ವಿವಿಧ ಕಾಮಗಾರಿಗಳ ಅವಲೋಕನ ಸಭೆ
0
ಮಾರ್ಚ್ 19, 2019
ಕಾಸರಗೋಡು: ಜಿಲ್ಲೆಯಲ್ಲಿ ನಬಾರ್ಡ್ .ಐ.ಡಿ.ಎಫ್. ವ್ಯಾಪ್ತಿಯಲ್ಲಿ ಮಾ. 24 ವರೆಗೆ ಜಾರಿಗೊಳಿಸುವ ವಿವಿಧ ಕಾಮಗಾರಿಗಳ ಅವಲೋಕನ ಸಭೆ ಜಿಲ್ಲಾಧಿಕಾರಿ ಕಚೇರಿ ಕಿರು ಸಭಾಂಗದಲ್ಲಿ ಜರುಗಿತು.
ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅಧ್ಯಕ್ಷತೆ ವಹಿಸಿದ್ದರು. ಕಳೆದ ಅ.5ರಂದು ನಡೆಸಿದ ವಲಯ ಮಟ್ಟದ ಸಭೆಯಲ್ಲಿ ನಿರ್ಧರಿಸಿದ ಪ್ರಕಾರ ತುರ್ತಾಗಿ ಬಿಲ್ ಸಲ್ಲಿಸಲಿರುವ ವಿವಿಧ ನಿರಾಣ ಸಿಬ್ಬಂದಿ ಈ ತಿಂಗಳ 20ರ ಮುಂಚಿತವಾಗಿ ಹೆಡ್ ಕ್ವಾಟರ್ಸ್ ನಲ್ಲಿ ಬಿಲ್ ಗಳನನು ಸಲ್ಲಿಸಬೇಕು. ಜೊತೆಗೆ ಆರ್.ಐ.ಡಿಎಫ್.ನಲ್ಲಿ ಒಳಪಟ್ಟಿರುವ ಎಲ್ಲ ಕಾಮಗಾರಿಗಳ, ಫೀಲ್ಡ್ ಮಟ್ಟದ ಪ್ರಗತಿ ನಿಗದಿತ ಅವಧಿಯಲ್ಲಿ ಸಮರ್ಪಕವಾಗಿ ಗಮನಿಸಿ ಸೂಕ್ತ ಅವಧಿಯಲ್ಲೇ ಪೂರ್ಣಗೊಳಿಸಲು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಆದೇಶಿಸಿದರು.
ಸಭೆಯಲ್ಲಿ ಸಹಾಯಕ ಜಿಲ್ಲಾಧಿಕಾರಿ ಕೆ.ಜಯಲಕ್ಷ್ಮಿ, ನಬಾರ್ಡ್ ಎ.ಜಿ.ಎಂ.ಜ್ಯೋತಿಷ್ ಜಗನ್ನಾಥ್, ಪಿ.ಎ.ಯು.ಯೋಜನೆ ನಿರ್ದೇಶಕ ವಿ.ಕೆ.ದಿಲೀಪ್ ಮೊದಲಾದವರು ಉಪಸ್ಥಿತರಿದ್ದರು.

