17ರಂದು ಬದಿಯಡ್ಕದಲ್ಲಿ ಕನ್ನಡದ ಮಡಿಲು ವಿಶೇಷ ಕಾರ್ಯಕ್ರಮ
0
ಮಾರ್ಚ್ 14, 2019
ಬದಿಯಡ್ಕ: ಪೆರಿಯಾದ ಕೇರಳ ಕೇಂದ್ರ ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಸ್ನಾತಕೋತ್ತರ ವಿಭಾಗ ಆರಂಭಿಸಲು ಕೇಂದ್ರ ಮಾನವಸಂಪನ್ಮೂಲ ಇಲಾಖೆ ಆದೇಶ ಹೊರಡಿಸಿದ್ದು, ಇದಕ್ಕಾಗಿ ಆರಂಭದಿಂದಲೇ ಅವಿರತ ಶ್ರಮ ವಹಿಸಿದ ಕನ್ನಡ ಹೋರಾಟಗಾರ ಬಿ. ಪುರುಷೋತ್ತಮ ಮಾಸ್ತರ್ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಅಡ್ವಾ. ಕೆ.ಶ್ರೀಕಾಂತ್ ಅವರಿಗೆ ಮೀಡಿಯಾ ಕ್ಲಾಸ್ಸಿಕಲ್ಸ್ ಹಾಗೂ ಕನ್ನಡ ಅಭಿಮಾನಿಗಳಿಂದ ಅಭಿನಂದನಾ ಕಾರ್ಯಕ್ರಮ ಕನ್ನಡದ ಮಡಿಲು ಮಾ.17ರಂದು ಅಪರಾಹ್ನ 3.30ಕ್ಕೆ ಬದಿಯಡ್ಕದ ರಾಮಲೀಲಾ ಯೋಗ ಶಿಕ್ಷಣ ಕೇಂದ್ರ ಈ ವಿಶೇಷ ಕಾರ್ಯಕ್ರಮಕ್ಕೆ ಕನ್ನಡ ಅಭಿಮಾನಿಗಳು, ಕನ್ನಡ ಅಧ್ಯಾಪಕರು, ಕನ್ನಡ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮೀಡಿಯಾ ಕ್ಲಾಸಿಕಲ್ಸ್ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




