HEALTH TIPS

9 ನಿಮಿಷದಲ್ಲಿ ಆರು ಅವಳಿ ಮಕ್ಕಳಿಗೆ ಜನ್ಮ ನೀಡಿದ ಅಮೆರಿಕ ಮಹಿಳೆ!

ಹೌಸ್ಟನ್: ಅಮೆರಿಕದಲ್ಲಿ ಮಹಿಳೆಯೊಬ್ಬರು 9 ನಿಮಿಷಗಳಲ್ಲಿ ಆರು ಅವಳಿ ಮಕ್ಕಳಿಗೆ ಜನ್ಮ ನೀಡಿದ ಅಪರೂಪದ ಪ್ರಕರಣ ವರದಿಯಾಗಿದೆ. ಟೆಕ್ಸಾಸ್ ನ ಮಹಿಳಾ ಆಸ್ಪತ್ರೆಯಲ್ಲಿ ಈ ಅಪರೂಪದ ಘಟನೆ ನಡೆದಿದ್ದು, ಥೆಲ್ಮಾ ಚೈಕಾ ಎಂಬ ಮಹಿಳೆಯ ಹೊಟ್ಟೆ ಸಾಮಾನ್ಯ ಗರ್ಭಿಣಿಯ ಹೊಟ್ಟೆಗಿಂತ ದೊಡ್ಡದಾಗಿತ್ತು. ಈ ಮಹಿಳೆ ಶುಕ್ರವಾರ ಬೆಳಿಗ್ಗೆ 4:50-4:59ರ ಅವಧಿಯಲ್ಲಿ ಮೂರು ಜೊತೆ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಮೊದಲು ಹುಟ್ಟಿದ ಎರಡು ಜೊತೆ ಅವಳಿಗಳು ಗಂಡಾಗಿದ್ದು, ನಂತರ ಹುಟ್ಟಿದ ಅವಳಿ ಹೆಣ್ಣು. ತಾಯಿ ಹಾಗೂ ಆರು ಮಕ್ಕಳು ಆರೋಗ್ಯವಾಗಿವೆ. ವಿಶೇಷ ಘಟಕದಲ್ಲಿ ಅವರನ್ನು ಇಡಲಾಗಿದೆ. ಈ ರೀತಿ ಪ್ರಕರಣಗಳು ವರದಿಯಾಗುವುದು ಅಪೂರ್ವ. ವಿಶ್ವದಲ್ಲಿ ವರ್ಷಕ್ಕೆ ಇಂಥ ಒಂದು ಅಥವಾ ಎರಡು ಪ್ರಕರಣಗಳು ವರದಿಯಾಗಬಹುದು. ತಾಯಿ-ಮಕ್ಕಳು ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries