ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆ-ಜಿಲ್ಲೆಯಲ್ಲಿ 170 ಮಂದಿಗೆ ಉದ್ಯೋಗ ಲಭ್ಯ
0
ಮಾರ್ಚ್ 07, 2019
ಕಾಸರಗೋಡು: ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆ ಪ್ರಕಾರ ಜಿಲ್ಲೆಯಲ್ಲಿ 170 ಮಂದಿಗೆ ಉದ್ಯೋಗ ಲಭಿಸಿದೆ.
2014ರಲ್ಲಿ ಈ ಯೋಜನೆ ಜಿಲ್ಲೆಯಲ್ಲಿ ಅನುಷ್ಠಾನಕ್ಕೆ ಬಂದಿದೆ. ಅಲ್ಪಸಂಖ್ಯಾಕ ವಿದ್ಯಾರ್ಥಿಗಳಿಗೆ ಸ್ವದೇಶದಲ್ಲಿ, ವಿದೇಶದಲ್ಲಿ ಅತ್ಯುತ್ತಮ ಉದ್ಯೋಗ ಲಭಿಸುವ ನಿಟ್ಟಿನಲ್ಲಿ ದೀನ್ ದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆ ಪೂರಕವಾಗಿದೆ. ಕೇಂದ್ರ ಗ್ರಾಮ ವಿಕಸನ ಸಚಿವಾಲಯ ಕುಟುಂಬಶ್ರೀ ಮೂಲಕ ರಾಜ್ಯದಲ್ಲಿ ಜಾರಿಗೊಳಿಸುವ ಉದ್ಯೋಗ ಕೇಂದ್ರಿತ ತರಬೇತಿ ಕಾರ್ಯಕ್ರಮವಾಗಿರುವ ಡಿ.ಡಿ.ಯು.ಜಿ.ಕೆ.ವೈ. ಯೋಜನೆ ಪ್ರಕಾರ ಮಂಜೂರಾದ ಸೀಟುಗಳಲ್ಲಿ ಶೇ.60 ಅಲ್ಪಸಂಖ್ಯಾತ ವಿಭಾಗಕ್ಕೂ, ಶೇ.30 ಪರಿಶಿಷ್ಟ ಜಾತಿ-ಪಂಗಡದ ಜನಾಂಗಕ್ಕೂ, ಶೇ.10 ಸಾಮಾನ್ಯ ವಿಭಾಗಕ್ಕೂ ಮೀಸಲಿರಿಸಲಾಗಿದೆ.
ಯೋಜನೆಯ ಅಂಗವಾಗಿ ಪೆರಿಯದ ಶ್ರೀ ನಾರಾಯಣ ಕಾಲೇಜ್ ಆಫ್ ಮೆನೇಜ್‍ಮೆಂಟ್ ಸ್ಟಡೀಸ್ ಉದ್ಯೋಗಾರ್ಥಿಗಳಿಂದ ಅರ್ಜಿ ಕೋರಿದೆ. ಆಸಕ್ತರು ಮಾ.15ರ ಮುಂಚಿತವಾಗಿ ಕುಟುಂಬಶ್ರೀ ಜಿಲ್ಲಾ ಮಿಷನ್ ಯಾ ಪೆರಿಯ ಶ್ರೀ ನಾರಾಯಣ ಕಾಲೇಜ್ ಆಫ್ ಆಟ್ರ್ಸ್ ಆಂಡ್ ಸಯನ್ಸ್‍ನಲ್ಲಿ ಅರ್ಜಿ ಸಲ್ಲಿಸಬಹುದು. 18ರಿಂದ 35 ವರ್ಷ ಪ್ರಾಯದ ನಡುವಿನ ವಯೋಮಾನದವರು ಅರ್ಜಿಸಲ್ಲಿಸಬಹುದು.
ಜಿಲ್ಲೆಯಲ್ಲಿ 2014 ರಲ್ಲಿ ಆರಂಭಿಸಲಾದ ಈ ಯೋಜನೆ ಪ್ರಕಾರ 1720 ಮಂದಿ ಈಗಾಗಲೇ ನೌಕರಿ ಗಳಿಸಿಕೊಂಡಿದ್ದಾರೆ. ಅನೇಕ ಕಾರಣಗಳಿಂದ ಅರ್ಧದಲ್ಲೇ ಕಲಿಕೆ ಮೊಟಕುಗೊಳಿಸಿದ ಯುವ ಜನತೆಗೆ ಸಂಪೂರ್ಣ ತರಬೇತಿ ನೀಡಿ, ಅವರನ್ನು ಸಿದ್ಧಗೊಳಿಸಿ, ಅವರ ಶಿಕ್ಷಣಾರ್ಹತೆಗೆ ತಕ್ಕ ಉದ್ಯೋಗ ಒದಗಿಸುವುದು ಈ ಯೋಜನೆಯ ಉದ್ದೇಶ.
ವಿವಿಧ ವಿಷಯಗಳಲ್ಲಿ ಮೂರು ತಿಂಗಳಿಂದ 6 ತಿಂಗಳ ವರೆಗಿನ ಅವಧಿಯ ತರಬೇತಿಗೆ ಪ್ರವೇಶಾತಿ ನಡೆಯಲಿದೆ. ಕಡಿಮೆ ಅವಧಿಯ ತರಬೇತಿಗಳಾದ ಬ್ಯಾಂಕಿಂಗ್ ಆ್ಯಂಡ್ ಅಕೌಂಟಿಂಗ್, ಹಾಸ್ಪಿಟಾಲಿಟಿ, ಫ್ಯಾಷನ್ ಡಿಸೈನಿಂಗ್ ತರಬೇತಿಗಳು ಉಚಿತವಾಗಿ ವಿದ್ಯಾರ್ಥಿ ವೇತನ ಸಹಿತ ತರಬೇತಿ ಲಭಿಸಲಿವೆ. ಸ್ಪೋಕನ್ ಇಂಗ್ಲೀಷ್ ತರಗತಿ, ಕಂಪ್ಯೂಟರ್ ತರಗತಿ, ವ್ಯಕ್ತಿತ್ವ ವಿಕಸನ ತರಬೇತಿ ಇತ್ಯಾದಿ ತರಬೇತಿಗಳ ಅಂಗವಾಗಿ ವಿದ್ಯಾರ್ಥಿಗಳಿಗೆ ಲಭಿಸಲಿವೆ. 6 ತಿಂಗಳ ಅವಧಿಯ ತರಬೇತಿಗಳೊಂದಿಗೆ ಉಚಿತ ಭೋಜನ, ವಸತಿ ಲಭಿಸಲಿದೆ. ಮಾಹಿತಿಗೆ 9745611109, 9188528771, 9188528772 ನಂಬ್ರದಲ್ಲಿ ಸಂಪರ್ಕಿಸಬಹುದು.




