ಕೊಮ್ಮಂಗಳ ದೈವಗಳ ಪ್ರತಿಷ್ಠೆ, ದೈವಗಳ ಕೋಲ ಸಂಪನ್ನ
0
ಮಾರ್ಚ್ 12, 2019
ಉಪ್ಪಳ: ಪೈವಳಿಕೆ ಚಿಪ್ಪಾರು ಗ್ರಾಮದ ಕೊಮ್ಮಂಗಳದ ಕೊರತಿಪಾದೆಯಲ್ಲಿ ನೂತನವಾಗಿ ನಿರ್ಮಿಸಿದ ಕುಲಾಲರ ಸಾಲಿಯಾನ್ ಕುಟುಂಬದ ತರವಾಡು ಮನೆಯ ಬ್ರಹ್ಮಕಲಶೋತ್ಸವ ಮತ್ತು ದೈವಗಳ ಕೋಲ, ತಂಬಿಲದೊಂದಿಗೆ ಸಂಪನ್ನಗೊಂಡಿತು.
ಗಣಪತಿ ಪೂಜೆ, ಸಪ್ತಶುದ್ಧಿ, ಗೋಪೂಜೆ, ಪುಣ್ಯಾಹ ಋತ್ವಿಸ್ವರಣ, ವಾಸ್ತುಪೂಜೆ, ವಾಸ್ತುಹೋಮ, ರಾಕ್ಷೋಘ್ನ ಹೋಮ, ವಾಸ್ತುಬಲಿ, ಬಿಂಬ ಪೀಠ ಶುದ್ಧಿ, ಅಧಿವಾಸ ನಡೆಯಿತು. ಕಲಶ ಪ್ರತಿಷ್ಠೆ, ಗಣಪತಿ ಹೋಮ, ಸಾನಿಧ್ಯ ಪ್ರತಿಷ್ಠಾಂಗ ಹೋಮ, ಕಲಶ ಪೂಜೆ, ದೈವದ ಪ್ರತಿಷ್ಠೆ, ಕಲಶಾಭಿಷೇಕ, ತಂಬಿಲ ಪೂಜೆ ಮೊದಲಾದ ವೈದಿಕ ಕಾರ್ಯಕ್ರಮಗಳು ಹಾಗೂ ತರವಾಡು ಗೃಹಪ್ರವೇಶ ವೇದಮೂರ್ತಿ ರಾಮಮೂರ್ತಿ ಭಟ್ ಕುರಿಯ ಅವರ ನೇತೃತ್ವದಲ್ಲಿ ನಡೆಯಿತು.
ದೈವಗಳ ಕೋಲ ಮತ್ತು ತಂಬಿಲ ದೈವಗಳ ಸಾನ್ನಿಧ್ಯವನ್ನು ಮನವರಿಕೆ ಮಾಡುವ ಮೂಲಕ ಕುಟುಂಬಸ್ಥರಲ್ಲಿ ಭಯ ಭಕ್ತಿಯನ್ನು ಮೂಡಿಸಿತು.
ತರವಾಡು ಮನೆಯ ಯಜಮಾನ ವಿಶ್ರಾಂತ ಗ್ರಾಮಾಧಿಕಾರಿ ಸಿ.ನಾರಾಯಣ ಸಾಲಿಯಾನ್ ಅವರ ಉಸ್ತುವಾರಿಯಲ್ಲಿ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆಯಿತು.

