ನಾಳೆ ಸಂದರ್ಶನ
0
ಮಾರ್ಚ್ 19, 2019
ಕಾಸರಗೋಡು: ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ವ್ಯಾಪ್ತಿಯ ಎಂಪ್ಲಾಯಿಬಿಲಿಟಿ ಕೇಂದ್ರದಲ್ಲಿ ಟೀಂ ಲೀಡರ್, ರಿಲೇಷನ್ ಶಿಪ್ ಮೆನೆಜರ್, ಕಮರ್ಷಿಯಲ್ ಸೇಲ್ಸ್ ಆಫೀಸರ್ ಹುದ್ದೆಗಳಿಗೆ (ಪುರುಷರಿಗೆ)ನಾಳೆ(ಮಾ.20) ಬೆಳಗ್ಗೆ 10 ಗಂಟೆಗೆ ಸಂದರ್ಶನ ನಡೆಯಲಿದೆ. ಪ್ಲಸ್-ಟು/ಡಿಪ್ಲೊಮಾ/ಪದವಿಯೊಂದಿಗೆ ಮೂರು ವರ್ಷ ವೃತ್ತಿ ಅನುಭವ ಟೀಂ ಲೀಡರ್ ಹುದ್ದೆಗೆ ಶಿಕ್ಷಣಾರ್ಹತೆಯಾಗಿದೆ. ಉಳಿದ ಹುದ್ದೆಗಳಿಗೆ ಆಯಾ ಪ್ಲಸ್ ಟು ಅಥವಾ ಅದಕ್ಕಿಂತ ಅಧಿಕ ಶಿಕ್ಷಣಾರ್ಹತೆಯಿದ್ದವರು ಅರ್ಹರು. ಆಸಕ್ತರು ಅಂದು ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಎಂಪ್ಲಾಯಿಬಿಲಿಟಿ ಸೆಂಟರ್ ಗೆ ಗುರುತು ಚೀಟಿಯ ನಕಲು, ಶಿಕ್ಷಣಾರ್ಹತೆಯ ನಕಲು, 250 ರೂ. ಪಾವತಿಸಿ ವನ್ ಟೈಂ ನೋಂದಣಿ ನಡೆಸಿ ಸಂದರ್ಶನಕ್ಕೆ ಹಾಜರಾಗಬಹುದು. ಮಾಹಿತಿಗೆ 9207155700, 04994297470 ಸಂಪರ್ಕಿಸಬಹುದು.

