ಕೇಂದ್ರೀಯ ವಿವಿ ಕನ್ನಡ ಅಧ್ಯಯನ ಕೇಂದ್ರ ಸ್ಥಾಪನಾ ಆದೇಶ ಚಾರಿತ್ರಿಕ ದಾಖಲೆ-ಡಾ.ರತ್ನಾಕರ ಮಲ್ಲಮೂಲೆ ಕನ್ನಡಿದ ಮಡಿಲು ವಿಶೇಷ ಕಾರ್ಯಕ್ರಮ
0
ಮಾರ್ಚ್ 17, 2019
ಬದಿಯಡ್ಕ: ಕನ್ನಡ ಭಾಷೆ, ಸಂಸ್ಕøತಿಗೆ ಗಡಿನಾಡು ಕಾಸರಗೋಡಿನಲ್ಲಿ ಸವಾಲುಗಳು ತೀವ್ರಗೊಂಡಿರುವ ಈ ಹೊತ್ತಲ್ಲಿ ಕಾಸರಗೋಡು ಕೇಂದ್ರೀಯ ವಿವಿಗೆ ಕನ್ನಡ ಅಧ್ಯಯನ ಕೇಂದ್ರ ಮಂಜೂರಾತಿಯಾಗಿರುವುದು ಸ್ತುತ್ಯರ್ಹವಾದುದು. ಈ ನಿಟ್ಟಿನಲ್ಲಿ ಕೇಂದ್ರ ಸರಕಾರದ ಅನುಮೋದನೆ ಪಡೆಯುವಲ್ಲಿ ದುಡಿದ ಮಹನೀಯರನ್ನು ಅಅಭಿನಂದಿಸುತ್ತಿರುವುದು ಸಾಮಾಜಿಕ ಕರ್ತವ್ಯದ ಜೊತೆಗೆ ಅನುಸರಣೀಯ ಕಾರ್ಯ ಎಂದು ಕ.ಸಾ.ಪ.ಕೇರಳ ಗಡಿನಾಡ ಘಟಕಾಧ್ಯಕ್ಷ ಎಸ್.ವಿ.ಭಟ್ ಅಭಿಪ್ರಾಯ ವ್ಯಕ್ತಪಡಿಸಿದರು.
ಮೀಡಿಯಾ ಕ್ಲಾಸಿಕಲ್ಸ್ ಕಾಸರಗೋಡು ಸಂಸ್ಥೆ ಭಾನುವಾರ ಬದಿಯಡ್ಕದ ರಾರಲೀಲಾ ಸಭಾಂಗಣದಲ್ಲಿ ಆಯೋಜಿಸಿದ್ದ ಕನ್ನಡದ ಮಡಿಲು ವಿಶೇಷ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾಸರಗೋಡಿನ ಕನ್ನಡ ಅಸ್ಮಿತೆಯನ್ನು ಉಳಿಸುವ ನಿಟ್ಟಿನಲ್ಲಿ ನಿರಂತರ ಹೋರಾಟವೇ ಪರಿಣಾಮಕಾರಿಯಾದುದು ಎಂದು ತಿಳಿಸಿದ ಅವರು, ಕನ್ನಡ ಭಾಷೆ, ಸಂಸ್ಕøತಿ ಸಂವರ್ಧನೆಗೆ ವ್ಯಾಪಕ ಅವಕಾಶ ನೀಡುವ ಕೇಂದ್ರೀಯ ವಿವಿ ಕನ್ನಡ ಅಧ್ಯಯನ ವಿಭಾಗ ಅವಕಾಶಗಳ ಬಾಗಿಲು ತೆರೆಸಿದೆ ಎಂದು ತಿಳಿಸಿದರು. ವಿಶಾಲ ಸಾಂಸ್ಕøತಿಕತೆಯ ಹಿನ್ನೆಲೆಯ ಕನ್ನಡ ಭಾಷೆಯ ಅಧ್ಯಯನ ಹೊಸ ತಲೆಮಾರಿಗೆ ವಿವಿಧ ಆಯಾಮಗಳಲ್ಲಿ ಮಹತ್ವಪೂರ್ಣವಾಗಿದ್ದು, ವಿವಿಯ ಅಧ್ಯಯನ ವಿಭಾಗ ಗಡಿನಾಡಿನ ಹೊಸ ತಲೆಮಾರಿಗೆ ಲಭಿಸಿದ ವಿಶಿಷ್ಟ ಅವಕಾಶವಾಗಿದೆ ಎಂದು ತಿಳಿಸಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು, ಅಭಿನಂದನಾ ಭಾಷಣಗೈದ ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ಪ್ರಾಧ್ಯಾಯಕ, ಯಕ್ಷಗಾನ ಅಧ್ಯಯನ ಕೇಂದ್ರದ ಸಂಯೋಜನಾಧಿಕಾರಿ ಡಾ.ರತ್ನಾಕರ ಮಲ್ಲಮೂಲೆ ಅವರು ಮಾತನಾಡಿ, ಗಡಿನಾಡಿನ ವಿವಿಧ ಆಯಾಮಗಳ ಸಾಹಿತ್ಯ ಸಾಂಸ್ಕøತಿಕ ಚರಿತ್ರೆಗಳ ಅಧ್ಯಯನ- ದಾಖಲೆಗಳಿಗೆ ಅವಕಾಶವನ್ನು ಅಧ್ಯಯನ ಕೇಂದ್ರ ಸ್ಥಾಪನೆಯು ನೀಡಲಿದೆ. ಪ್ರಾಚೀನ ಪರಂಪರೆಯ ಕಾಸರಗೋಡಿನ ನಿಟ್ಟಿನಲ್ಲಿ ಈ ಅಧ್ಯಯನ ಕೇಂದ್ರದಲ್ಲಿ ಕನ್ನಡ ವಿಭಾಗ ಯಾವತ್ತೂ ಆಗಬೇಕಿತ್ತು. ಆದರೂ ಇದೀಗ ಅಂತಹ ಒಂದು ಕೇಂದ್ರ ಮಂಜೂರಾಗಿರುವುದು ಚಾರಿತ್ರಿಕ ಘಟನೆಯಾಗಿದೆ ಎಂದು ಅವರು ವಿಶ್ಲೇಶಿಸಿದರು. ಕೇಂದ್ರೀಯ ವಿದ್ಯಾಲಯದಲ್ಲಿ ಕನ್ನಡ ಅಧ್ಯಯನ ವಿಭಾಗ ಆರಂಭಗೊಳ್ಳುವುದರಿಂದ ಕಾಸರಗೊಡು ಮತ್ತು ಮಂಜೇಶ್ವರದ ಸರಕಾರಿ ಕಾಲೇಜಿನ ಕನ್ನಡ ವಿಭಾಗಕ್ಕೆ ತೊಂದರೆಗಳಿಗವೆ ಎಂಬ ಸುಳ್ಳು ವದಂತಿಗಳು ಇದೀಗ ವ್ಯಾಪಕಗೊಳ್ಳುತ್ತಿದೆ. ಆದರೆ ಕನ್ನಡ ಮನಸ್ಸುಗಳನ್ನು ಇಬ್ಬಾಗವಾಗಿಸುವ ಇಂತಹ ಭಯಗಳಿಗೆ ಅರ್ಥವಿಲ್ಲ ಎಂದು ತಿಳಿಸಿದ ಅವರು ಎರಡೂ ಕಾಲೇಜುಗಳ ಕನ್ನಡ ಭಾಷಾ ಪದವಿ, ಸ್ನಾತಕೋತ್ತರ ಪದವಿಗಳಿಗಲ್ಲಿ ಕನ್ನಡ ಉಳಿಸಲು ಮುನ್ನುಗ್ಗುವ ಛಲ ಈ ಮೂಲಕ ಪ್ರಾಧ್ಯಾಪಕರಲ್ಲಿ ಮೂಡಿಬರಲಿ ಎಂದು ತಿಳಿಸಿದರು.
ಕೇಂದ್ರೀಯ ವಿವಿ ಕನ್ನಡ ಅಧ್ಯಯನ ವಿಭಾಗದ ಆರಂಭದ ಹಿನ್ನೆಲೆಯಲ್ಲಿ ಪುರುಷೋತ್ತಮ ಮಾಸ್ತರ್ ಕಾಸರಗೋಡು ಮತ್ತು ನ್ಯಾಯವಾದಿ ಕೆ.ಶ್ರೀಕಾಂತ್ ಅವರ ನಿರಂತರ ಶ್ರಮ ಶ್ಲಾಘನೀಯ ಎಂದು ಉಲ್ಲೇಖಿಸಿದ ಅವರು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಭಾಷಾ ಅಭಿಮಾನದಿಂದ ನಡೆಸಲಾದ ಪ್ರಯತ್ನಗಳಿಗೆ ಕನ್ನಡಿಗರು ಎಂದಿಗೂ ಅಭಾರಿಗಳಾಗಬೇಕು ಎಂದು ತಿಳಿಸಿದರು.
ಕೇಂದ್ರೀಯ ವಿವಿ ಕನ್ನಡ ಅಧ್ಯಯನ ಕೇಂದ್ರ ಆರಂಭಿಸುವಲ್ಲಿ ಕಾರ್ಯನಿರ್ವಹಿಸಿದ ಪುರುಷೋತ್ತಮ ಮಾಸ್ತರ್ ಹಾಗೂ ನ್ಯಾಯವಾದಿ ಕೆ.ಶ್ರೀಕಾಂತ್ ಅವರನ್ನು ಕಾರ್ಯಕ್ರಮದಲ್ಲಿ ಅಭಿನಂದಿಸಲಾಯಿತು. ಅನಾರೋಗ್ಯದ ಕಾರಣ ಪುರುಷೋತ್ತಮ ಮಾಸ್ತರ್ ಕಾರ್ಯಕ್ರಮದಲ್ಲಿ ಭಾಗವಹಿಸಲಿಲ್ಲ.
ಮೀಡಿಯಾ ಕ್ಲಾಸಿಕಲ್ಸ್ ಕಾಸರಗೋಡಿನ ಅಧ್ಯಕ್ಷ ಶ್ರೀಕಾಂತ್ ನಾರಾಯಣ್ ನೆಟ್ಟಣಿಗೆ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಹರೀಶ್ ಪೆರ್ಲ, ನಿವೃತ್ತ ಪ್ರಾಂಶುಪಾಲ ಪ್ರೊ.ಎ.ಶ್ರೀನಾಥ್, ಗೋಪಾಲಕೃಷ್ಣ ಭಟ್ ಮುಳ್ಳೇರಿಯ, ಉದ್ಯಮಿ ಗಣೇಶ್ ಅಣಂಗೂರು ಉಪಸ್ಥಿತರಿದ್ದು ಶುಭಹಾರೈಸಿದರು.
ಮೀಡಿಯಾ ಕ್ಲಾಸಿಕಲ್ಸ್ ಸ್ಥಾಪಕಾಧ್ಯಕ್ಷ ಅಖಿಲೇಶ್ ನಗುಮುಗಂ ಸ್ವಾಗತಿಸಿದರು. ವಸಂತ ಬಾರಡ್ಕ ಪ್ರಾರ್ಥನೆ ಹಾಡಿದರು. ಕಾರ್ಯದರ್ಶಿ ಬಾಲಕೃಷ್ಣ ಅಚ್ಚಾಯಿ ವಂದಿಸಿದರು. ವಿದ್ಯಾ ಗಣೇಶ್ ಕಾಸರಗೋಡು ಕಾರ್ಯಕ್ರಮ ನಿರೂಪಿಸಿದರು.

