ವರ್ಕಾಡಿ ಗ್ರಾಮ ಪಂಚಾಯತಿ ಕಚೇರಿಗೆ ಜಾಥಾ ಹಾಗು ಧರಣಿ
0
ಮಾರ್ಚ್ 15, 2019
ಮಂಜೇಶ್ವರ: ಎನ್.ಆರ್.ಇ.ಜಿ. ಯೂನಿಯನ್ ವರ್ಕಾಡಿ ಪಂಚಾಯತಿ ನೇತೃತ್ವದಲ್ಲಿ ಕೆಲಸಗಾರರ ಬಾಕಿ ಇರುವ ಕೂಲಿ ಕೂಡಲೇ ವಿತರಿಸಬೇಕು, 2018-19 ನೇ ವರ್ಷದಲ್ಲಿ ಭರವಸೆ ನೀಡಿದ 150 ದಿನದ ಕೆಲಸ ಕಾಸರಗೋಡು ಜಿಲ್ಲೆಯ ಕಾರ್ಮಿಕರಿಗೆ ನೀಡಬೇಕು, ಉದ್ಯೋಗ ಖಾತರಿ ಯೋಜನೆಯನ್ನು ಸಂರಕ್ಷಿಸಬೇಕೆಂಬ ಬೇಡಿಕೆಗಳನ್ನು ಮುಂದಿಟ್ಟುಕೊಂಡು ವರ್ಕಾಡಿ ಗ್ರಾಮ ಪಂಚಾಯತಿ ಕಚೇರಿ ಮುಂಭಾಗದಲ್ಲಿ ಬುಧವಾರ ಜಾಥಾ ಹಾಗು ಧರಣಿ ನಡೆಯಿತು.
ಕಾರ್ಯಕ್ರಮವನ್ನು ಸಿದ್ದಿಕ್ ಪಾವೂರು ಅಧ್ಯಕ್ಷತೆಯಲ್ಲಿ ಎನ್‍ಆರ್‍ಇಜಿ ವರ್ಕರ್ಸ್ ಯೂನಿಯನ್‍ನ ಮಂಜೇಶ್ವರ ಏರಿಯಾ ಕಾರ್ಯದರ್ಶಿ ಡಿ.ಬೂಬ ಉದ್ಘಾಟಿಸಿದರು. ವರ್ಕಾಡಿ ಪಂಚಾಯತಿ ಮಾಜಿ ಉಪಾಧ್ಯಕ್ಷ ಕೆ.ಚಂದ್ರಹಾಸ ಶೆಟ್ಟಿ ಮಾಸ್ತರ್, ಪಂಚಾಯತಿ ಸದಸ್ಯೆ ಇಂದಿರಾ, ಯೂನಿಯನ್‍ನ ಏರಿಯಾ ಸಮಿತಿ ಸದಸ್ಯ ಗಂಗಾಧರ ದುರ್ಗಿಪಳ್ಳ ಶುಭಹಾರೈಸಿದರು.
ಭಾರತಿ ಪಿ, ಶೋಭಾ, ಶಶಿಕಲ, ಅವ್ವಮ್ಮ, ಸೌಮ್ಯ, ಜಾನಕಿ, ಮಾಧವ, ಶಾಂತಿ ಮೊದಲಾದವರು ಜಾಥಾದ ನೇತೃತ್ವ ವಹಿಸಿದರು. ಎನ್‍ಆರ್‍ಇಜಿ ವರ್ಕರ್ಸ್ ಯೂನಿಯನ್‍ನ ಪಂಚಾಯತಿ ಕಾರ್ಯದರ್ಶಿ ಭಾರತಿ ಸತೀಶ್ ಸುಳ್ಯಮೆ ಸ್ವಾಗತಿಸಿ, ವಂದಿಸಿದರು.




