ವಿಶ್ವದರ್ಶನ ಗ್ರಂಥಾಲಯ ಉದ್ಘಾಟನೆ
0
ಮಾರ್ಚ್ 15, 2019
ಮಂಜೇಶ್ವರ: ವಿಶ್ವಕರ್ಮ ಸಾಹಿತ್ಯ ದರ್ಶನ ಸಂವಾಹಕ ಸಮೂಹದ ವತಿಯಿಂದ ಉದ್ಯಾವರದ ಮಾತೃ ಕೃಪಾದಲ್ಲಿ ಅಧ್ಯಯನಾಸಕ್ತರಿಗಾಗಿ ರೂಪೀಕರಿಸಲಾದ "ವಿಶ್ವಜ್ಞಾನ ದರ್ಶನ" ಎಂಬ ಗ್ರಂಥಾಲಯದ ಉದ್ಘಾಟನೆ ಇತ್ತೀಚೆಗೆ ನಡೆಯಿತು. ಹಿರಿಯ ಕವಯತ್ರಿ, ಲೇಖಕಿ ಕುಶಾಲಾಕ್ಷಿ ಕುಲಾಲ್ ಕಣ್ವತೀರ್ಥ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಈ ದೀಪದ ಬೆಳಕು ಹೇಗೆ ಪ್ರಜ್ವಲವಾಗಿ ಕತ್ತಲೆಯನ್ನು ನಿವಾರಿಸುತ್ತದೆಯೋ ಅದೇ ರೀತಿ ಜ್ಞಾನದ ಬೆಳಕನ್ನು ಪುಸ್ತಕದಿಂದ ಬೆಳಗಿಸಲು ಸಾಧ್ಯವಿದೆ,ಸುಜ್ಞಾನದಿಂದ ಸಮಾಜಕ್ಕೆ ಒಳ್ಳೆಯ ಕೊಡುಗೆ ಸಿಗಲಿ ಎಂದು ಶುಭವನ್ನು ಹಾರೈಸಿ ತಮ್ಮ ವತಿಯಿಂದ ಗ್ರಂಥಾಲಯಕ್ಕೆ ಪುಸ್ತಕಗಳನ್ನು ಉಚಿತವಾದ ಕೊಡುಗೆಯಾಗಿ ನೀಡುವುದಾಗಿ ಘೋಷಿಸಿದರು.
ವಿಶ್ವದರ್ಶನ ಸಮಿತಿ ಅಧ್ಯಕ್ಷರಾದ ಆಶೋಕ್ ಸಾನಗ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. ವಿ.ಸಾ.ದ.ಸಂಸ್ಥಾಪಕ ಜಯ ಮಣಿಯಂಪಾರೆ , ಆಶಾ ಅಶೋಕ್ ಸಾನಗ ಉದ್ಯಾವರ,ಐಶ್ವರ್ಯ ಉದ್ಯಾವರ, ಮೀನಾಕ್ಷಿ ಆಚಾರ್ಯ ಕೋಟೆಕ್ಕಾರು, ಅಕ್ಷಿತಾ ಆಚಾರ್ಯ ಮಾಯಿಪ್ಪಾಡಿ, ದೀಕ್ಷಿತಾ ಆಚಾರ್ಯ ಹೊಸಂಗಡಿ, ಜಯಲಕ್ಷ್ಮೀ ಆಚಾರ್ಯ ಕೂಡ್ಲು, ಲತಾ ಆಚಾರ್ಯ ಬನಾರಿ,ದೀಪಿಕಾ ನಿತಿನ್ ತೂಮಿನಾಡು, ಕಾಂಚನ ಆಚಾರ್ಯ ಕೋಟೆಕ್ಕಾರು,ನಯನ ಆಚಾರ್ಯ ಕೋಟೆಕ್ಕಾರು,ಮೌನೇಶ್ ಆಚಾರ್ಯ ಕಡಂಬಾರ್, ದಾಕ್ಷಾಯಿಣಿ ರಾಮಕೃಷ್ಣ ಆಚಾರ್ಯ ಕೀರ್ತೇಶ್ವರ,ಚಾರುಜಾಶ್ರೀ ಮಣಿಯಂಪಾರೆ ಮುಂತಾದವರು ಉಪಸ್ಥಿತರಿದ್ದರು . ಬಳಗದ ಸದಸ್ಯರಾದ ದೀಪಿಕಾ ನಿತಿನ್ ಆಚಾರ್ಯ ತೂಮಿನಾಡು, ಅಕ್ಷಿತಾ ಅಚಾರ್ಯ ಮಾಯಿಪ್ಪಾಡಿ ,ನಯನ ಆಚಾರ್ಯ ಕೋಟೆಕ್ಕಾರು ಹಾಗೂ ಕಾಂಚನ ಆಚಾರ್ಯ ಕೋಟೆಕ್ಕಾರು ಪ್ರಾರ್ಥನೆ ಗೈದರು. ದೀಕ್ಷಿತಾ ಆಚಾರ್ಯ ಹೊಸಂಗಡಿ ಸ್ವಾಗತಿ ಕಾಂಚನ ಆಚಾರ್ಯ ಕೋಟೆಕ್ಕಾರು ವಂದಿಸಿದರು. ಸಾಹಿತ್ಯ ಹಾಗೂ ಅಧ್ಯಯನಾಸಕ್ತರಿಗೆ ಪುಸ್ತಕ ವಾಚನಕ್ಕೆ ಗ್ರಂಥಾಲಯವನ್ನು ಸಂದರ್ಶಿಸಬಹುದೆಂದು ಸಂಬಂಧಪಟ್ಟವರು ತಿಳಿಸಿದ್ದಾರೆ.

