ಚುನಾವಣೆ:ಪೇಡ್ ನ್ಯೂಸ್ ವಿರುದ್ಧ ಹದ್ದಿನ ಕಣ್ಣುಗಳ ಬಿಗಿ: ಜಿಲ್ಲಾಧಿಕಾರಿ
0
ಮಾರ್ಚ್ 19, 2019
ಕಾಸರಗೋಡು: ಲೋಕಸಭೆ ಚುನಾವಣೆಯಲ್ಲಿ ಅಭ್ಯರ್ಥಿಯ ಪ್ರಚಾರ ಹಿನ್ನೆಲೆಯಲ್ಲಿ ಹಣಕಾಸು ಸಹಿತ ಸೌಲಭ್ಯ ಪಡೆದು ಮಾಧ್ಯಮಗಳ ಮೂಲಕ ಜನತೆಗೆ ತಪ್ಪುಸಂದೇಶ ಪ್ರಚಾರಗೊಳಿಸಿ,ಮತದಾರರನ್ನು ತಪ್ಪುದಾರಿಗೆಳೆಯುವ "ಪೇಡ್ ನ್ಯೂಸ್" ವಿರುದ್ಧ ಹದ್ದು ಕಣ್ಣುಗಳ ಕಠಿಣ ನಿಲುವು ಬಿಗಿಗೊಳಿಸಲು ನಿರ್ಧರಿಸಲಾಗಿದೆ.
ಜಿಲ್ಲಾಧಿಕಾರಿ ಛೇಂಬರ್ ನಲ್ಲಿ ಸೋಮವಾರ ನಡೆದ ಜಿಲ್ಲಾ ಮಟಟದ ಮೀಡಿಯಾ ಸರ್ಟಿಫಿಕೇಷನ್ ಆಂಡ್ ಮೋನಿಟರಿಂಗ್ ಸಮಿತಿ (ಎಂ.ಸಿ.ಎಂ.ಸಿ.) ಸಭೆ ಈ ತೀರ್ಮಾನ ಕೈಗೊಂಡಿದೆ.
ಚುನಾವಣೆ ನೀತಿಸಂಹಿತೆ ಉಲ್ಲಂಘಿಸಿ ಗುಪ್ತಹಾದಿಗಳ ಮೂಲಕ ಪೇಡ್ ನ್ಯೂಸ್ ನ ಮಾರ್ಗ ಬಳಸಲಾಗುತ್ತಿದೆ. ಇಂಥಾ ವಾರ್ತೆಗಳು ಗಮನಕ್ಕೆ ಬಂದಲ್ಲಿ ನೋಟಿಸು ನೀಡಲು, ವಾರ್ತೆಗೆ ತಗುಲಿರುವ ವೆಚ್ಚವನ್ನು ಅಭ್ಯರ್ಥಿಯ ಚುನಾವಣೆವೆಚ್ಚದಿಂದ ಈಡು ಮಾಡಲು ಕ್ರಮಕೈಗೊಳ್ಳಲಾಗುವುದು ಎಂದು ಸಭೆ ತಿಳಿಸಿದೆ.
ಕನ್ನಡ ಭಾಷೆಯಲ್ಲಿ ಪ್ರಭುತ್ವಹೊಂದಿರುವ ನಿವೃತ್ತ ಸಿಬ್ಬಂದಿಯೊಬ್ಬರನ್ನೂ ಸಮಿತಿಯಲ್ಲಿ ಸೇರ್ಪಡೆಗೊಳಿಸಲು ನಿರ್ಧರಿಸಲಾಗಿದೆ. ಕಿರುತೆರೆ, ರೇಡಿಯೋ, ಸಾಮಾಜಿಕ ಜಾಲ ತಾಣಗಳು, ಬಲ್ಕ್ ಎಸ್.ಎಂ.ಎಸ್.ಗಳು ಇತ್ಯಾದಿಗಳ ತಪಾಸಣೆ ನಡೆಸಲಾಗುವುದು.
ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅಧ್ಯಕ್ಷತೆ ವಹಿಸಿದ್ದರು. ವಲಯ ಕಂದಾಯಾಧಿಕಾರಿ ಅಬ್ದು ಸಮದ್, ಮೆಂಬರ್ ಸೆಕ್ರೆಟರಿ , ಜಿಲ್ಲಾ ಮಾಹಿತಿ ಅಧಿಕಾರಿ ಎಂ.ಮಧುಸೂದನನ್, ಜಿಲ್ಲಾ ಕಾನೂನು ಅಧಿಕಾರಿ ಕೆ.ಪಿ.ಉಣ್ಣಿಕೃಷ್ಣನ್, ಎಲ್.ಐ.ಸಿ. ಜಿಲ್ಲಾ ಅಧಿಕಾರಿ ಕೆ.ರಾಜನ್, ಸಮಿತಿ ಮಟ್ಟದ ಸ್ವತಂತ್ರ ಸದಸ್ಯ ಜಿ.ಬಿ.ವತ್ಸನ್, ಮಾಹಿತಿ ಕಚೇರಿಯ ಸಹಾಯಕ ಸಂಪದಾಕ ರಶೀದ್ ಬಾಬು ಮೊದಲಾದವರು ಉಪಸ್ಥಿತರಿದ್ದರು.

