಟುಂಬಶ್ರೀ-ಮಹಿಳಾ ದಿನಾಚರಣೆ
0
ಮಾರ್ಚ್ 10, 2019
ಪೆರ್ಲ: ಎಣ್ಮಕಜೆ ಗ್ರಾಮ ಪಂಚಾಯತಿ ಕುಟುಂಬಶ್ರೀ ಸಿ.ಡಿ.ಯಸ್ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಶುಕ್ರವಾರ ಆಚರಿಸಲಾಯಿತು. ದಿನಾಚರಣೆಯನ್ನು ಎಣ್ಮಕಜೆ ಗ್ರಾಮ ಪಂಚಾಯತು ಅಧ್ಯಕ್ಷೆ ಶಾರದಾ ವೈ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು, ಮಹಿಳಾ ಅಭಿವೃದ್ದಿಗೆ ಸ್ವಾತಂತ್ರ್ಯಾ ನಂತರ ರಾಷ್ಟ್ರದಲ್ಲಿ ಹಮ್ಮಿಕೊಂಡ ಚಟುವಟಿಕೆಗಳು ಅಪರಿಮಿತವಾದ ಬೆಂಬಲವನ್ನು ನೀಡಿ ಮುನ್ನಡೆಸಿದೆ ಎಂದು ತಿಳಿಸಿದರು. ಸಮಾಜದ ಎಲ್ಲಾ ಕ್ಷೇತ್ರಗಳಲ್ಲೂ ಉನ್ನತ ಮಟ್ಟದಲ್ಲಿ ಸ್ಥಾನ-ಮಾನಗಳನ್ನು ಹೊಂದುವ ಮೂಲಕ ನಿರ್ಣಾಯಕಳಾಗಿ ಬೆಳವಣಿಗೆ ಹೊಂದಲು ಸಾಧ್ಯವಾಗಿದ್ದು, ಇನ್ನಷ್ಟು ಸಾಧನೆಗಳ ಮೆಟ್ಟಲೇರುವ ಅವಕಾಶಗಳಿವೆ ಎಂದು ಅವರು ತಿಳಿಸಿದರು.
ಸಭೆಯ ಅಧ್ಯಕ್ಷತೆಯನ್ನು ಸಿ.ಡಿ.ಯಸ್ ಅಧ್ಯಕ್ಷೆ ಶಾರದಾ ವಹಿಸಿದ್ದರು. ಸಭೆಯಲ್ಲಿ ಎಣ್ಮಕಜೆ ಗ್ರಾಮ ಪಂಚಾಯತಿ ವಿದ್ಯಾಭ್ಯಾಸ ಸ್ಥಾಯಿ ಸಮಿತಿ ಅಧ್ಯಕ್ಷೆ ಆಯಿಷಾ ಎ.ಎ, ಸದಸ್ಯರಾದ ಮಲ್ಲಿಕಾ ಜೆ. ರೈ, ಸಿ.ಡಿ.ಯಸ್ ಉಪಾಧ್ಯಕ್ಷೆ ಶಶಿಕಲಾ.ಕೆ, ಕುಟುಂಬಶ್ರೀ ಅಧಿಕಾರಿಗಳು ಉಪಸ್ಥಿತರಿದ್ದರು.
ಮಹಿಳಾ ದಿನದ ಮಹತ್ವ, ಮಹಿಳೆಯರ ಸ್ಥಾನ-ಮಾನ, ಹಕ್ಕುಗಳ ಬಗ್ಗೆ ಚೈಲ್ಡ್‍ಲೈನ್ ಅಧಿಕಾರಿಗಳು ತರಗತಿಯನ್ನು ನಡೆಸಿದರು. ಇದೇ ಸಂದರ್ಭದಲ್ಲಿ ಕುಟುಂಬಶ್ರೀ ಘಟಕದ ಸದಸ್ಯೆಯರಿಂದ ಸಂಗ್ರಹಿಸಿದ ಸ್ನೇಹ ನಿಧಿಯನ್ನು ಫಲಾನುಭವಿಗಳಿಗೆ ವಿತರಿಸಲಾಯಿತು.ಪೆರ್ಲ ಪೇಟೆಯಲ್ಲಿ ಮಹಿಳೆಯರಿಂದ ರ್ಯಾಲಿ ನಡೆಯಿತು. ಸಿ.ಡಿ.ಯಸ್ ಉಪಾಧ್ಯಕ್ಷೆ ಶಶಿಕಲಾ.ಕೆ. ಸ್ವಾಗತಿಸಿ, ಸಿ.ಡಿ.ಯಸ್ ಸದಸ್ಯೆ ಪ್ರೇಮಲತಾ ವಂದಿಸಿದರು.




