ಕೇರಳ ಕನ್ನಡ ಸಾಹಿತ್ಯ ಸಂಗಮದಿಂದ ಕೇಳು ಮಾಸ್ಟರಿಗೆ ಶ್ರದ್ಧಾಂಜಲಿ
0
ಮಾರ್ಚ್ 15, 2019
ಮಂಜೇಶ್ವರ: .ಕಾಸರಗೋಡಿನ ಧಾರ್ಮಿಕ ಮತ್ತು ಸಾಂಸ್ಕೃತಿಕ ಕ್ಷೇತ್ರದ ಮೇರು ಸಾಹಿತಿ ದಿವಂಗತ ಕೇಳು ಮಾಸ್ಟರ್ ಅಗಲ್ಪಾಡಿ ಅವರಿಗೆ ಕೆರಳ ಕನ್ನಡ ಸಾಹಿತ್ಯ ಸಂಗಮದ ವತಿಯಿಂದ ಹೊಸಂಗಡಿಯ ಪ್ಲೆಕ್ಷ್ ಪಾಯಿಂಟ್ ಆಡಿಟೋರಿಯಂನಲ್ಲಿ ಗುರುವಾರ ಸಂಜೆ ಶ್ರದ್ದಾಂಜಲಿ ಸಭೆ ನಡೆಯಿತು.
ಕಾರ್ಯಕ್ರಮದಲ್ಲಿ ಸಂಸ್ಮರಣಾ ಭಾಷಣವನ್ನು ಮಾಡಿದ ಸಾಹಿತಿ, ಸಂಸ್ಥೆಯ ಅಧ್ಯಕ್ಷ ಹರೀಶ್ ಸುಲಾಯ ಒಡ್ಡಂಬೆಟ್ಟು ಅವರು ಮಾತನಾಡಿ ಕೇಳು ಮಾಸ್ತರ್ ಸರಳ ವ್ಯಕ್ತಿತ್ವದ ಧೀಮಂತ ವ್ಯಕ್ತಿ ಮತ್ತು ಅವರ ಅಗಲುವಿಕೆಯಿಂದ ಕಾಸರಗೋಡು ಕನ್ನಡ ಸಾಹಿತ್ಯ ಕ್ಷೇತ್ರ ಬಡವಾಗಿದೆ ಎಂದು ನುಡಿದರು.ಸಜ್ಜನಿಕೆಯನ್ನು ಮೈಗೂಡಿಸಿಕೊಂಡಿರುವ ಅವರು ಹಿರಿ ಕಿರಿಯರೆನ್ನದೆ ಎಲ್ಲಾ ವಯೋಮಾನದ ಜನರೊಡನೆ ಬಹಳ ಆತ್ಮೀಯತೆಯಿಂದ ಬೆರೆಯುತ್ತಿದ್ದರು.ಅವರ ಕೃತಿಗಳು ಸಂಶೋಧನಾತ್ಮಕವಾಗಿದ್ದು ಮುಂದಿನ ವಿದ್ಯಾರ್ಥಿಗಳಿಗೆ ತಮ್ಮ ಸಂಶೋಧನೆಗೆ ಸಹಕಾರಿಯಾಗಬಲ್ಲುದು ಎಂದು ಅಭಿಪ್ರಾಯಪಟ್ಟರು.
ಪುರುಷೋತ್ತಮ ಭಟ್ ಕೆ ಸಂಸ್ಮರಣಾ ಭಾಷಣಗೈದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಸಲಹೆಗಾರ ಸಾಹಿತಿ ವೀರೇಶ್ವರ ಕರ್ಮರ್ಕರ್,ಸಂಘಟಣಾ ಕಾರ್ಯದರ್ಶಿ ಸಾಹಿತಿ ಗಣೇಶ ಪ್ರಸಾದ್ ನಾಯಕ್,ಸದಸ್ಯರಾದ ಪ್ರಭಾ ನಾಯಕ್, ಅಶೋಕ್ ಕೊಡ್ಲಮೊಗರು ಉಪಸ್ಥಿತರಿದ್ದರು.
ಕಾರ್ಯದರ್ಶಿ, ಕವಿ ಬಾಲಕೃಷ್ಣ ಮುಜುಕುಮೂಲೆ ಕಾರ್ಯಕ್ರಮ ನಿರ್ವಹಿಸಿದರು.

