ಶೇಣಿ ಹಾಲು ಉತ್ಪಾದಕರ ಸಹಕಾರಿ ಸಂಘ ಉದ್ಘಾಟನೆ
0
ಮಾರ್ಚ್ 07, 2019
ಪೆರ್ಲ:ಶೇಣಿ ಹಾಲು ಉತ್ಪಾದಕರ ಸಹಕಾರಿ ಸಂಘ(ಅಪ್ಕೋಸ್) ಇತ್ತೀಚೆಗೆ ಉದ್ಘಾಟನೆಗೊಂಡಿತು.
ಮಂಜೇಶ್ವರ ಬ್ಲಾಕ್ ಪಂಚಾಯಿತಿ ಅಧ್ಯಕ್ಷ ಎ.ಕೆ.ಎಂ.ಅಶ್ರಫ್ ಉದ್ಘಾಟಿಸಿದರು.ಜಿಲ್ಲಾ ಪಂಚಾಯಿತಿ ಸದಸ್ಯೆ ಪುಷ್ಪಾ ಅಮೆಕ್ಕಳ ಸಭಾ ಕಾರ್ಯಕ್ರಮ ಉದ್ಘಾಟಿಸಿದರು. ಎಣ್ಮಕಜೆ ಗ್ರಾ.ಪಂ.ಅಧ್ಯಕ್ಷೆ ಶಾರದಾ ವೈ. ಅಧ್ಯಕ್ಷತೆ ವಹಿಸಿದರು.
ಕಾಸರಗೋಡು ಕ್ಷೀರಾಭಿವೃದ್ಧಿ ನಿಗಮ ಉಪ ನಿರ್ದೇಶಕಿ ಶಾಂತಿ ಅಬ್ರಹಾಂ ನೊಂದಣಿ ಪ್ರಮಾಣ ಪತ್ರ ಹಾಗೂ ನಿಯಮ ನಿಬಂಧನೆ ದಾಖಲೆಗಳನ್ನು ಹಸ್ತಾಂತರಿಸಿದರು.ಕಾಸರಗೋಡು ಮಿಲ್ಮಾ ಘಟಕ ಮುಖ್ಯಸ್ಥ ಮಾಧವನ್ ಕೆ. ಎನ್.ಡಿ.ಪಿ. ಆರ್ಥಿಕ ನೆರವು ಹಸ್ತಾಂತರಿಸಿದರು.
ಎಣ್ಮಕಜೆ ಗ್ರಾ.ಪಂ.ಉಪಾಧ್ಯಕ್ಷ, ಮಲಬಾರ್ ಪ್ರದೇಶದ ಅತಿ ಹೆಚ್ಚು ಹಾಲು ಉತ್ಪಾದಕರಿಗೆ ನೀಡಲಾಗುವ ಕ್ಷೀರ ಸಹಕಾರಿ ಪ್ರಶಸ್ತಿ ಪುರಸ್ಕೃತ ಉದ್ಯಮಿ ಅಬೂಬಕ್ಕರ್ ಸಿದ್ದಿಕ್ ಹಾಜಿ ಖಂಡಿಗೆ ಅವರನ್ನು ಅಭಿನಂದಿಸಲಾಯಿತು.
ಎಣ್ಮಕಜೆ ಪಂಚಾಯಿತಿ ಕ್ಷೇಮಕಾರ್ಯ ಸ್ಥಾಯೀ ಸಮಿತಿ ಅಧ್ಯಕ್ಷೆ ಚಂದ್ರಾವತಿ ಯಂ., ಬ್ಲಾಕ್ ಪಂಚಾಯಿತಿ ಸದಸ್ಯೆ ಸಫ್ರೀನ, ಗ್ರಾ.ಪಂ.ಸದಸ್ಯರುಗಳಾದ ಪ್ರೇಮಾ, ಪುಷ್ಪಾ, ಮಂಜೇಶ್ವರ ಕ್ಷೀರಾಭಿವೃದ್ಧಿ ವಿಸ್ತರಣಾಧಿಕಾರಿ ಅಜಯನ್ ಎಸ್., ಮಿಲ್ಮಾ ಉಸ್ತುವಾರಿ ವನೀಶ್ ಎಂ.ಬಿ., ಕೆ.ಎಸ್.ಎಸ್.ಸುಳ್ಯ ಅಧ್ಯಕ್ಷ ವೈ.ನಾರಾಯಣ, ಪೆರ್ಲ ಅಧ್ಯಕ್ಷ, ಪ್ರಸಾದ್ ಕುಮಾರ್, ಪೆರ್ಲ ಸೇವಾ ಸಹಕಾರಿ ಸಂಘ ನಿವೃತ್ತ ಕಾರ್ಯದರ್ಶಿ ಶಂಕರ ನಾರಾಯಣ ಭಟ್ ಉಪಸ್ಥಿತರಿದ್ದರು.
ಸಹಕಾರಿ ಸಂಘದ ಹಿರಿಯ ಪ್ರಮೋಟರ್ ಸೋಮಶೇಖರ್ ಜೆ.ಯಸ್. ಸ್ವಾಗತಿಸಿ, ಶ್ರೀಧರ ಕೆ. ನಿರೂಪಿಸಿ ವಂದಿಸಿದರು.




