ಎಸ್.ಎಸ್.ಎಲ್.ಸಿ. ಪರೀಕ್ಷೆ: ಮೋನಿಟರಿಂಗ್ ಸಭೆ
0
ಮಾರ್ಚ್ 12, 2019
ಕಾಸರಗೋಡು: ಈ ವರ್ಷದ ಎಸ್.ಎಸ್.ಎಲ್.ಸಿ. ಪರೀಕ್ಷೆ ಸಂಬಂಧ ಜಿಲ್ಲಾ ಮಟ್ಟದ ಮೋನಿಟರಿಂಗ್ ಸಮಿತಿ ಸಭೆ ಜರುಗಿತು.
ಹೆಚ್ಚುವರಿ ದಂಡನಾಧಿಕಾರಿ ಅವರ ಛೇಂಬರ್ ನಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಹೆಚ್ಚುವರಿ ದಂಡನಾಧಿಕಾರಿ ಬಿಜು ಸಿ. ಅಧ್ಯಕ್ಷತೆ ವಹಿಸಿದ್ದರು.
1906 ಮಂದಿ ಈ ಬಾರಿ ಎಸ್.ಎಸ್.ಅಲ್.ಸಿ.ಪರೀಕ್ಷೆಗೆ ಹಾಜರಾಗಲಿದ್ದಾರೆ. ಪರೀಕ್ಷೆ ಚಟುವಟಿಕೆಗಳಿಗೆ ಬೇಕಾದ ಎಲ್ಲ ಮಾರ್ಗದರ್ಶನ ಸಭೆಯಲ್ಲಿ ನೀಡಲಾಯಿತು.
ಸಹಾಯಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿಲ್ಪಾ ಸಿ., ಜಿಲ್ಲಾ ಖಜಾನೆ ಅಧಿಕಾರಿ ಲಾಲ್ ರಾಜ್, ಎಂ.ವಿ. ಲೀಡ್ಬ್ಯಾಂಕ್ ಪ್ರತಿನಿಧಿ ರಮಣನ್ ಸಿ.ಎಸ್., ಶಿಕ್ಷಣ ಸಹಾಯಕ ನಿರ್ದೇಶಕ ಡಾ.ಗಿರೀಶ್ ಚೋಲಯಿಲ್, ಜಿಲ್ಲಾ ಶಿಕ್ಷಣಾಧಿಕಾರಿ ನಂದಿಕೇಶನ್ ಎನ್. ಮೊದಲಾದವರು ಉಪಸ್ಥಿತರಿದ್ದರು.




