ಎದುರಾಳಿ ಅಭ್ಯರ್ಥಿಯ ಪ್ರಚಾರಕ್ಕೆ ತಡೆಮಾಡಕೂಡದು: ಜಿಲ್ಲಾಧಿಕಾರಿ
0
ಮಾರ್ಚ್ 19, 2019
ಕಾಸರಗೋಡು: ಲೋಕಸಭಾ ಚುನಾವಣೆ ಸಂಬಂಧ ಎದುರಾಳಿ(ಪ್ರತಿಪಕ್ಷದ) ಅಭ್ಯರ್ಥಿಯ ಪ್ರಚಾರಕ್ಕೆ ತಡೆಯುಂಟು ಮಾಡುವ ಕ್ರಮಗಳಲ್ಲಿ ತಮ್ಮ ಪಕ್ಷದ ಕಾರ್ಯಕರ್ತರು ಮುಂದಾಗುವುದಿಲ್ಲ ಎಂದು ಪ್ರತಿ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ಖಚಿತಪಡಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿರುವರು.
ಇಂಥಾ ಚಟುವಟಿಕೆಗಳನ್ನು ಯಾರಾದರೂ ನಡೆಸಿದಲ್ಲಿ ಅವರ ವಿರುದ್ಧ ಚುನಾವಣೆನೀತಿಸಂಹಿತೆಯ ಕಾನೂನು ಕ್ರಮಗಳನ್ನು ಕೈಗೊಳ್ಳುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ.
ಎದುರಾಳಿ ಅಭ್ಯರ್ಥಿ ಮತ್ತು ಅವರ ಪಕ್ಷಗಳು ನಡೆಸುವ ಸಭೆಗಳು, ಜಾಥಾಗಳು ಇತ್ಯಾದಿಗಳನ್ನು ತಡೆಮಾಡುವುದಿಲ್ಲ ಎಂದು ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಖಚಿತಪಡಿಸಬೇಕು. ರಾಜಕೀಯಪಕ್ಷಗಳು, ಕಾರ್ಯಕರ್ತರು , ಬೆಂಬಲಿಗರು ತಮ್ಮ ಪಕ್ಷದ ಕರಪತ್ರಗಳ ವಿತರಣೆ ನಡೆಸುವುದು, ನೇರವಾಗಿ ಲಿಖಿತರೂಪದಲ್ಲಿ ಪ್ರಶ್ನೆ ಯೆತ್ತುವುದು ನಡೆಸಕೂಡದು. ಇನ್ನೊಂದುಪಕ್ಷ ನಡೆಸುವ ಸಾರ್ವಜನಿಕ ಸಭೆಗಳಲ್ಲಿ ದಾಂಧಲೆ ನಡೆಸುವ ಯತ್ನ ನಡೆಸಕೂಡದು. ಒಂದು ಪಕ್ಷದ ಸಭೆ ನಡೆಯುತ್ತಿರುವ ಪ್ರದೇಶದಲ್ಲಿ ಇನ್ನೊಂದು ಪಕ್ಷದ ಜಾಥಾ ನಡೆಸಕೂಡದು ಎಂದು ಜಿಲ್ಲಾ ಚುನಾವಣೆ ಅಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ತಿಳಿಸಿದರು.

