ಕಾಸರಗೋಡು ಜಿಲ್ಲೆಯಲ್ಲಿ ಕಾಂಗ್ರೆಸ್ ಪರ್ಯಾಟನೆ ಪಕ್ಷಿ.- ಕೆ. ಶ್ರೀಕಾಂತ್
0
ಮಾರ್ಚ್ 17, 2019
ಮಂಜೇಶ್ವರ: ಕಾಂಗ್ರೆಸ್ಸ್ ಹಾಗೂ ಎಡರಂಗ ಜಿಲ್ಲೆಯಲ್ಲಿ ಒಳಒಪ್ಪಂದ ರಾಜಕೀಯ ಮಾಡಿಕೊಂಡ ನಿರ್ಣಯದಂತೆ ಈ ಲೋಕಸಭೆಯಲ್ಲಿ ಕಾಂಗ್ರೆಸ್ ನಿಂದ ಸ್ಪರ್ದಿಸಲು ಮತ್ತೆ ಪರ್ಯಾಟನೆ ಪಕ್ಷಿಗಳಿಗೆ ಅವಕಾಶ ನೀಡಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ನ್ಯಾಯವಾದಿ. ಕೆ. ಶ್ರೀಕಾಂತ್ ಅಭಿಪ್ರಾಯಪಟ್ಟರು.
ಹೊಸಂಗಡಿ ಯಲ್ಲಿ ಬಿಜೆಪಿ ಮಂಜೇಶ್ವರ ಪಂಚಾಯತ್ ಸಮಿತಿ ಕಚೇರಿ ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.
ಕಾಂಗ್ರೆಸ್ ಕಳೆದ 20 ವರ್ಷಗಳಿಂದ ಲೋಕಸಭೆಗೆ ಜಿಲ್ಲೆಯವರಲ್ಲದ , ಜಿಲ್ಲೆಗೆ ಯಾವುದೇ ಕೊಡುಗೆ ನೀಡದ, ಕಾಂಗ್ರೆಸ್ ನ ಅನ್ಯ ಪ್ರದೇಶದ ನಾಯಕರನ್ನು ಇಲ್ಲಿಯ ಅಭ್ಯರ್ಥಿಗಳನ್ನಾಗಿಸಿ ವಂಚಿಸುತ್ತಿದೆ ಎಂದು ಆರೋಪಿಸಿದರು.
ಬಿಜೆಪಿ ರಾಷ್ಟ್ರದಲ್ಲಿ ಮತ್ತೆ ಮೋದಿ ನೇತೃತ್ವದಲ್ಲಿ ಅಧಿಕಾರಕ್ಕೆ ಬರಲಿದೆ ಕೆರಳದಿಂದಳು ಈ ಬಾರಿ ಬಿಜೆಪಿ ಸಂಸದರು ಮೋದಿ ಆಡಳಿತದಲ್ಲಿ ಕಾರ್ಯ ನಿರ್ವಹಿಸಿದ್ದಾರೆ ಎಂಬ ಭರವಸೆಯ ಮಾತುಗಳನ್ನಾಡಿದರು.
ಮಂಡಲಾಧ್ಯಕ್ಷ ಸತೀಶ್ಚಂದ್ರ ಭಂಡಾರಿ .ಕೆ. ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಬಾಲಕೃಷ್ಣ ಶೆಟ್ಟಿ, ಅಬ್ದುಲ್ಲಾ ಪಿ. ಎಂ. ಚಂದ್ರ ಇಚ್ಲಂ0ಗೋಡ್, ಗಿರಿಜಾ ಬಂಗೇರ, ಉಪಸ್ಥಿತರಿದ್ದರು. ತಾರಾನಾಥ ಸ್ವಾಗತಿಸಿ ,ಯಾಸ್ಪಲ್ ಉದ್ಯಾವರ ವಂದಿಸಿದರು.

