2019 ನೇ ಸಾಲಿನ ಕೊಡಗಿನಗೌರಮ್ಮ ಕಥಾಸ್ಪರ್ಧೆಗೆ ಕತೆಗಳ ಆಹ್ವಾನ
0
ಮಾರ್ಚ್ 10, 2019
ಕುಂಬಳೆ: ಕೊಡಗಿನ ಗೌರಮ್ಮ ದತ್ತಿನಿಧಿ ಹಾಗೂ ಹವ್ಯಕ ಮಹಾಮಂಡಲ ಮಾತೃಮಂಡಳಿ ಸಹಯೋಗದಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಹವ್ಯಕ ಮಹಿಳೆಯರಿಗಾಗಿ ಸಣ್ಣ ಕಥಾ ಸ್ಪರ್ಧೆ ಆಯೋಜಿಸಿದ್ದು ಮೇ.30ರ ಮೊದಲು ಕಳಿಸಲು ಕೋರಲಾಗಿದೆ. ಅಖಿಲ ಭಾರತ ಮಟ್ಟದಲ್ಲಿ ಸ್ಪರ್ಧೆ ಆಯೋಜಿಸಲಾಗಿದ್ದು, ಹವ್ಯಕ ಮಹಿಳೆಯರು(ವಯೋಮಿತಿ ಇಲ್ಲ, ಹೈಸ್ಕೂಲ್, ಕಾಲೇಜು ವಿದ್ಯಾರ್ಥಿನಿಯರು) ಭಾಗವಹಿಸಬಹುದು. ಸೀಮೆಗಳ ಪರಿಧಿಗಳಿಲ್ಲದೆ ಹವ್ಯಕ ಭಾಷೆಯಲ್ಲಿ ಕಥೆ ನಿರೂಪಿಸಲ್ಪಟ್ಟಿರಬೇಕು. ಈ ವರೆಗಿನ ಪ್ರಥಮ ವಿಜೇತೆಯರಿಗೆ ಅವಕಾಶವಿಲ್ಲ ಈ ಸ್ಪರ್ಧೆಯಲ್ಲಿ ಅವಕಾಶ ನೀಡಲಾಗುವುದಿಲ್ಲ.ಈ ವರೆಗೆ ಪ್ರಕಟವಾಗದ ಸಾಮಾಜಿಕ ಕಥೆಯೊಂದನ್ನು ಸಾದಾರಣ 8 ಪುಟಕ್ಕೆ ಮೀರದಂತೆ ಕಾಗದದ ಒಂದೇ ಮಗ್ಗುಲಲ್ಲಿ ಸ್ಪುಟವಾಗಿ ಬರೆದು ಯಾ ಟೈಪ್ ಮಾಡಿ ಹೆಸರು,ವಿಳಾಸಗಳನ್ನು ಪ್ರತ್ಯೇಕವಾಗಿ ಲಗತ್ತಿಸಿ ವಿಜಯಾಸುಬ್ರಹ್ಮಣ್ಯ, ಕಾರ್ಯದರ್ಶಿ ಕೊಡಗಿನ ಗೌರಮ್ಮ ಕಥಾಸ್ಪರ್ಧೆ,
ಕಾರ್ತಿಕೇಯ, ನಾರಾಯಣಮಂಗಲ. ಕುಂಬಳೆ. ಕಾಸರಗೋಡು ಜಿಲ್ಲೆ. 671321. ಮೊ.ಸಂಖ್ಯೆ: 8547214125. ಎಂಬ ವಿಳಾಸಕ್ಕೆ ಕಳಿಸಬಹುದು. ಕಥಾ ಸ್ಪರ್ಧೆಯ ಪ್ರಥಮ ಬಹುಮಾನ ಪ್ರಶಸ್ತಿ ಪತ್ರ, ಸ್ಮರಣಿಕೆ ಜೊತೆಗೆ, ನಗದು ಪ್ರಥಮ-3ಸಾವಿರ, ದ್ವಿತೀಯ- 2 ಸಾವಿರ, ತೃತೀಯ- 1ಸಾವಿರ ರೂ.ನೀಡಿ ಗೌರವಿಸಲಾಗುವುದು ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




