ಚುರುಕುಗೊಂಡ ಮತದಾರ ಪಟ್ಟಿಯಲ್ಲಿ ಹೆಸರು ಸೇರಿಸುವ ಪ್ರಕ್ರಿಯೆ
0
ಮಾರ್ಚ್ 19, 2019
ಕಾಸರಗೋಡು: ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಮತದಾತರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಪ್ರಕ್ರಿಯೆಗಳು ಜಿಲ್ಲೆಯಲ್ಲಿ ಚುರುಕಿನಿಂದ ಸಾಗುತ್ತಿವೆ.
ಜಿಲ್ಲೆಯಲ್ಲಿ ಈ ವರೆಗೆ ಆನಿವಾಸಿ ಭಾರತೀಯರ ಸಹಿತ 9,86,171 ಮಂದಿ ಮತದಾತರ ಪಟ್ಟಿಯಲ್ಲಿ ಸೇರ್ಪಡೆಗೊಂಡಿದ್ದಾರೆ. ಇವರಲ್ಲಿ 4,81,967 ಮಂದಿ ಪುರುಷರು, 5,04,203 ಮಂದಿ ಮಹಿಳೆಯರು, ಒಬ್ಬರು ಟ್ರಾನ್ಸ್ ಜೆಂಡರ್ಸ್ ಇದ್ದಾರೆ. 89 ಮಹಿಳೆಯರ ಸಹಿತ 2643 ಮಂದಿ ಆನಿವಾಸಿ ಭಾರತೀಯರು ಮತದಾತರ ಪಟ್ಟಿಯಲ್ಲಿ ಸೇರಿದ್ದಾರೆ. 1417 ಅಂಚೆ ಮತದಾತರು ಇದ್ದಾರೆ. ಮಂಜೇಶ್ವರ ವಿಧಾನಸಭೆ ಕ್ಷೇತ್ರದಲ್ಲಿ 2,08,616 ಮಂದಿ, ಕಾಸರಗೋಡು ವಿಧಾನಸಭೆ ಕ್ಷೇತ್ರದಲ್ಲಿ 1,88,494 ಮಂದಿ, ಉದುಮಾ ಕ್ಷೇತ್ರದಲ್ಲಿ 1,97849, ಕಾ?ಂಗಾಡ್ ಕ್ಷೇತ್ರದಲ್ಲಿ 2,02,873 ಮಂದಿ, ತ್ರಿಕರಿಪುರ ಕ್ಷೇತ್ರದಲ್ಲಿ 1,88,294 ಮಂದಿ ಮತದಾರರಿದ್ದಾರೆ.
ಮಾ.25 ವರೆಗೆ ಮತದಾತರ ಪಟ್ಟಿಯಲ್ಲಿ ಹೆಸರು ಸೇರಿಸುವ ಅವಕಾಶಗಳಿವೆ. ಜಿಲ್ಲೆಯಲ್ಲಿ 513 ಕೇಂದ್ರಗಳಲ್ಲಿ 968 ಮತಗಟ್ಟೆಗಳು ಚುನಾವಣೆಗಾಗಿ ಸಿದ್ಧಗೊಂಡಿವೆ.

