ಚುನಾವಣೆ ಸಲಲಿತತೆಗೆ ಪೂರಕ ವಿವಿಪಾಟ್
0
ಮಾರ್ಚ್ 17, 2019
ಕಾಸರಗೋಡು: ಲೋಕಸಭೆ ಚುನಾವಣೆಯನ್ನು ಸುಧಾರಿತಗೊಳಿಸುವ ನಿಟ್ಟಿನಲ್ಲಿ ವಿವಿಪಾಟ್ ಪೂರಕವಾಗಲಿದೆ.
ಜಿಲ್ಲೆಯ 968 ಮತಗಟ್ಟೆಗಳಲ್ಲೂ ವಿವಿಪಾಟ್(ವೋಟರ್ ಪೆರಿಫೈ ಯೇಬಲ್ ಪೇಪರ್ ಆಡಿಟ್ ಟ್ರಯಲ್) ಮೆಷಿನ್ ಬಳಸಲಾಗುವುದು.
ಇದಕ್ಕಾಗಿ ಇ.ಸಿ.ಎಲ್.(ಇಲೆಕ್ಟ್ರನಿಕ್ ಕಾರ್ಪರೇಷನ್ ಆಫ್ ಇಂಡಿಯಾ) ಹೈದರಾಬಾದ್ ನಲ್ಲಿ ನಿರ್ಮಿಸಿರುವ 1342 ಮತಯಂತ್ರಗಳು ಪ್ರಾಥಮಿಕ ತಪಾಸಣೆ ಮುಗಿಸಿ ಕಾಞÂಂಗಾಡ್ ನಲ್ಲಿರುವ ಸೂಕ್ಷ್ಮ ಕೇಂದ್ರದಲ್ಲಿ ಪೊಲೀಸ್ ಭದ್ರತೆಯಲ್ಲಿ ದಾಸ್ತಾನಿರಿರಿಸಲಾಗಿದೆ. ಸ್ಪರ್ಧೆಯಲ್ಲಿರುವ ಅಭ್ಯರ್ಥಿಗಳ ಅಂತಿಮ ಪಟ್ಟಿ ಪ್ರಕಟಗೊಳ್ಳುವುದರೊಂದಿಗೆ, ಬ್ಯಾಲೆಟ್ ಪೇಪರ್ ಗಳು ಮುದ್ರಿಸಿ, ವಿಧಾನಸಭೆ ಮಟ್ಟದ ಅಧಿಕಾರಿಗಳು ಮತಯಂತ್ರ ಸಿದ್ಧಗೊಳಿಸುವ ಕಾಯಕ ನಡೆಸುವರು. ವಿವಿಪಾಟ್ ಮೆಷಿನ್ ಮೂಲಕ ಮತದಾರ ತಾನು ಬಯಸಿದ ಅಭ್ಯರ್ಥಿಗೆ ಮತದಾನ ನಡೆಸಲಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಸಾಧ್ಯವಾಗುತ್ತದೆ.
ಕಳೆದ ಬಾರಿಯ ಲೋಕಸಭೆ ಚುನಾವಣೆ ವೇಳೆ ಪ್ರಥಮಬಾರಿಗೆ ವಿವಿಪಾಟ್ ಮೆಷಿನ್ ಬಳಕೆ ನಡೆದಿತ್ತು. ಈ ವರ್ಷ ಎಲ್ಲ ಕ್ಷೇತ್ರಗಳಲ್ಲೂ ವಿವಿಪಾಟ್ ಬಳಸಲಾಗುವುದು ಎಂದು ಅಧಿಕಾರಿಗಳು ತಿಳಿಸಿರುವರು. ಮತದಾರ ಮತಚಲಾವಣೆ ನಡೆಸಿದ ತಕ್ಷಣ ಬಳಿಯಲ್ಲೇ ಇರುವ ವಿವಿಪಾಟ್ ಮೆಷಿನ್ ನಲ್ಲಿ ಯಾವ ಅಭ್ಯರ್ಥಿಗೆ ಮತದಾನನಡೆದಿದೆ ಎಂಬುದನ್ನು ಅವರ ಹೆಸರು, ಸೀರಿಯಲ್ ನಂಬ್ರ, ಚಿಹ್ನೆ ಇತ್ಯಾದಿ 8 ಸೆಕೆಂಡ್ ಕಾಲ ಸ್ಕ್ರೀನ್ ನಲ್ಲಿ ಕಾಣಬಹುದು. 8 ಸೆಕೆಂಡ್ ಗಳ ನಂತರ ಇದರ ಸ್ಲಿಪ್ ಮೆಷಿನ್ನೊಂದಿಗಿರುವ ಬಾಕ್ಸ್ ಗೆ ಬಂದು ಬೀಳಲಿದೆ. ಹೀಗೆ ಪ್ರತಿ ಮತದಾರನೂ ಸ್ಲಿಪ್ ವಿವಿಪಾಟ್ ಮೆಷಿನ್ ನ ಬಾಕ್ಸ್ ನಲ್ಲಿ ದಾಖಲೆಯಾಗಲಿದೆ. ವಿವಿಪಾಟ್ ಮೆಷಿನ್ ನ ಜೊತೆಗೆ ನಿಯಂತ್ರಣ ಯೂನಿಟ್ ಕೂಡ ಇರುವುದು.ಇದರಲ್ಲಿ ವಿವಿಪಾಟ್ ನ ಚಾರ್ಜ್ ಇರುವುದು.
ಒಂದು ವಿಧಾನಸಭೆ ಕ್ಷೇತ್ರದಲ್ಲಿ ಕನಿಷ್ಠ ಒಂದು ಮತಗಟ್ಟೆಯ ವಿವಿಪಾಟ್ ಮೆಷಿನ್‍ನ ಲಿಪ್ ಗಳ ಗಣನೆ ಮಾಡಬೇಕು. ಮತಗಣನೆ ಆರಂಭಕ್ಕೆ ಮುನ್ನ ಕಡ್ಡಾಯವಾಗಿ 50ಮಂದಿ ಏಜೆಂಟರ ಮುಂಭಾಗದಲ್ಲಿ ಮೋಕ್ ಪೋಲಿಂಗ್ ನಡೆಸಬೇಕು. ಈ ವರ್ಷದ ಲೋಕಸಭೆ ಚುನಾವಣೆ ಹೆಚ್ಚುವರಿ ಸುಧಾರಿತಗೊಳ್ಳಲು ವಿವಿಪಾಟ್ ಬಹು ಉಪಯೋಗಿಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

