ಕಲ್ಲಕಟ್ಟ ಶಾಲಾ ಮಕ್ಕಳು ಸಂಸ್ಕøತ ಸ್ಕಾಲರ್ ಶಿಪ್ ಗೆ ಆಯ್ಕೆ
0
ಮಾರ್ಚ್ 27, 2019
ಬದಿಯಡ್ಕ: ಕುಂಬಳೆ ಉಪಜಿಲ್ಲಾ ಮಟ್ಟದಲ್ಲಿ ಸಂಸ್ಕøತ ಸ್ಕಾಲರ್‍ಶಿಪ್ ಪರೀಕ್ಷೆಯಲ್ಲಿ ಕಲ್ಲಕಟ್ಟ ಮಜ್ದೂರರ ಅನುದಾನಿತ ಕಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಾದ ವಿಭಾ ಮನೋಜ್(ಒಂದನೇ ತರಗತಿ), ಪ್ರೀತಿಕಾ ಕೆ.ಯು(ಎರಡನೇ ತರಗತಿ), ಅನನ್ಯಾ ವಿ.ಆಸ್ರ(ಮುರನೇ ತರಗತಿ), ಮೇಧಾ ಭಟ್(ಮೂರನೇ ತರಗತಿ), ಸುರಕ್ಷಿತಾ ಎಸ್.(ನಾಲ್ಕನೇ ತರಗತಿ),ದಿವ್ಯಾ(ಐದನೇ ತರಗತಿ), ರೀಶಲ್ ಲೋಬೋ(ಐದನೇ ತರಗತಿ), ಜಿತೇಶ್ ಕೆ(ಆರನೇ ತರಗತಿ), ಜೋಯ್ಲಿನ್ ಹಮೀಶ್ ಲೋಬೋ(ಆರನೇ ತರಗತಿ), ಅನಘಾ ವಿ.ಆಸ್ರ(ಏಳನೇ ತರಗತಿ) ಹಾಗೂ ಮಾನ್ವಿ ಭಟ್(ಏಳನೇ ತರಗತಿ)ತೇರ್ಗಡೆಹೊಂದಿ ಸ್ಕಾಲರ್ ಶಿಫ್ ಗೆ ಅರ್ಹರಾಗಿರುತ್ತಾರೆ. ವಿದ್ಯಾರ್ಥಿಗಳನ್ನು ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದ ಹಾಗೂ ರಕ್ಷಕ ಶಿಕ್ಷಕ ಸಮಿತಿ ಅಭಿನಂದಿಸಿದೆ.

