ಬಿಜೆಪಿ ಪಕ್ಷ. ಕಚೇರಿಯಲ್ಲಿ ಮಹಿಳಾ ದಿನಾಚರಣೆ; ನಿವೃತ್ತ ಶಿಕ್ಷಕಿಗೆ ಗೌರವ
0
ಮಾರ್ಚ್ 12, 2019
ಪೆರ್ಲ: ಎಣ್ಮಕಜೆ ಗ್ರಾ.ಪಂ. ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ನಡೆದ ಸಮಾರಂಭದಲ್ಲಿ ನಿವೃತ್ತ ಶಿಕ್ಷಕಿ ಶಕುಂತಲಾ ವೈ.ಅವರನ್ನು ಗೌರವಿಸಲಾಯಿತು.
ಮಹಿಳಾ ಮೋರ್ಚಾ ಅಧ್ಯಕ್ಷೆ ಶ್ಯಾಮಲ ಪತ್ತಡ್ಕ ಅಧ್ಯಕ್ಷತೆ ವಹಿಸಿದರು.ಡಾ.ಸ್ವಪ್ನಾ ಜೆ.ಉಕ್ಕಿನಡ್ಕ, ಜಿಲ್ಲಾ ಪಂಚಾಯಿತಿ ಸದಸ್ಯೆ ಪುಷ್ಪಾ ಅಮೆಕ್ಕಳ ಶುಭ ಹಾರೈಸಿದರು.ವಸಂತಿ ಕೆ.ಸ್ವಾಗತಿಸಿ ಶರ್ಮಿಳಾ ಸುಮಿತ್ ರಾಜ್ ವಂದಿಸಿದರು.




