HEALTH TIPS

ಇಂದಿನಿಂದ ಪುಟ್ಬಾಲ್ ಚಾಂಪಿಯನ್‍ಶಿಫ್ ಕೊನೆಯ ಹಂತದಸ್ಪರ್ಧೆ ಆರಂಭ

ಉಪ್ಪಳ: ಕಾಸರಗೋಡು ಜಿಲ್ಲಾ ಪುಟ್ಬಾಲ್ ಅಸೋಸಿಯೇಶನ್ ನೇತೃತ್ವದಲ್ಲಿ ಸಿಟಿಝನ್ ಉಪ್ಪಳವು ಕೈಕಂಬದ ಮಣ್ಣಂಗುಳಿ ಮೈದಾನದಲ್ಲಿ ಹಮ್ಮಿಕೊಂಡಿರುವ ಜಿಲ್ಲಾ ಸೀನಿಯರ್ ಡಿವಿಝನ್ ಪುಟ್ಬಾಲ್ ಚಾಂಫಿಯನ್‍ಶಿಫ್‍ನ ಕೊನೆಯ ಹಂತದ ಸ್ಪರ್ಧೆಗಳು ಇಂದಿನಿಂದ ನಡೆಯಲಿದೆ. ಇಂದು ಸಂಜೆ 4.30 ರಿಂದ ಆರಂಭಗೊಳ್ಳುವ ಸ್ಪರ್ಧಾ ಕಣದಲ್ಲಿ ನೇಶನಲ್ ಕಾಸರಗೋಡು ತಂಡ ಬಾಜಿಯೋ ಪ್ಯಾನ್ಸ್ ಉದುಮ ತಂಡದೊಂದಿಗೆ ಸ್ಪಧಿಸಲಿದೆ. ಈ ಮೊದಲು ನಡೆದ ಪಂದ್ಯಗಳಲ್ಲಿ ಎಂ.ಎಸ್.ಸಿ.ಮೊಗ್ರಾಲ್ ತಂಡವು ಒಟ್ಟು ಐದು ಆಟಗಳಲ್ಲಿ 10 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದೆ. ನೇಶನಲ್ ಕಾಸರಗೋಡು ಒಂಭತ್ತು ಅಂಕಗಳೊಂದಿಗೆ ದ್ವಿತೀಯ ಸ್ಥಾನ, 8 ಅಂಕಗಳೊಂದಿಗೆ ನೇಶನಲ್ ಚೆಂಬರಿಕೆ ತಮಡ ತೃತೀಯ ಸ್ಥಾನ ಪಡೆದಿದೆ. ಐದು ಪಂದ್ಯಾಟದಲ್ಲಿ ಏಳು ಅಮಕಗಳನ್ನು ಗಳಿಸಿರುವ ಮಿರಾಕಲ್ ಕಂªಬಾರ್ ಏಳನೇ ಸ್ಥಾನದಲ್ಲೂ, ನಾಲ್ಕು ಪಂದ್ಯಾಟದಲ್ಲಿ ಆರು ಅಂಕಗಳನ್ನು ಗಳಿಸಿಕೊಂಡು ಬಾಜಿಯೋ ಪ್ಯಾನ್ಸ್ ಉದುಮ ಐದನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ನಾಲ್ಕು ಅಂಕಗಳನ್ನು ಪಡೆದಿರುವ ಸಿಟಿಝನ್ ಉಪ್ಪಳ ತಂಡ ಹಾಗೂ ಬ್ಲೇಸ್ ತಳಂಗರೆ ತಂಡ ಐದು, ಆರನೇ ಸ್ಥಾನ ಪಡೆದಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries