ಜಿ.ಪಂ.ಸದಸ್ಯರನ್ನು ಮರೆತು ಅಭಿನಂದನೆ
0
ಮಾರ್ಚ್ 12, 2019
ಬದಿಯಡ್ಕ: ಜಿಲ್ಲಾ ಪಂಚಾಯತಿ ಆಡಳಿತಕ್ಕೊಳಪಟ್ಟ ವಿದ್ಯಾನಗರ-ಮಾನ್ಯ-ನೀರ್ಚಾಲು-ಮುಂಡಿತ್ತಡ್ಕ ರಸ್ತೆಯ ಮೆಕ್ಡಾಂ ಡಾಮರೀಕರಣದ ಮೊದಲ ಹಂತವನ್ನು ಪ್ರಸ್ತುತ ವರ್ಷ ಪೂರೈಸಲಾಗಿದ್ದು, ವಿದ್ಯಾನರದಿಂದ ಮಾನ್ಯ ಸಮೀಪದ ದೇವರಕೆರೆಯ ವರೆಗಿನ ಸುಮಾರು ಕಿಲೋಮೀಟಟರ್ ರಸ್ತೆಯ ಅಭಿವೃದ್ದಿಗೆ ರೂ. ವ್ಯಯಿಸಲಾಗಿದೆ.
ಈ ರಸ್ತೆ ಕಾಮಗಾರಿಯ ಮೊದಲ ಹಂತವಾಗಿ ವಿದ್ಯಾನಗರದಿಂದ ಕಲ್ಲಕಟ್ಟ ತನಕ 4 ಕೋಟಿ ರೂ. ಹಾಗೂ ಎರಡನೇ ಹಂತದಲ್ಲಿ ಕಲ್ಲಕಟ್ಟದಿಂದ ದೇವರಕೆರೆ ತನಕ 3.9 ಕೋಟಿ ರೂ.ವ್ಯಯಿಸಿ ಕಾಮಗಾರಿಯನ್ನು ಎರಡು ತಿಂಗಳ ಹಿಂದೆಯಷ್ಟೇ ನಡೆಸಲಾಗಿತ್ತು.ದೇವರಕೆರೆಯಿಂದ ನೀರ್ಚಾಲು ರಸ್ತೆಯ ಮೆಕ್ಡಾಂ ಡಾಮರೀಕರಣಕ್ಕೆ ಪ್ರಸ್ತುತ ವರ್ಷ ಜಿ.ಪಂ. ನಲ್ಲಿ ಅವಕಾಶ ಇಲ್ಲದಿರುವುದರಿಂದ ತೀವ್ರ ಹದಗೆಟ್ಟಿದ್ದ ಈ ರಸ್ತೆಗೆ ತೇಪೆ ಹಾಕುವ ಯೋಜನೆಯಂತೆ ಹೊಂಡಗಳನ್ನು ಮುಚ್ಚಿ ಯೋಗ್ಯ ಸಂಚಾರಕ್ಕೆ ವಾರಗಳ ಹಿಂದೆಯಷ್ಟೇ ಕಾಮಗಾರಿ ಮುಗಿಸಲಾಗಿತ್ತು.
ಆದರೆ ಇದೀಗ ದೇವರಕೆರೆ-ನೀರ್ಚಾಲು ರಸ್ತೆಯ ತೇಪೆ ಕಾಮಗಾರಿ ಅಭಿವೃದ್ದಿಯ ಹೆಸರಲ್ಲಿ ಅಭಿನಂದನಾ ಫ್ಲೆಕ್ಸ್ ಒಂದನ್ನು ಜನಕೀಯ ಸಮಿತಿ ಎಂಬ ಹೆಸರಲ್ಲಿ ಹಾಕಲಾಗಿದ್ದು, ವಿಶೇಷವೆಂಬಂತೆ ಈ ವಿಭಾಗದ(ಡಿವಿಶನ್) ಜಿಲ್ಲಾ ಪಂಚಾಯತಿ ಸದಸ್ಯರ ಹೆಸರಾಗಲಿ, ಭಾವಚಿತ್ರವನ್ನಾಗಲಿ ಹಾಕದೆ ಇತರರ ಹೆಸರು, ಭಾವಚಿತ್ರಗಳನ್ನು ಹಾಕಿ ಅಭಿನಂದನೆ ಸಲ್ಲಿಸಿರುವುದು ಆಶ್ಚರ್ಯಕ್ಕೆ ಕಾರಣವಾಗುವುದರ ಜೊತೆಗೆ ಕುಟಿಲ ರಾಜಕೀಯ ತಂತ್ರಗಾರಿಕೆಯೋ ಎಂಬ ಸಂಶಯಕ್ಕೆ ಕಾರಣವಾಗಿದೆ.
ಈ ಬಗ್ಗೆ ಜಿ.ಪಂ. ಸದಸ್ಯ ನ್ಯಾಯವಾದಿ ಕೆ.ಶ್ರೀಕಾಂತ್ ಅವರು ಸಮರಸದೊಂದಿಗೆ ಪ್ರತಿಕ್ರಿಯಿಸಿದ್ದು, ಇಂತಹ ಮನೋಸ್ಥಿತಿಯು ಕೀಳು ಮನೋಸ್ಥಿತಿಯ ರಾಜಕೀಯವಾಗಿದ್ದು, ಜನಸಾಮಾನ್ಯರಿಗೆ ವಸ್ತು ಸ್ಥಿತಿಯ ಅರಿವು ಇದೆ ಎಂದು ತಿಳಿಸಿದ್ದಾರೆ. ಅಲ್ಲದೆ ಜಿ.ಪಂ. ಯೋಜನೆಯಲ್ಲಿ ದೇವರಕೆರೆ ನೀರ್ಚಾಲು ರಸ್ತೆ ಅಭಿವೃದ್ದಿಗೆ 4.5 ಕೋಟಿ ರೂ.ಗಳ ಯೋಜನೆಯನ್ನು ಇರಿಸಲಾಗಿದೆ. ಮುಂದಿನ ವರ್ಷ ಈ ಕಾಮಗಾರಿ ನಡೆಯುವುದು ಎಂದು ತಿಳಿಸಿದ್ದಾರೆ.




