ಶಡ್ರಂಪಾಡಿ ಶ್ರೀಕ್ಷೇತ್ರದಲ್ಲಿ ಹೊರಾಂಗಣಕ್ಕೆ ಕಾಂಕ್ರೀಟೀಕರಣ
0
ಮಾರ್ಚ್ 12, 2019
ಕುಂಬಳೆ: ಸೂರಂಬೈಲು ಸಮೀಪದ ಶಡ್ರಂಪಾಡಿ ಶ್ರೀಗೋಪಾಲಕೃಷ್ಣ ದೇವಸ್ಥಾನದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ವಿವಿಧ ಚಟುವಟಿಕೆಗಳು ನಡೆಯುತ್ತಿದ್ದು, ಕ್ಷೇತ್ರ ಹೊರಾಂಗಣಕ್ಕೆ ಕಾಂಕ್ರೀಟೀಕರಣ ಕಾಮಗಾರಿ ಅನಂತಪುರದ ಶ್ರೀಧೂಮಾವತಿ ಫ್ರೆಂಡ್ಸ್ ಕ್ಲಬ್ ನ ನೇತೃತ್ವದಲ್ಲಿ ಹಾಗೂ ಎಡನಾಡು ಗ್ರಾಮದ ಆಸ್ತಿಕ ಬಾಂಧವರಿಂದ ಶ್ರಮದಾನದ ಮೂಲಕ ಸೋಮವಾರ ನಡೆಯಿತು.




