ಮತಗಟ್ಟೆಗಳಲ್ಲಿ ಮೂಲಭೂತ ಸೌಲಭ್ಯ ಏರ್ಪಡಿಸಲಾಗುವುದು: ಜಿಲ್ಲಾಧಿಕಾರಿ
0
ಮಾರ್ಚ್ 12, 2019
ಕಾಸರಗೋಡು: ಲೋಕಸಭೆ ಚುನಾವಣೆ ವೇಳೆ ಮತಗಟ್ಟೆಗಳಾಗಿ ಬಳಸುವ ಶಿಕ್ಷಣಾಲಯಗಳಲ್ಲಿ ಚುನಾವಣೆ ಆಯೋಗದ ಆದೇಶ ಪ್ರಕಾರ ಎಲ್ಲ ರೀತಿಯ ಮೂಲಭೂತ ಸೌಲಭ್ಯ ಏರ್ಪಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು.
ಜಿಲ್ಲೆಯ 5 ವಿಧಾನಸಭೆ ಕ್ಷೇತ್ರಗಳ ಎಲ್ಲ ಮತಗಟ್ಟೆಗಳಲ್ಲೂ ತಪಾಸಣೆ ಅಂತಿಮ ಹಂತದಲ್ಲಿದೆ. ವಿಕಲಚೇತನರಿಗೆ ಗಾಲಿಕುರ್ಚಿ, ತ್ರಿಚಕ್ರ ವಾಹನ ಇತ್ಯಾಇ ಪಾಕಿರ್ಂಗ್ ನಡೆಸಲು ಸೌಲಭ್ಯ, ಕುಡಿಯುವ ನೀರಿನ ಸೌಲಭ್ಯ, ವಿವಿಧ ಸೂಚನಾ ಫಲಕಗಳ ಸ್ಥಾಪನೆ, ವಿಕಲಚೇತನರ ಸಹಾಯಕ್ಕೆ ಸಿದ್ಧರಾದ ಬಿ.ಎಲ್.ಒ, ಎನ್.ಸಿ.ಸಿ., ಎನ್.ಎಸ್.ಎಸ್. ಸ್ವಯಂಸೇವಕರಿಗೆ ಕುಳಿತುಕೊಳ್ಳುವ ಸೌಕರ್ಯ, ಯಾರ್ಂಪ್ ಸೌಲಭ್ಯ, ಮಹಿಳೆಯರಿಗೆ, ಪುರುಷರಿಗೆ ಬೇರೆ ಬೇರೆ ಶೌಚಾಲಯಗಳು, ವಿಕಲಚೇತನರ ಸೌಹಾರ್ದ ಶೌಚಾಲಯಗಳು ಇತ್ಯಾದಿ ಸಿದ್ಧಪಡಿಸಲಾಗುವುದು ಎಂದವರು ಹೇಳಿದರು. ಮತಗಟ್ಟೆಗೆ ಪ್ರವೇಶಿಸಲು ಮತ್ತು ಮತದಾನ ನಡೆಸಿ ತೆರಳಲು ಪ್ರತ್ಯೇಕ ದಾರಿಗಳು, ಮತಗಟ್ಟೆಗಳಲ್ಲಿ ವಿದ್ಯುತ್, ಬೆಳಕು, ಗಾಳಿ ಪೀಠೋಕರಣಗಳಿವೆಯೇ ಎಂಬ ತಪಾಸಣೆ ಇದೀಗ ನಡೆಯುತ್ತಿದೆ. ಇವುಗಳಿಲ್ಲದ ಪ್ರದೇಶಗಳಲ್ಲಿ ಪೂರೈಕೆಗೆ ಆದೇಶ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿರುವರು.




